ಚಿಂತಾಮಣಿ: ಇತ್ತೀಚಿಗೆ ಚಿಂತಾಮಣಿ ತಾಲ್ಲೂಕು, ಕರ್ನಾಟಕ ಸರ್ಕಾರಿ ನೌಕರರ ಸಂಘದ ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಆ ಒಂದು ಚುನಾವಣೆಯಲ್ಲಿ ಶಿಕ್ಷಣ ಇಲಾಖೆಯಿಂದ ಜೆ ವಿ ಕೃಷ್ಣ ರವರು ಅವಿರೋಧ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳಿ ಅವಿರೋಧ ಆಯ್ಕೆಗೊಂಡ ಜೆ ವಿ ಕೃಷ್ಣ ಅವರಿಗೆ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುರುಗಮಲ್ಲ ಜೆ ಮುಸ್ತಫಾ ರವರು ಮಾತನಾಡಿ ಸರಳ ಸಜ್ಜನಿಕೆ ವ್ಯಕ್ತಿತ್ವ ಹೊಂದಿರುವ ಜೆ ವಿ ಕೃಷ್ಣ ರವರು ಅವರಿಗೆ ಲಭಿಸಿರುವ ಹುದ್ದೆಗೆ ಸೂಕ್ತ ವ್ಯಕ್ತಿಯಾಗಿದ್ದು ಸರ್ಕಾರಿ ನೌಕರರ ಸಮಸ್ಯೆಗಳು ಬಗೆಹರಿಸಿ ಅವರಿಗೆ ಅನುಕೂಲ ಮಾಡಿಕೊಡಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ಆಸೀಫ್, ನಾಗರಾಜ್, ನಾಗಾರ್ಜುನ್, ಕಾರ್ತಿಕ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಬಿ ಉಮಾದೇವಿ, ಕಚೇರಿಯ ಅಧೀಕ್ಷಕರಾದ ಸುಧಾರಾಣಿ, ಬೀಬೀ ಜಾನ್, ರಘು ನಂದನ್ ಕೆ ಎಸ್, ಮಾಧವಿ, ಬಾಬು ಕೆ ಇದ್ದರು.
ಇದನ್ನೂ ಓದಿ: 27cbpm6karave ok