Wednesday, 27th November 2024

SMAT 2024: ‘ಒಂದೇ ಓವರ್‌ನಲ್ಲಿ 4 ಸಿಕ್ಸರ್‌’-ತಮಿಳುನಾಡು ವಿರುದ್ದ ಧೂಳೆಬ್ಬಿಸಿದ ಹಾರ್ದಿಕ್‌ ಪಾಂಡ್ಯ!

Hardik Pandya smashes 4 sixes and a boundary in one over against Tamil Nadu

ನವದೆಹಲಿ: ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಬುಧವಾರ ರಾತ್ರಿ ತಮ್ಮ ಶ್ರೇಷ್ಠ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದರು. ಅವರು ಕೇವಲ 30 ಎಸೆತಗಳಲ್ಲಿ 69 ರನ್‌ಗಳ ಚಚ್ಚಿದ್ದಾರೆ. ಹಾರ್ದಿಕ್ ಪಾಂಡ್ಯ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಬರೋಡಾ ತಂಡವು ಸೈಯದ್ ಮುಷ್ತಾಕ್ ಅಲಿ ಟ್ರೋಫಿ (SMAT 2024) ಟೂರ್ನಿಯಲ್ಲಿ ತಮಿಳುನಾಡು ವಿರುದ್ಧ ಮೂರು ವಿಕೆಟ್‌ಗಳ ರೋಚಕ ಗೆಲುವು ದಾಖಲಿಸಿದೆ. 31ನೇ ವಯುಸ್ಸಿನ ಪಾಂಡ್ಯ, ತಮ್ಮ ಸ್ಪೋಟಕ ಇನಿಂಗ್ಸ್‌ನಲ್ಲಿ 4 ಬೌಂಡರಿಗಳು ಮತ್ತು 7 ದೊಡ್ಡ ಸಿಕ್ಸರ್‌ಗಳನ್ನು ಹೊಡೆದರು.

ಪವರ್ ಹಿಟ್ಟಿಂಗ್‌ನ ಅದ್ಭುತ ಪ್ರದರ್ಶನದಲ್ಲಿ ಭಾರತ ತಂಡದ ಮಾಜಿ ನಾಯಕ ತಮ್ಮ ಸ್ಪೋಟಕ ಬ್ಯಾಟಿಂಗ್‌ ಮೂಲಕ ತಮಿಳುನಾಡು ಬೌಲರ್‌ಗಳಿಗೆ ನಡುಕ ಹುಟ್ಟಿಸಿದರು. ವಿಶೇಷವಾಗಿ ಗುರುಜನ್‌ಪ್ರೀತ್‌ ಸಿಂಗ್ ಅವರ 17ನೇ ಓವರ್‌ನಲ್ಲಿ ಹಾರ್ದಿಕ್, ಸತತ ನಾಲ್ಕು ಸಿಕ್ಸರ್‌ಗಳು ಮತ್ತು ಒಂದು ಬೌಂಡರಿಯೊಂದಿಗೆ 29 ರನ್ ಗಳಿಸಿದರು. 26ರ ಪ್ರಾಯದ ಗುರುಜನ್‌ಪ್ರೀತ್‌ ಸಿಂಗ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 2.2 ಕೋಟಿ ರೂ.ಗೆ ಖರೀದಿಸಿದೆ.

IPL 2025: ಮೆಗಾ ಹರಾಜಿನಲ್ಲಿ ಅನ್‌ಸೋಲ್ಡ್‌ ಆದ ಟಾಪ್‌ 5 ಆಟಗಾರರು!

222 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಬರೋಡಾ ತಂಡ, ಆರನೇ ಕ್ರಮಾಂಕದಲ್ಲಿ ಹಾರ್ದಿಕ್ ಪಾಂಡ್ಯ ಅವರ ಸ್ಪೋಟಕ ಬ್ಯಾಟಿಂಗ್‌ನಿಂದಾಗಿ ಕೊನೆಯ ಎಸೆತದಲ್ಲಿ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿತು. ಬರೋಡಾಕ್ಕೆ 11 ರನ್‌ಗಳ ಅಗತ್ಯವಿದ್ದಾಗ ಹಾರ್ದಿಕ್ ಪಾಂಡ್ಯ, ದುರದೃಷ್ಟವಶಾತ್ ಕೊನೆಯ ಓವರ್‌ನಲ್ಲಿ ರನ್ ಔಟ್ ಆದರು, ಆದರೆ ರಾಜ್ ಲಿಂಬಾನಿ ಮತ್ತು ಶೇತ್ ಕೊನೆಯ ಎಸೆತದಲ್ಲಿ ಬರೋಡಾ ತಂಡವನ್ನು ಗೆಲುವಿನ ದಡ ಸೇರಿಸಿದರು.

ಹಾರ್ದಿಕ್ ಪಾಂಡ್ಯ ಬಹಳಾ ಸಮಯದ ನಂತರ ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಕಾಣಿಸಿಕೊಂಡಿದ್ದಾರೆ ಮತ್ತು ಈ ಬಾರಿ ಅವರು ಹಿರಿಯ ಸಹೋದರ ಕೃಣಾಲ್ ಪಾಂಡ್ಯ ನಾಯಕತ್ವದಲ್ಲಿ ಆಡುತ್ತಿದ್ದಾರೆ. ಹಾರ್ದಿಕ್ ಟೂರ್ನಿಯಲ್ಲಿ ಇದುವರೆಗೆ ಅಗ್ರ ಫಾರ್ಮ್‌ನಲ್ಲಿದ್ದಾರೆ. ತಮಿಳುನಾಡು ವಿರುದ್ಧದ ಪಂದ್ಯಕ್ಕೂ ಮುನ್ನ ಎರಡು ಪಂದ್ಯಗಳಲ್ಲೂ ಮಿಂಚಿದ್ದರು. ಗುಜರಾತ್ ವಿರುದ್ಧ ಅಜೇಯ 74 ರನ್ ಗಳಿಸಿ ನಂತರ ಉತ್ತರಾಖಂಡ್ ವಿರುದ್ಧ 41 ರನ್ ಅಜೇಯ ಇನಿಂಗ್ಸ್‌ ಆಡಿದ್ದರು. ಈ ಪಂದ್ಯದಲ್ಲಿ, ಹಾರ್ದಿಕ್ ಮೂರು ಓವರ್‌ಗಳನ್ನು ಬೌಲ್ ಮಾಡಿ 44 ರನ್ ನೀಡಿದರು, ಆದರೆ ಯಾವುದೇ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ತಮಿಳುನಾಡು ತಂಡ, ಎನ್‌ ಜಗದೀಶನ್‌ ಅರ್ಧಶತಕ ಹಾಗೂ ವಿಜಯ್‌ ಶಂಕರ್‌ (42 ರನ್‌) ಅವರ ಬ್ಯಾಟಿಂಗ್‌ ನೆರವಿನಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್‌ಗಳ ನಷ್ಟಕ್ಕೆ 221`ರನ್‌ಗಳನ್ನು ಗಳಿಸಿತ್ತು. ನಂತರ ಬೃಹತ್‌ ಮೊತ್ತದ ಗುರಿ ಹಿಂಬಾಲಿಸಿದ ಬರೋಡಾ ತಂಡ, 7 ವಿಕೆಟ್‌ಗಳನ್ನು ಗೆಲುವಿನ ದಡ ಸೇರಿತು.

2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಹಾರ್ದಿಕ್‌ ಪಾಂಡ್ಯ ಪ್ರದರ್ಶನ

74*(35) ವಿರುದ್ಧ ಗುಜರಾತ್

41*(21) ವಿರುದ್ಧ ಉತ್ತರಾಖಂಡ

69(30) ವಿರುದ್ಧ ತಮಿಳುನಾಡು