Wednesday, 27th November 2024

Akhil Akkineni: ಅಕ್ಕಿನೇನಿ ಕುಟುಂಬದಲ್ಲಿ ಡಬಲ್‌ ಸಂಭ್ರಮ; ನಾಗಾರ್ಜುನ ಕಿರಿ ಮಗನಿಗೂ ಮದ್ವೆ ಫಿಕ್ಸ್‌! ಗುಟ್ಟಾಗಿ ನಡೀತು ಎಂಗೇಜ್ಮೆಂಟ್‌

ಹೈದರಾಬಾದ್:‌ ನಟ ನಾಗಾರ್ಜುನ(Nagarjuna Akkineni) ತೆಲುಗು ಚಿತ್ರರಂಗದ ಪ್ರಸಿದ್ಧ ಸ್ಟಾರ್‌ ನಟ. ಅವರ ಮಕ್ಕಳಾದ ನಾಗ ಚೈತನ್ಯ ಮತ್ತು ಅಖಿಲ್(Akhil Akkineni) ಕೂಡ ಚಿತ್ರರಂಗದಲ್ಲಿ ತಮ್ಮದೇ ಹೆಸರು ಮಾಡಿಕೊಂಡಿದ್ದಾರೆ. ನಾಗ ಚೈತನ್ಯ(Naga chaitanya) ಅವರು ತೆಲುಗಿನಲ್ಲಿ ನಾಯಕ ನಟನಾಗಿ ಹೊರಹೊಮ್ಮುತ್ತಿದ್ದಾಗ ನಟಿ ಸಮಂತಾ(samantha ruth prabhu) ಅವರನ್ನು ಪ್ರೀತಿಸುತ್ತಿದ್ದರು. ನಂತರ ಮದುವೆ ಕೂಡ ಆದರು ಈಗ ಮತ್ತೆ ಅವರಿಬ್ಬರು ಬೇರ್ಪಟ್ಟು ಅಕ್ಕಿನೇನಿ ಕುಟುಂಬಕ್ಕೆ ಮತ್ತೊಬ್ಬ ಹೊಸ ಸೊಸೆ ಬರುತ್ತಿದ್ದಾರೆ.

ಈ ವೇಳೆ ನಾಗ ಚೈತನ್ಯ ತೆಲುಗು ಮತ್ತು ಹಿಂದಿಯಲ್ಲಿ ನಟಿಸಿ ಬ್ಯುಸಿಯಾಗಿರುವ ಶೋಭಿತಾ ಧೂಳಿಪಾಲ ಅವರನ್ನು ಮದುವೆಯಾಗಲು ನಿರ್ಧರಿಸಿದ್ದಾರೆ. ವಿಷಯ ತಿಳಿದ ನಾಗಾರ್ಜುನ ಈಗ ಅವರ ಮದುವೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರಿಬ್ಬರೂ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ. ಮುಂದಿನ ಡಿಸೆಂಬರ್‌ನಲ್ಲಿ ಇಬ್ಬರ ಮದುವೆಯೂ ನಡೆಯಲಿರುವುದರಿಂದ ಮದುವೆಯ ಶಾಸ್ತ್ರಗಳು ಅದ್ದೂರಿಯಾಗಿ ನಡೆಯುತ್ತಿದೆ.

ಇದೀಗ ಇದೇ ಅಕ್ಕಿನೇನಿ ಕುಟುಂಬದ ಫ್ಯಾ,ಮಿಲಿಯಿಂದ ಮತ್ತೊಂದು ಖುಷಿ ವಿಚಾರ ಹೊರ ಬಿದ್ದಿದ್ದು, ಟಾಲಿವುಡ್ ನಟ ನಾಗಾರ್ಜುನ ಅವರ ಪುತ್ರ ಅಖಿಲ್ ಅಕ್ಕಿನೇನಿ (Akhil Akkineni) ಅವರು ಝೈನಾಬ್ ರಾವಡ್ಜಿ (Zainab Ravdjee) ಅವರೊಂದಿಗೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ನಾಗಾರ್ಜುನ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಯುವ ಜೋಡಿಗೆ ಶುಭ ಹಾರೈಸುವಂತೆ ಕೇಳಿದ್ದಾರೆ.

ಸ್ವತ: ಅಕ್ಕಿನೇನಿ ನಾಗಾರ್ಜುನ ಅವರೇ ಈ ಕುರಿತು ಮಾಹಿತಿ ಹಂಚಿಕೊಂಡಿದ್ದು, ‘ನಮ್ಮ ಮಗನ ನಿಶ್ಚಿತಾರ್ಥ ಆಗಿರುವ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವುದು ನಮಗೆ ಸಂತೋಷವಾಗುತ್ತಿದೆ. ಅಖಿಲ್ ಅಕ್ಕಿನೇನಿ ಹಾಗೂ ನಮ್ಮ ಸೊಸೆಗೆ ಝೈನಾಬ್ ರಾವಡ್ಜಿ ಅವರ ನಿಶ್ಚಿತಾರ್ಥವನ್ನು ನೆರವೇರಿಸಿದ್ದೇವೆ. ಝೈನಾಬ್ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತಿರುವುದಕ್ಕೆ ಅತ್ಯಂತ ಸಂತಸವಾಗುತ್ತಿದೆ. ಯುವ ದಂಪತಿಗಳನ್ನು ಅಭಿನಂದಿಸಲು ದಯವಿಟ್ಟು ನಮ್ಮೊಂದಿಗೆ ಸೇರಿ ಮತ್ತು ಅವರಿಗೆ ಪ್ರೀತಿ, ಸಂತೋಷ ಮತ್ತು ನಿಮ್ಮ ಆಶೀರ್ವಾದ ನೀಡಿ ಹಾರೈಸಬೇಕು’ ಎಂದು ಮನವಿ ಮಾಡಿದ್ದಾರೆ.

ಸೈಲಂಟ್ ಆಗಿಯೇ ತಮ್ಮ 2ನೇ ಮಗ ಅಖಿಲ್‌ಗೂ ಗುಟ್ಟಾಗಿಯೇ ನಿಶ್ಚಿತಾರ್ಥ ನೆರವೇರಿಸಿರುವ ಅಕ್ಕಿನೇನಿ ಸೋಷಿಯಲ್ ಮೀಡಿಯಾದಲ್ಲಿ ಅಖಿಲ್‌ ಹಾಗೂ ಝೈನಾಬ್ ರಾವಡ್ಜಿ ಅವರ ಫೋಟೋಗಳನ್ನು ಅಧಿಕೃತವಾಗಿ ಹಂಚಿಕೊಂಡಿದ್ದು, ಸದ್ಯ ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ಅಕ್ಕಿನೇನಿ ತಮ್ಮ ಇಬ್ಬರ ಮಕ್ಕಳನ್ನು ಒಂದೇ ಮಂಟಪದಲ್ಲಿ ಮಾಡುತ್ತೀರಾ ಎಂಬ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

ಒಟ್ಟಾರೆ ಸ್ಟಾರ್ ನಟಿ ಶೋಭಿತಾ ಧೂಲಿಪಾಲ್ ಜೊತೆಗೆ ನಟ ನಾಗಚೈತನ್ಯ ಮದುವೆಗೆ ಸಕಲ ಸಿದ್ಧತೆಗಳ ಮಾಡಿಕೊಳ್ಳುವ ಮಧ್ಯೆ ಎರಡನೇ ಮಗನ ಮದುವೆ ತಯಾರಿಯಲ್ಲಿ ಅಕ್ಕಿನೇನಿ ನಾಗಾರ್ಜುನ ಸಖತ್ ಬ್ಯುಸಿಯಾಗಿದ್ದಾರೆ. ಇನ್ನು ಈ ಹಿಂದೆ ಶ್ರಿಯಾ ಭೂಪಾಲ್ ಎಂಬುವವರ ಜೊತೆ ಅಖಿಲ್ ನಿಶ್ಚಿತಾರ್ಥ ನಡೆದಿತ್ತು. ಆದರೆ ಕೆಲ ಮನಸ್ತಾಪಗಳಿಂದ ಈ ಜೋಡಿ ಬ್ರೇಕಪ್‌ ಮಾಡಿಕೊಂಡರು. ಈಗ ಝೈನಾಬ್ ಜೊತೆ ಅಖಿಲ್ ಎಂಗೇಜ್ ಆಗಿದ್ದಾರೆ.

ಈ ಸುದ್ದಿಯನ್ನೂ ಓದಿ: Daali Dhananjaya: ಝೀಬ್ರ ಸೂಪರ್ ಹಿಟ್; ತೆಲುಗಿನಲ್ಲಿ ಡಾಲಿಗೆ ಫುಲ್‌ ಡಿಮ್ಯಾಂಡ್; ಮೆಗಾಸ್ಟಾರ್ ಚಿರಂಜೀವಿ ಭವಿಷ್ಯ ನಿಜವಾಗುತ್ತಾ?