Monday, 25th November 2024

ಅಪಘಾತವೊಂದರಲ್ಲಿ ಸಂಧಿಸುವ ಅನಾಮಧೇಯ ಜೋಡಿ, ವಿವಾಹ ಬಂಧನಕ್ಕೆ ಒಳಗಾದರು

ಪಾಲಕ್ಕಾಡ್‍: ಪ್ರೀತಿ ಪ್ರೇಮಗಳ ಚಿತ್ರ ಕಥೆ ಮಾಡುವುದಾದರೆ, ಈವೊಂದು ಕಥೆ ಸೂಕ್ತವಾಗಲು ಅಡ್ಡಿಯಿಲ್ಲ. ಜ್ಯೋತಿ, ಅಪಘಾತ ಕ್ಕೀಡಾದ ಓರ್ವನನ್ನು ರಕ್ಷಿಸಿ, ಬಳಿಕ ಆಕೆಯನ್ನೇ ವಿವಾಹವಾಗುವ ಈ ಕತೆ ಅತ್ಯಂತ ರೋಚಕವಾಗಿದೆ. ಆದರೆ ಇದು ಕಾಲ್ಪನಿಕ.

ಕಾರಣ, ಇಂಥ ಕಥೆ ನೂರಾರು ಸಿನಿಮಾ ಕಥೆಗಳಲ್ಲಿ ಕಾಣ ಸಿಗುತ್ತವೆ. ಆದರೆ, ಇಲ್ಲಿ ಜ್ಯೋತಿ ಎಂಬಾಕೆಯೊಂದಿಗಿನ ಕಥೆ ಹಲವು ತಿರುವನ್ನು  ಪಡೆದುಕೊಳ್ಳುತ್ತದೆ. ಛತ್ತೀಸ್ಗಢದ ಈ ಯುವತಿ ಬಿಜೆಪಿ ಅಭ್ಯರ್ಥಿಯಾಗಿ ಕೊಲ್ಲೆಂಗೋಡ್ ಬ್ಲಾಕ್ ಪಂಚಾಯಿತಿಯ ಪಲತ್ತುಲ್ಲಿ ವಿಭಾಗದಿಂದ ಚುನಾವಣೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.

ಅದು ವಿಧಿಯ ಚಮತ್ಕಾರವೋ ಏನೋ, ಜ್ಯೋತಿ, ಸಿಐಎಸ್ಎಫ್  ಯೋಧ ವಿಕಾಸ್‍ನ ವಧುವಾಗಿ ಪೆರುವೆಂಬು ಬಳಿಯ ಚಿರಯಂಕಡ್‍ ನ ಆತನ ಮನೆಗೆ ಕಾಲಿಟ್ಟಳು. ಇವರ ವಿವಾಹ ನಡೆದಿದ್ದು 2011 ರಲ್ಲಿ.  ಛತ್ತೀಸಗಢದ ಬಸ್‍ ಅಪಘಾತದಲ್ಲಿ ತನ್ನ ಪತಿಯನ್ನು ರಕ್ಷಿಸುವ ಆತುರದಲ್ಲಿ ಬಲಗೈ ಕಳೆದುಕೊಂಡ ಜ್ಯೋತಿ ಮತ್ತು ಅದೇ ವೇಳೆ ಅದೇ ಬಸ್ಸಿನಲ್ಲಿ ಕೇರಳದಿಂದ ಸಿಐಎಸ್ಎಫ್‍ ಯೂನಿಟ್‍‍ನತ್ತ ಪ್ರಯಾಣಿಸುತ್ತಿದ್ದ ಅನಾಮಿಕ ವ್ಯಕ್ತಿಯೊಬ್ಬ ಸಂಧಿಸುತ್ತಾರೆ.

ಜ್ಯೋತಿ ಬಿಎಸ್ಸಿ ನರ್ಸಿಂಗ್‍ ಕಲಿಯುತ್ತಿರುವಾಕೆ. ಆಕೆ ಕೂಡ ದರ್ಗ್‍ನ ನರ್ಸಿಂಗ್‍ ಕಾಲೇಜಿನಲ್ಲಿ ಕಲಿಯುತ್ತಿದ್ದು, ತನ್ನ ಮನೆಗೆ
ಮರಳುತ್ತಿದ್ದಳು. 2010 ರಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ, ವಿಕಾಸ್‍ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದು, ತನ್ನ ಉದ್ಯೋಗಕ್ಕೆ ಮರಳಲು ತೆರಳುತ್ತಿದ್ದರು. ಕಿಟಕಿಯ ತಂತಿಗೆ ತಲೆ ಇಟ್ಟು ಮಲಗಿದ್ದ ವಿಕಾಸ್‍‍ಗೆ ಮುಂದೆ ಸಂಭವಿಸಬಹುದಾದ ಅಪಘಾತದ ಕುರಿತು ಅರಿವಿರಲಿಲ್ಲ. ಆದರೆ, ಆ ಯುವತಿ ವಿಕಾಸ್‍ ಪಾಲಿಗೆ ದೇವತೆಯಾದಳು.

ಎದುರಿನಿಂದ ಬರುತ್ತಿದ್ದ ಲಾರಿ, ಬಸ್ಸಿನ ಕಿಟಕಿಗೆ ಸನಿಹದಲ್ಲೇ ಸಾಗಲಿತ್ತು. ಈ ವೇಳೆ, ಬಸ್ಸು ಚಾಲಕನಿಗೆ ಕೂಡ ಚಾಲನೆ
ಮೇಲಿನ ನಿಯಂತ್ರಣ ತಪ್ಪಿದ ಕಾರಣ, ಜ್ಯೋತಿ ಕೂಡಲೇ ಕಿಟಕಿಯ ತಂತಿ ಬಳಿ ಕೈಚಾಚಿ, ಆ ಅನಾಮಿಕ ವ್ಯಕ್ತಿಯ ತಲೆಗೆ ಯಾವುದೇ  ಹಾನಿಯಾಗದಂತೆ ಕಾಪಾಡಿದಳು. ಆದರೆ, ಕೈಯನ್ನು ಹಿಂತೆಗೆದುಕೊಳ್ಳುವ ಮುನ್ನವೇ, ನಡೆದ ಅಪಘಾತದಲ್ಲಿ ನನ್ನ ಕೈಗೆ ಪೆಟ್ಟಾಗಿತ್ತು ಎಂದು ತನ್ನ ಮಾತೃಭಾಷೆ ಮಲಯಾಳಂನಲ್ಲಿ ಘಟನೆ ಕುರಿತು ವಿವರಿಸಿದ್ದಾರೆ.

ನೀವು ನನ್ನ ಪ್ರಾಣ ಉಳಿಸಿದ್ದೀರಿ. ಹಾಗಾಗಿ, ನಿನ್ನನ್ನು ವಿವಾಹವಾಗುತ್ತೇನೆ ಎಂದ ವಿಕಾಸ್‌, ಜ್ಯೋತಿ ಬಳಿ ತನ್ನ ಮನಸ್ಸಿನ ಇಂಗಿತ ವನ್ನು ವ್ಯಕ್ತಪಡಿಸುತ್ತಾನೆ. . ಇಂಥ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ಇದು ಎರಡು ಜೀವನಗಳ ಭವಿಷ್ಯ ಎಂದು ನಾನು ವಿವರಿಸಿದೆ. ಬಳಿಕ, ವಿಕಾಸ್‍ ಈ ಕುರಿತು ಮನೆಯವರಲ್ಲಿ ಮಾತನಾಡಿ, ಕೊನೆಗೂ ಅವರು ಸಮ್ಮತಿಸಿದರು. ಈಗ ನನ್ನ ಸಂಸಾರ ಸುಖವಾಗಿದೆ. ಅವರ ಮನೆಯಲ್ಲಿ ನನ್ನನ್ನು ಮಗಳಂತೆ ಕಾಣುತ್ತಾರೆ. ಈಗ ವಿಕಾಸ್‍ರಿಗೆ ಕೊಯಮತ್ತೂರು ನಲ್ಲಿ ಪೋಸ್ಟಿಂಗ್‍ ಆಗಿದೆ ಎಂದು ಹೇಳಿದರು.