ಮಧ್ಯಪ್ರದೇಶ: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿ ದಲಿತ ಯುವಕನನ್ನು ಗ್ರಾಮದ ಸರಪಂಚ್ ಮತ್ತು ಅವರ ಕುಟುಂಬ ಸದಸ್ಯರು ಸೇರಿ ಕ್ರೂರವಾಗಿ ಥಳಿಸಿ ಹತ್ಯೆಗೈದಿರುವ ಘಟನೆ ವರದಿಯಾಗಿದೆ. ಇಂದ್ರಘರ್ ಗ್ರಾಮದ ಹೊಲಕ್ಕೆ ನೀರುಣಿಸುವ ವಿಚಾರವಾಗಿ ಅವರ ನಡುವೆ ವಾಗ್ವಾದ ಶುರುವಾಗಿತ್ತು. ಕೊನೆಗೂ ಇದು ಮಾರಣಾಂತಿಕ ಹಲ್ಲೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.
ಈ ವೈರಲ್ ವಿಡಿಯೊದಲ್ಲಿ ಸರಪಂಚ್ ಪದಮ್ ಸಿಂಗ್ ಧಾಕಡ್ ಮತ್ತು ಅವರ ಕುಟುಂಬ ಸದಸ್ಯರು 28 ವರ್ಷದ ನಾರದ್ ಜಾತವ್ ಅವರನ್ನು ನಿರ್ದಯವಾಗಿ ಥಳಿಸಿ ಹಿಂಸಾತ್ಮಕವಾಗಿ ಹಲ್ಲೆ ನಡೆಸಿದ್ದಾರೆ.
⚠️Trigger Warning: Disturbing Visuals.
— Hate Detector 🔍 (@HateDetectors) November 27, 2024
In #MadhyaPradesh's #Shivpuri, a 28-year-old #Dalit man was beaten to death by a sarpanch and his family members as the victim irrigated through borewell in #Indiragarh area. pic.twitter.com/VjB5fmX47W
ವರದಿ ಪ್ರಕಾರ, ಸರಪಂಚ್ ಪದಮ್ ಸಿಂಗ್ ಧಾಕಾಡ್ ಅವರು ತಮ್ಮ ಕುಟುಂಬ ಸದಸ್ಯರಾದ ಬೇತಾಲ್ ಧಾಕಡ್, ಜಸ್ವಂತ್ ಧಾಕಡ್, ಅವಧೇಶ್ ಧಾಕಡ್, ಅಂಕೇಶ್ ಧಾಕಡ್, ಮೊಹರ್ ಪಾಲ್ ಧಾಕಡ್, ದಖಾ ಬಾಯಿ ಧಾಕಾಡ್ ಮತ್ತು ವಿಮಲ್ ಧಾಕಾಡ್ ಅವರೊಂದಿಗೆ ಹೊಲಗಳಿಗೆ ನೀರು ಹಾಕುವಾಗ ನಾರದ್ ಅಲ್ಲಿಗೆ ಬಂದಿದ್ದಾರೆ. ಆಗ ಈ ಗುಂಪು ನಾರದ್ ಜಾತವ್ ಅವರ ಮೇಲೆ ನಿಂದನೆಗಳನ್ನು ಮಾಡಲು ಶುರುಮಾಡಿದ್ದಾರಂತೆ. ಇದು ಶೀಘ್ರದಲ್ಲೇ ಹಿಂಸಾತ್ಮಕ ದಾಳಿಗೆ ಕಾರಣವಾಯಿತು. ದೊಣ್ಣೆಗಳನ್ನು ಹಿಡಿದಿದ್ದ ಅವರು ನಾರದ್ ಜಾತವ್ ಅವರನ್ನು ತೀವ್ರವಾಗಿ ಥಳಿಸಿದ್ದಾರೆ. ಇದರಿಂದಾಗಿ ನಾರದ್ ಜಾತವ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಅವರ ಕುಟುಂಬವು ಶಿವಪುರಿ ವೈದ್ಯಕೀಯ ಕಾಲೇಜಿಗೆ ಕರೆತಂದರೂ ಕೂಡ ಅವರು ತೀವ್ರ ಗಾಯಗೊಂಡು ರಕ್ತಸ್ರಾವವಾಗಿ ಸಾವನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.
ಇದನ್ನೂ ಓದಿ:ವಿದ್ಯಾರ್ಥಿ ಹೇಳಿದ ಸುಳ್ಳಿನಿಂದಾಗಿ ಶಿಕ್ಷಕನ ಶಿರಚ್ಛೇದ; ವಿಚಾರಣೆ ವೇಳೆ ಶಾಕಿಂಗ್ ಸಂಗತಿ ಬಯಲು
ಸುಭಾಷ್ಪುರ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ತನಿಖೆಯಲ್ಲಿ ಮಾರ್ಗ ಮತ್ತು ಬೋರ್ವೆಲ್ಗೆ ಸಂಬಂಧಿಸಿದ ವಿಚಾರಕ್ಕೆ ದೀರ್ಘಕಾಲದಿಂದ ವಿವಾದ ನಡೆಯುತ್ತಿತ್ತು. ನಾರದ್ ತೆಗೆದುಹಾಕಿದ ಬೋರ್ವೆಲ್ ಪೈಪ್ಲೈನ್ ಬಗ್ಗೆ ಸರಪಂಚ್ ಕುಟುಂಬ ಆಗಾಗ ವಾಗ್ವಾದ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.