ಮುಂಬಯಿ: ಆಸ್ಟ್ರೇಲಿಯಾ(AUS-W vs IND-W) ಎದುರು ಮುಂದಿನ ತಿಂಗಳು ನಡೆಯಲಿರುವ ಮಹಿಳಾ ಏಕದಿನ ಕ್ರಿಕೆಟ್ ಸರಣಿಯಿಂದ ಆರಂಭಿಕ ಎಡಗೈ ಆಟಗಾರ್ತಿ ಯಾಸ್ತಿಕಾ ಭಾಟಿಯಾ(Yastika Bhatia) ಹೊರಬಿದ್ದಿದ್ದಾರೆ. ಮಹಿಳಾ ಬಿಗ್ ಬ್ಯಾಷ್(WBBL) ಲೀಗ್ ಟೂರ್ನಿಯಲ್ಲಿ ಆಡುತ್ತಿರುವ ವೇಳೆ ಮಣಿಕಟ್ಟಿಗೆ ಪೆಟ್ಟಾದ ಕಾರಣ ಅವರನ್ನು ಸರಣಿಯಿಂದ ಕೈಬಿಡಲಾಗಿದೆ. ಇವರ ಬದಲಿಗೆ ವಿಕೆಟ್ಕೀಪರ್ ಉಮಾ ಚೆಟ್ರಿ(Uma Chetry) ಅವರನ್ನು ತಂಡಕ್ಕೆ ಸೇರಿಸಲಾಗಿದೆ.
22 ವರ್ಷದ ಉಮಾ ಅವರು ಭಾರತ ತಂಡದಲ್ಲಿ 4 ಟಿ20 ಪಂದ್ಯ ಆಡಿದ ಅನುಭವ ಹೊಂದಿದ್ದಾರೆ. ಏಕದಿನ ತಂಡಕ್ಕೆ ಇದು ಅವರ ಮೊದಲ ಕರೆ. 3 ಏಕದಿನ ಪಂದ್ಯಗಳ ಸರಣಿ ಡಿಸೆಂಬರ್ 5ರಿಂದ ಆರಂಭಗೊಳ್ಳಲಿದೆ. ಈ ಸರಣಿಯು ಐಸಿಸಿ ಮಹಿಳಾ ಚಾಂಪಿಯನ್ಶಿಪ್ ಭಾಗವಾಗಿದೆ. ಹರ್ಮನ್ಪ್ರೀತ್ ಕೌರ್ ತಂಡವನ್ನು ಮುನ್ನಡೆಸಲಿದ್ದಾರೆ. ಕನ್ನಡತಿ ಶ್ರೇಯಾಂಕಾ ಪಾಟೀಲ್ ಮತ್ತು ಡ್ಯಾಶಿಂಗ್ ಓಪನ್ ಶಫಾಲಿ ವರ್ಮಾ ಕಳೆದ ಫಾರ್ಮ್ನಿಂದಾಗಿ ಸರಣಿಗೆ ಆಯ್ಕೆಯಾಗಲಿಲ್ಲ.
ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪನಾಯಕಿ), ಪ್ರಿಯಾ ಪೂನಿಯಾ, ಜಿಮಿಮಾ ರಾಡ್ರಿಗಸ್, ಹರ್ಲೀನ್ ಡಿಯೊಲ್, ರಿಚಾ ಘೋಷ್ (ವಿಕೆಟ್ಕೀಪರ್), ತೇಜಲ್ ಹಸಬನೀಸ್, ದೀಪ್ತಿ ಶರ್ಮಾ, ಮಿನು ಮಣಿ, ಪ್ರಿಯಾ ಮಿಶ್ರಾ, ರಾಧಾ ಯಾದವ್, ತಿತಾಸ್ ಸಾಧು, ಅರುಂಧತಿ ರೆಡ್ಡಿ, ರೇಣುಕಾಸಿಂಗ್ ಠಾಕೂರ್, ಸೈಮಾ ಠಾಕೂರ್, ಉಮಾ ಚೆಟ್ರಿ (ವಿಕೆಟ್ಕೀಪರ್).
ಇದನ್ನೂ ಓದಿ Shafali Verma: ವಿಶೇಷ ದಾಖಲೆ ಬರೆದ ಶಫಾಲಿ ವರ್ಮಾ
ವೇಳಾಪಟ್ಟಿ
ಮೊದಲ ಏಕದಿನ; ಡಿ.5, ತಾಣ; ಬ್ರಿಸ್ಬೇನ್
ದ್ವಿತೀಯ ಏಕದಿನ; ಡಿ. 8, ತಾಣ;ಬ್ರಿಸ್ಬೇನ್
ಮೂರನೇ ಏಕದಿನ; ಡಿ.11, ತಾಣ; ಪರ್ತ್
ಆಸೀಸ್ಗೆ ಆಘಾತ; ಸ್ಟಾರ್ ಆಟಗಾರನಿಗೆ ಗಾಯ
ಸಿಡ್ನಿ: ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯ ಮೊದಲ ಪಂದ್ಯ ಸೋತಿರುವ ಆಸ್ಟ್ರೇಲಿಯಾ(IND vs AUS) ತಂಡಕ್ಕೆ ದ್ವಿತೀಯ ಪಂದ್ಯಕ್ಕೂ ಮುನ್ನ ಆಘಾತವೊಂದು ಎದುರಾಗಿದೆ. ಆಲ್ರೌಂಡರ್ ಮಿಚೆಲ್ ಮಾರ್ಷ್(Mitchell Marsh) ಗಾಯದಿಂದ ಫಿಟ್ನೆಸ್ ಹೊಂದಿಲ್ಲದ ಕಾರಣ ಅವರ ಸ್ಥಾನಕ್ಕೆ ಆಲ್ರೌಂಡರ್ ಬ್ಯೂ ವೆಬ್ಸ್ಟರ್ ಅವರನ್ನು ಬ್ಯಾಕಪ್ ಆಟಗಾರನಾಗಿ ಆಯ್ಕೆ ಮಾಡಲಾಗಿದೆ.
ದ್ವಿತೀಯ ಪಂದ್ಯ ಡಿ.6 ರಿಂದ ಅಡಿಲೇಡ್ನಲ್ಲಿ ಆರಂಭವಾಗಲಿದೆ. ಈ ಪಂದ್ಯ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿದೆ. ಪಂದ್ಯ ಆರಂಭಕ್ಕೆ ಇನ್ನೂ ಒಂದು ವಾರಗಳ ಸಮಯ ಬಾಕಿ ಇದೆ. ಒಂದು ವೇಳೆ ಮಿಚೆಲ್ ಮಾರ್ಷ್ ಈ ಹೊತ್ತಿಗೆ ಸರಿಯಾಗಿ ಚೇತರಿಸದೇ ಹೋದರೆ ಬ್ಯೂ ವೆಬ್ಸ್ಟರ್ ಚೊಚ್ಚಲ ಟೆಸ್ಟ್ ಆಡುವ ಸಾಧ್ಯತೆ ಇದೆ.
ಆಸ್ಟ್ರೇಲಿಯ ತಂಡ: ಪ್ಯಾಟ್ ಕಮಿನ್ಸ್ (ನಾಯಕ), ನಥನ್ ಮೆಕ್ಸ್ವೀನಿ, ಉಸ್ಮಾನ್ ಖ್ವಾಜಾ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರ್ಯಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ, ಮಿಚೆಲ್ ಸ್ಟಾರ್ಕ್, ನಥನ್ ಲಿಯಾನ್, ಜೋಶ್ ಹೇಝಲ್ವುಡ್, ಜೋಶ್ ಇಂಗ್ಲಿಸ್, ಸ್ಕಾಟ್ ಬೋಲ್ಯಾಂಡ್, ಬ್ಯೂ ವೆಬ್ಸ್ಟರ್