ಚಿಂತಾಮಣಿ: ಚಿಂತಾಮಣಿ ನಗರದಲ್ಲಿ ಇಂದು ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವದ ಪೂರ್ವಭಾವಿ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಭೆಯಲ್ಲಿ ಶ್ರೀ ಶ್ರೀ ಪ್ರಸನ್ನಾನಂದ ಸ್ವಾಮೀಜಿಗಳು ಭಾಗವಹಿಸಿದ್ದು.
ಇತ್ತೀಚೆಗೆ ಚಿಕ್ಕಬಳ್ಳಾಪುರ ಜಿಲ್ಲಾ ವಕೀಲರ ಸಂಘದ ಖಜಾಂಚಿಯಾಗಿ ಆಯ್ಕೆಯಾದ ಖ್ಯಾತ ವಕೀಲ ಹಾಗೂ ಚಿಂತಾಮಣಿ ನಗರದವರಾದ ಅಯೂಬ್ ಖಾನ್ ರವರಿಗೆ ಹಾಗೂ ವಕೀಲರಾದ ಮುನಿಕೃಷ್ಣಪ್ಪ,ನಾಗರಾಜ್, ನಾರಾಯಣಸ್ವಾಮಿ ರವರಿಗೆ ಹೃದಯಸ್ಪರ್ಶಯಾಗಿ ಸನ್ಮಾನಿಸಿ ಹೇಳಿದ ಸ್ವಾಮೀಜಿ ಸಮಾಜದಲ್ಲಿ ವಿವಿಧ ಕ್ಷೇತ್ರದಲ್ಲಿ ಮುನ್ನಡೆಯುತ್ತಿರುವ ಸಾಧಕರನ್ನು ಗುರುತಿಸಿ ಗೌರವಿಸುವ ಮೂಲಕ ಅವರ ಸೇವೆ ಮತ್ತಷ್ಟು ಹೆಚ್ಚಾಗುವಂತೆ ಮಾಡುವ ಕಾರ್ಯ ಶ್ಲಾಘನೀಯ ಎಂದರು.