Wednesday, 27th November 2024

ದಿನನಿತ್ಯ ನಗರಸಭೆಗೆ ಬರುವವರಿಗೆ ಶೌಚಾಲಯ ಅವಶ್ಯಕತೆ ಇದೆ: ಮಲ್ಲಿಕಾರ್ಜುನ್ ಪಾಟೀಲ್

ಸಿಂಧನೂರು: ನಗರಸಭಾ ಆವರಣದಲ್ಲಿ ಮಹಿಳಾ ಹಾಗೂ ಪುರುಷ ಶೌಚಾಲಯ ಉದ್ಘಾಟನೆ ಸಿಂಧನೂರು ನಗರಸಭಾ ಆವರಣದಲ್ಲಿ ಮಹಿಳಾ ಹಾಗೂ ಪುರುಷ ಶೌಚಾಲಯಗಳನ್ನು ನಗರಸಭಾ ಅಧ್ಯಕ್ಷ ಮಲ್ಲಿಕಾರ್ಜುನ್ ಪಾಟೀಲ್ ಶನಿವಾರ ಉದ್ಘಾಟಿಸಿದರು.

ಈ ವೇಳೆ ಅವರು ಮಾತನಾಡಿ 14 ಹಾಗೂ 15 ನೇ ಸಾಲಿನಲ್ಲಿ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾರ್ವಜನಿಕರಿಗೆ ಉಪಯೋಗಕ್ಕಾಗಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ದಿನನಿತ್ಯ ನಗರಸಭೆಗೆ ಬರುವ ಸಾರ್ವಜನಿಕರಿಗೆ ಶೌಚಾಲಯ ಅವಶ್ಯಕತೆ ಇದೆ ಎಂದರು.

ನಗರದ ಮೂಲಸೌಲಭ್ಯಗಳ ಬಗ್ಗೆ ನಗರಸಭೆ ಮೊದಲು ಚಿಂತನೆ ನಡೆಸುತ್ತಿದೆ ಯಾವುದೇ ಕಾರಣಕ್ಕೂ ಎಲ್ಲಾ ವಾರ್ಡಿನ ಜನರಿಗೆ ಅನುಕೂಲಕರವಾಗುವ ರೀತಿಯಲ್ಲಿ ಕೆಲಸ ಮಾಡುತ್ತೇವೆ ಎಂದರು ಪೌರಾಯುಕ್ತ ಆರ್ ವಿರೂಪಾಕ್ಷ ಮೂರ್ತಿ, ನಗರಸಭಾ ಅಧ್ಯಕ್ಷ ಮುರ್ತುಜಾ ಹುಸೇನ್ ಸದಸ್ಯರಾದ ಕೆ ಜಿಲಾನಿ ಪಾಷಾ, ದಾಸರಿ ಸತ್ಯ ನಾರಾಯಣ, ಆಲಂ ಭಾಷಾ, ಮುನೀರ್ ಭಾಷಾ ಮಾಜಿ ಸದಸ್ಯ ವೆಂಕಟೇಶ್ ದತ್ತು ರಾವ್ ನಗರಸಭಾ ಪರಿಸರ ಇಲಾಖೆ ಅಧಿಕಾರಿ ಸುಬ್ರಹ್ಮಣ್ಯ, ನಗರಸಭಾ ಅಧೀಕ್ಷಕ ಎಸ್ ಮಡಿವಾಳ, ವ್ಯವಸ್ಥಾಪಕ ಶರಣಬಸವ, ಶಾಂತರಾಜ್ ಸೇರಿದಂತೆ ಇತರರು ಇದ್ದರು.