Thursday, 28th November 2024

IPL 2025: ಹರಾಜಿನಲ್ಲಿ ಕೋಟಿ ಪಡೆದರೂ ಆಟಗಾರರಿಗೆ ಸಿಗುವ ಅಸಲಿ ಮೊತ್ತವೆಷ್ಟು?

ಬೆಂಗಳೂರು: ಪ್ರತಿ ಬಾರಿಯ ಐಪಿಎಲ್‌(IPL 2025) ಹರಾಜಿನಲ್ಲಿ ಆಟಗಾರರು ಕೋಟಿ ಕೋಟಿ ಮೌಲ್ಯಕ್ಕೆ ಮಾರಾಟವಾಗುತ್ತಾರೆ. ಆದರೆ ಆಟಗಾರರಿಗೆ ಎಷ್ಟು ಮೊತ್ತ ಸಿಗಲಿದೆ ಎಂಬ ಕುತೂಹಲ ಕ್ರಿಕೆಟ್‌ ಅಭಿಮಾನಿಗಳದ್ದಾಗಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ.

ಈ ಬಾರಿಯ ಹರಾಜಿನಲ್ಲಿ ಟೀಮ್‌ ಇಂಡಿಯಾದ ಯುವ ವಿಕೆಟ್‌ ಕೀಪರ್‌ ಕಮ್‌ ಬ್ಯಾಟರ್‌ ರಿಷಭ್‌ ಪಂತ್‌(rishabh pant) ಅವರು ಬರೋಬ್ಬರಿ 27 ಕೋಟಿ ರೂ.ಗೆ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಸೇರಿದರು. ಇದು ಈವರೆಗಿನ ಐಪಿಎಲ್‌ ಇತಿಹಾಸದಲ್ಲೇ ಆಟಗಾರನೊಬ್ಬ ಪಡೆದ ಗರಿಷ್ಠ ಮೊತ್ತವಾಗಿದೆ. ಹಾಲಿ ಚಾಂಪಿಯನ್‌ ಕೆಕೆಆರ್‌ ತಂಡದ ಶ್ರೇಯಸ್‌ ಅಯ್ಯರ್‌(shreyas iyer) 26.75 ಕೋಟಿ ರೂ.ಗೆ ಪಂಜಾಬ್‌ ತಂಡ ಸೇರಿದ್ದರು. ಕೋಟಿ ಪಡೆದರೂ ಎಲ್ಲ ಹಣ ಇವರ ಜೇಬು ಸೇರುವುದಿಲ್ಲ ಎಂಬುದು ವಾಸ್ತವ.

ಹೌದು, ಹರಾಜಿನಲ್ಲಿ ಸಿಕ್ಕ ಮೊತ್ತವೆಲ್ಲ ಆಟಗಾರನಿಗೆ ಸಿಗುವುದಿಲ್ಲ. ಕಾರಣ, ತಾವು ಪಡೆದ ಹಣದಲ್ಲಿ ಶೇ. 30 ರಷ್ಟು ಹಣವನ್ನು ಆದಾಯ ತೆರಿಗೆಯಾಗಿ ಕೇಂದ್ರ ಸರ್ಕಾರಕ್ಕೆ ಪಾವತಿಸಬೇಕಾಗುತ್ತದೆ. ಅದರಂತೆ ಈ ಲೆಕ್ಕಾಚಾರದಂತೆ ರಿಷಭ್‌ ಪಂತ್‌ ಕೈಗೆ ಸಿಗು ವುದು 18.90 ಕೋಟಿ ರೂ. ಮಾತ್ರ. ಹಾಗೆಯೇ ಶ್ರೇಯಸ್‌ ಅಯ್ಯರ್‌ ಕಿಸೆಗೆ ಬೀಳುವ ಮೊತ್ತ 18.72 ಕೋಟಿಯಷ್ಟೇ. ಇದು ಐಪಿಎಲ್‌ನಲ್ಲಿ ಮಾರಾಟಗೊಂಡ ಎಲ್ಲ ಆಟಗಾರರಿಗೂ ಅನ್ವಯಿಸುತ್ತದೆ. ಆರ್‌ಸಿಬಿ ತಂಡ ವಿರಾಟ್‌ ಕೊಹ್ಲಿಯನ್ನು 21 ಕೋಟಿ ರೂ.ಗೆ ರಿಟೇನ್‌ ಮಾಡಿಕೊಂಡಿತ್ತು. ಆದರೆ ಇಲ್ಲಿ ಕೊಹ್ಲಿಗೆ ಸಿಗುವುದು ಕೇವಲ 14.70 ಕೋ. ರೂ. ಮಾತ್ರ.

ಐಪಿಎಲ್​ 18ನೇ ಆವೃತ್ತಿಯ ಎರಡು ದಿನಗಳ ಮೆಗಾ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 62 ವಿದೇಶಿಯರ ಸಹಿತ 182 ಆಟಗಾರರು ಬಿಕರಿಯಾದರು. ಮೊದಲ ದಿನ 72 ಆಟಗಾರರ ಬಿಕರಿಯಾಗಿತ್ತು. 10 ತಂಡಗಳು ಒಟ್ಟಾರೆ 639.15 ಕೋಟಿ ರೂ. ವ್ಯಯಿಸಿದವು. ಒಟ್ಟು 8 ಆರ್​ಟಿಎಂ ಕೂಡ ಬಳಕೆಯಾಯಿತು. 2025ರ ಮಾರ್ಚ್​ 14ರಿಂದ ಮೇ 25ರವರೆಗೆ ಟೂರ್ನಿ ನಡೆಯಲಿದೆ.

ಇದನ್ನೂ ಓದಿ IND vs AUS: ಸೋಲಿನ ಬೆನ್ನಲ್ಲೇ ಆಸೀಸ್‌ಗೆ ಆಘಾತ; ಸ್ಟಾರ್‌ ಆಟಗಾರನಿಗೆ ಗಾಯ

ಇದುವರೆಗಿನ ಆಯಾ ಐಪಿಎಲ್‌ ಆವೃತ್ತಿಯ ಹರಾಜಿನಲ್ಲಿ ಗರಿಷ್ಠ ಮೊತ್ತ ಪಡೆದ ಆಟಗಾರರ ಪಟ್ಟಿ ಹೀಗಿದೆ.

ವರ್ಷಆಟಗಾರಪಡೆದ ಮೊತ್ತ
2008ಎಂ.ಎಸ್‌ ಧೋನಿ9.5 ಕೋಟಿ ರೂ.
2009ಕೆವಿನ್ ಪೀಟರ್ಸನ್ ಮತ್ತು ಆಂಡ್ರ್ಯೂ ಫ್ಲಿಂಟಾಫ್ 9.8 ಕೋಟಿ ರೂ.
2010ಶೇನ್ ಬಾಂಡ್ ಮತ್ತು ಕೀರನ್ ಪೊಲಾರ್ಡ್4.8 ಕೋಟಿ ರೂ.
2011ಗೌತಮ್ ಗಂಭೀರ್ 14.9 ಕೋಟಿ ರೂ.
2012ರವೀಂದ್ರ ಜಡೇಜಾ12.8 ಕೋಟಿ ರೂ.
2013ಗ್ಲೆನ್ ಮ್ಯಾಕ್ಸ್‌ವೆಲ್6.3 ಕೋಟಿ ರೂ.
2014ಯುವರಾಜ್ ಸಿಂಗ್14 ಕೋಟಿ ರೂ.
2015ಯುವರಾಜ್ ಸಿಂಗ್16 ಕೋಟಿ ರೂ.
2016ಶೇನ್ ವ್ಯಾಟ್ಸನ್9.5 ಕೋಟಿ ರೂ.
2017ಬೆನ್ ಸ್ಟೋಕ್ಸ್14.5 ಕೋಟಿ ರೂ.
2018ಬೆನ್ ಸ್ಟೋಕ್ಸ್12.5 ಕೋಟಿ ರೂ.
2019ಜಯದೇವ್ ಉನದ್ಕತ್ ಮತ್ತು ವರುಣ್ ಚಕ್ರವರ್ತಿ8.4 ಕೋಟಿ ರೂ.
2020ಪ್ಯಾಟ್ ಕಮ್ಮಿನ್ಸ್ 15.5 ಕೋಟಿ ರೂ.
2021ಕ್ರಿಸ್ ಮೋರಿಸ್16.25 ಕೋಟಿ ರೂ.
2022ಇಶಾನ್ ಕಿಶನ್15.25 ಕೋಟಿ ರೂ.
2023ಸ್ಯಾಮ್ ಕರ್ರಾನ್18.5 ಕೋಟಿ ರೂ.
2024ಮಿಚೆಲ್ ಸ್ಟಾರ್ಕ್24.75 ಕೋಟಿ ರೂ.
2025ರಿಷಭ್‌ ಪಂತ್‌27 ಕೋಟಿ ರೂ.