Thursday, 31st October 2024

ಭಾರೀ ಮೊತ್ತ ಲಪಟಾಯಿಸಲು ಕಥೆ ಹೆಣೆದ, ಸಿಕ್ಕಿಬಿದ್ದು ಪೊಲೀಸರ ಅತಿಥಿಯಾದ

ಬೇಲೂರು: ಯಾವುದೇ ಶ್ರಮವಿಲ್ಲದೆ ಕೈ ಸೇರಿದ್ದ ₹ 16 ಲಕ್ಷ ಹಣವನ್ನು ಜೇಬಿಗಿಳಿಸಿಕೊಳ್ಳಲು ಕಥೆ ಹಣೆದು ಪೊಲೀಸರಿಗೆ ಅತಿಥಿ ಯಾಗಿದ್ದಾರೆ.

ಸಕಲೇಶಪುರ ತಾಲ್ಲೂಕಿನ ಬಾಳೆಗದ್ದೆ ನಿವಾಸಿ ದಿನೇಶ್‌ ಎಂಬವರಿಗೆ ಸೇರಿದ್ದ ₹ 16.80 ಲಕ್ಷ ಹಣವನ್ನು ಲಪಟಾಯಿಸಲು ಮೊಹಮ್ಮದ್ ತಾರಿಕ್‌ ಸಂಚು ರೂಪಿಸಿದ್ದ. ಡಿ.2ರಂದು ದಿನೇಶ್‌ರನ್ನು ಭೇಟಿಯಾಗಿದ್ದ ತಾರಿಕ್,‌ ಕಾಳುಮೆಣಸನ್ನು ಮಾರಾಟ ಮಾಡಿ ಕೊಡುತ್ತೇನೆಂದು ಹೇಳಿ ತೆಗೆದುಕೊಂಡು ಹೋಗಿದ್ದ. ಚಿಕ್ಕಮಗಳೂರಿನಲ್ಲಿ ಕಾಳುಮೆಣಸು ಮಾರಾಟ ಮಾಡಿ, ವಾಪಸ್‌ ಬರುವಾಗ ರಾತ್ರಿ ತಾಲ್ಲೂಕಿನ ಫಾತೀಮಾಪುರದ ಬಳಿ ಕಾರು ಅಪಘಾತವಾಗಿದೆ.

ಇದೇ ಸಮಯವನ್ನು ಉಪಯೋಗಿಸಿಕೊಂಡ ತಾರಿಕ್, ತನ್ನ ಮೇಲೆ ಅಪರಿಚಿ ತರು ಹಲ್ಲೆ ನಡೆಸಿ, ಹಣ ತೆಗೆದುಕೊಂಡು ಹೋಗಿ ದ್ದಾರೆ. ತಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವುದಾಗಿ ದೂರವಾಣಿ ಮೂಲಕ ದಿನೇಶ್‌ ಅವರಿಗೆ ವಿಷಯ ತಿಳಿಸಿದ್ದ.

ಬೆಳೆಯಿಂದ ಬಂದ ಅಪಾರ ಹಣ ಹೋಯಿತಲ್ಲ ಎಂದು ಆತಂಕಗೊಂಡ ದಿನೇಶ್‌ ಅರೇಹಳ್ಳಿ ಪೊಲೀಸ್‌ ಠಾಣೆಗೆ ದೂರು ನೀಡಿ ದ್ದರು. ಮಹಮದ್ ದಾಖಲಾಗಿದ್ದ ಆಸ್ಪತ್ರೆಗೆ ಸಿಪಿಐ ಸಿದ್ದರಾಮೇಶ್ವರ ಹಾಗೂ ಪಿಎಸ್‌ಐ ಮಹೇಶ್ ತೆರಳಿ ವಿಚಾರಿಸಿದಾಗ ಹಣ ಲಪಟಾಯಿಸಲು ಸುಳ್ಳು ಕಥೆ ಸೃಷ್ಟಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.