Wednesday, 27th November 2024

NZ vs ENG: ಕಿವೀಸ್‌-ಇಂಗ್ಲೆಂಡ್‌ ಟೆಸ್ಟ್‌ ಸರಣಿಯ ವಿಶೇಷ ಟ್ರೋಫಿ ಅನಾವರಣ; ಏನಿದರ ವಿಶೇಷತೆ?

ಕ್ರೈಸ್ಟ್‌ಚರ್ಚ್‌: ನಾಳೆಯಿಂದ(ಗುರುವಾರ ನ.28) ಆರಂಭವಾಗಲಿರುವ ನ್ಯೂಜಿಲೆಂಡ್(NZ vs ENG)​ ಮತ್ತು ಇಂಗ್ಲೆಂಡ್​ನ ದಿವಂಗತ ದಿಗ್ಗಜ ಬ್ಯಾಟರ್​ಗಳಾದ ಮಾರ್ಟಿನ್​ ಕ್ರೋವ್​(Martin Crowe) ಮತ್ತು ಗ್ರಹಾಂ ಥೋರ್ಪೆ(Graham Thorpe) ಸ್ಮರಣಾರ್ಥವಾಗಿ ನಡೆಯುವ ಟೆಸ್ಟ್‌ ಸರಣಿಯ ಟ್ರೋಫಿಯನ್ನು ನಾಯಕರಾದ ಬೆನ್‌ ಸ್ಟೋಕ್ಸ್‌ ಮತ್ತು ಟಾಮ್‌ ಲ್ಯಾಥಮ್‌ ಬುಧವಾರ ಅನಾವರಣ ಮಾಡಿದ್ದಾರೆ. ಈ​ ಸರಣಿಗೆ ಕ್ರೋವ್​-ಥೋರ್ಪೆ ಟ್ರೋಫಿ(Crowe-Thorpe Trophy) ಎಂದು ನಾಮಕರಣ ಮಾಡಲಾಗಿದೆ. ಒಟ್ಟು ಮೂರು ಪಂದ್ಯಗಳ ಸರಣಿ ಇದಾಗಿದೆ.

ಟ್ರೋಫಿಯ ವಿಶೇಷತೆ ಎಂದರೆ ಮಾರ್ಟಿನ್​ ಕ್ರೋವ್​ ಮತ್ತು ಗ್ರಹಾಂ ಥೋರ್ಪೆ ಬಳಿಸಿದ ಬ್ಯಾಟ್​ಗಳಿಂದ ಟ್ರೋಫಿಯನ್ನು ರಚಿಸಲಾಗಿದೆ. ಕ್ರೋವ್​ 1994ರಲ್ಲಿ ಲಾರ್ಡ್ಸ್​ನಲ್ಲಿ ಇಂಗ್ಲೆಂಡ್​ ವಿರುದ್ಧ ಮತ್ತು ಥೋರ್ಪೆ 1997ರಲ್ಲಿ ಆತಿಥೇಯ ಕಿವೀಸ್​ ವಿರುದ್ಧ ಸತತ 2 ಶತಕ ಸಿಡಿಸಿದ ಬ್ಯಾಟ್​ ಇದಾಗಿದೆ. ಉಭಯ ಆಟಗಾರರ ಬ್ಯಾಟ್‌ನ ಮುಂಭಾಗದ ತುಂಡುಗಳನ್ನು ಜೋಡಿಸಿ ಟ್ರೋಫಿ ರೀತಿ ವಿನ್ಯಾಸ ಗೊಳಿಸಲಾಗಿದೆ. ಈ ಹೆಸರಿನ ಟ್ರೋಫಿಗಾಗಿ ನಡೆಯಲಿರುವ ಮೊದಲ ಸರಣಿ ಎನಿಸಿದೆ.

ಮಾರ್ಟಿನ್​ ಕ್ರೋವ್​ ನ್ಯೂಜಿಲ್ಯಾಂಡ್‌​ ಪರ 77 ಟೆಸ್ಟ್​ಗಳಲ್ಲಿ 17 ಶತಕಗಳ ಸಹಿತ 5,444 ರನ್​ ಬಾರಿಸಿದ್ದಾರೆ. ಥೋರ್ಪೆ ಇಂಗ್ಲೆಂಡ್​ ಪರ 100 ಟೆಸ್ಟ್​ಗಳನ್ನಾಡಿ 6,744 ರನ್‌ ಬಾರಿಸಿದ್ದಾರೆ. ಈ ವೇಳೆ 16 ಶತಕ ಸಿಡಿಸಿದ್ದಾರೆ.

ಸರಣಿಯ ವೇಳಾಪಟ್ಟಿ

ಮೊದಲ ಟೆಸ್ಟ್- ನ.28 ರಿಂದ ಡಿ.2, ತಾಣ: ಕ್ರೈಸ್ಟ್‌ಚರ್ಚ್‌

ದ್ವಿತೀಯ ಟೆಸ್ಟ್‌- ಡಿ.6 ರಿಂದ ಡಿ.10, ತಾಣ: ವೆಲ್ಲಿಂಗ್ಟನ್‌

ಮೂರನೇ ಟೆಸ್ಟ್‌-ಡಿ.14 ರಿಂದ ಡಿ.18, ತಾಣ: ಹ್ಯಾಮಿಲ್ಟನ್‌

ಇದನ್ನೂ ಓದಿ PAK vs ZIM: 53 ಎಸೆತಗಳಲ್ಲಿ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ಸೈಮ್‌ ಆಯುಬ್‌!

ICC Rankings: ಬುಮ್ರಾ ನಂ.1 ಟೆಸ್ಟ್‌ ಬೌಲರ್‌

ದುಬೈ: ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದಲ್ಲಿ ಒಟ್ಟು 8 ವಿಕೆಟ್‌ ಕಿತ್ತು ಅಮೋಘ ಬೌಲಿಂಗ್‌ ಪ್ರದರ್ಶನ ತೋರಿದ್ದ ಭಾರತೀಯ ವೇಗಿ ಜಸ್‌ಪ್ರೀತ್‌ ಬುಮ್ರಾ(883) ನೂತನ ಟೆಸ್ಟ್‌ ಬೌಲಿಂಗ್‌ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಇದೇ ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ್ದ ಯಶಸ್ವಿ ಜೈಸ್ವಾಲ್‌ 2 ಸ್ಥಾನಗಳ ಜಿಗಿತ ಕಂಡು ಬ್ಯಾಟ್ಸ್‌ಮನ್‌ ರ್‍ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ ಸಾಧನೆಗೈದಿದ್ದಾರೆ. ಸದ್ಯ ಅವರು 825 ರೇಟಿಂಗ್‌ ಅಂಕದೊಂದಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಶ್ರೇಷ್ಠ ಬೌಲಿಂಗ್‌ ಪ್ರದರ್ಶನ ತೋರಿದ್ದ ವೇಳೆ ಜಸ್‌ಪ್ರೀತ್‌ ಬುಮ್ರಾ ಅಗ್ರಸ್ಥಾನಕ್ಕೇರಿದ್ದರು. ಇದಾದ ಬಳಿಕ ನ್ಯೂಜಿಲ್ಯಾಂಡ್‌ ವಿರುದ್ಧದ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲವಾದ ಕಾರಣ ಅಗ್ರಸ್ಥಾನದಿಂದ ಕೆಳಗಿಳಿದು ಮೂರನೇ ಸ್ಥಾನ ಪಡೆದಿದ್ದರು. ಇದೀಗ ಮತ್ತೆ ಅಗ್ರಸ್ಥಾನಕ್ಕೆ ಮರಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಹಾದಿಯಲ್ಲಿ ದಕ್ಷಿಣ ಆಫ್ರಿಕಾದ ಕಗಿಸೊ ರಬಾಡ(872) ಮತ್ತು ಆಸ್ಟ್ರೇಲಿಯಾದ ಜೋಶ್‌ ಹ್ಯಾಜಲ್‌ವುಡ್‌(860) ಅವರನ್ನು ಹಿಂದಿಕ್ಕಿದ್ದಾರೆ.