Thursday, 31st October 2024

ಜಿಲ್ಲೆಗೆ ಪ್ರಥಮ: ವಿದ್ಯಾರ್ಥಿಗೆ ಅಭಿನಂದನೆ

ಗುಬ್ಬಿ: ವಾಸಣ್ಣ ಅಭಿಮಾನಿ ಬಳಗದಿಂದ ಭೈರವೇಶ್ವರ ಬ್ಯಾಂಕಿನ ನಿರ್ದೇಶಕ ಹಾಗೂ ಉದ್ಯಮಿ ಎಸ್.ಆರ್.ಜಗದೀಶ್ ಅವರ 56ನೇ ಹುಟ್ಟುಹಬ್ಬದ ಅಂಗವಾಗಿ ಕುಣಿಗಲ್‌ನ ಜ್ಞಾನಭಾರತಿ ಪ್ರೌಢಶಾಲೆಯ ವಿದ್ಯಾರ್ಥಿಯಾದ ಮಹೇಶ್.ಜಿ.ಎಂ., ಎಸ್.ಎಸ್.ಎಲ್.ಸಿಯಲ್ಲಿ ಜೆಲ್ಲೆಗೆ ಪ್ರಥಮ ರ‍್ಯಾಂಕ್ ಬಂದಿರುವುದರಿಂದ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಹರೀಶ್ ಬಳ್ಳಗೆರೆಯವರು ಮಾತನಾಡಿ, ಪ್ರತಿವರ್ಷ ಅದ್ಧೂರಿಯಾಗಿ ಮಾಡುತ್ತಿದ್ದೇವೂ ಈ ವರ್ಷ ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಿಲಾಯಿತು. ಇದೇ ವೇಳೆ ಮೈದಾಳದಲ್ಲಿರುವ ಶಿವಶೈಕ್ಷಣಿಕ ಸೇವಾ ಆಶ್ರಮದ ಸಂಸ್ಥಾಪಕರಾದ ಲೇಪಾಕ್ಷಯ್ಯ ಹಾಗೂ ಸಿದ್ದರಾಮೇಶ್ವರ ಬಡಾವಣೆಯಲ್ಲಿರುವ ರಾಷ್ಟಿçÃಯ ಅಂಧರ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಗಳಾದ ಶಿವಕುಮಾರ್ ಹಾಗೂ ಇತರ ಅಂಧರಿಗೆ ಗೌರವಿಸಿ ದಿನಬಳಕೆಯ ಪದಾರ್ಥಗಳನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಸುಚಿತ್ ಗೌಡ ರವರು ಮಾತನಾಡಿ ಕೊರೋನಾ ಹಿನ್ನೆಲೆಯಲ್ಲಿ ಈ ವರ್ಷದ ಹುಟ್ಟುಹಬ್ಬವನ್ನು ಸರಳ ವಾಗಿ ಆಚರಿಸಲಾಯಿತು ಎಂದರು. ನೇತ್ರಾವತಿ ಜಗದೀಶ್, ಹುಚ್ಚೇಗೌಡರು, ಗಿರೀಶ್, ಕುಮಾರ್, ಶ್ರೀನಿವಾಸ್ ಹಾಗೂ ಇನ್ನಿತರರು ಇದ್ದರು.