Monday, 23rd December 2024

Chikkaballapur Crime: ಕುಖ್ಯಾತ ಸರಗಳ್ಳರ ಬಂಧನ, ಆಭರಣ ವಶಕ್ಕೆ ಪಡೆದ ಪೊಲೀಸರು

ಗೌರಿಬಿದನೂರು : ತಾಲ್ಲೂಕಿನಲ್ಲಿ ಇತ್ತೀಚಿಗೆ  ಜನರ ನಿದ್ದೆ ಕೆಡಿಸಿದ್ದ ಕಳ್ಳತನ ಪ್ರಕರಣಗಳನ್ನು ಕೊನೆಗೂ ಪೊಲೀಸರು ಭೇದಿಸಿದ್ದಾರೆ.

ಜೂನ್ ೨೬ ,ಅಕ್ಟೋಬರ್ ೧೧ ನವಂಬರ್ ೯, ನವಂಬರ್ ೧೬ ದಿನಾಂಕದ0ದು  ನಗರದ ವಿವಿಧ ಸ್ಥಳಗಳಲ್ಲಿ  ಕಳ್ಳತನ ಮಾಡಿ  ನಾಲ್ಕು ಜನ ಆರೋಪಿಗಳು ಪರಾರಿಯಾಗಿದ್ದರು.  ಈ ಘಟನೆಗೆ ಸಂಬAಧಿಸಿದAತೆ ನಗರ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರುಗಳು ದಾಖಲಾಗಿದ್ದವು, ಮನೆ ಕಳ್ಳತನ ಹಾಗೂ ಸರಗಳ್ಳತನ  ಪ್ರಕರಣದಲ್ಲಿ ದೂರು ದಾಖಲಿಸಿಕೊಂಡ ಪೊಲೀಸರು ಕಳ್ಳರಿಗಾಗಿ ತನಿಖೆ ಕೈ ಗೊಂಡಿದ್ದರು.

ನಗರದ ಸಿಸಿಟಿವಿ ದೃಶ್ಯವಳಿಗಳನ್ನು ಮತ್ತು ಮುಖ ಚರ್ಯೆ ಗಳನ್ನು  ಆಧರಿಸಿ, ಇದು ಇರಾನಿ ಗ್ಯಾಂಗ್ ನ ಕೃತ್ಯ ಎಂದು ಖಚಿತ ಪಡಿಸಿಕೊಂಡು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದರು.

ಮನೆ ಕಳ್ಳತನದ ಖಚಿತ ಮಾಹಿತಿ ಮೇರೆಗೆ  ಹಿರೇಬಿದನೂರು ಗ್ರಾಮದ ನಿವಾಸಿ ಮೆಹಬೂಬ್ ಪಾಷಾ ಎಂಬುವರನ್ನು ಬಂಧಿಸಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ, ಇರಾನಿ ಗ್ಯಾಂಗ್ ಕಳ್ಳತನದ ಮಾಹಿತಿಯನ್ನು ಬಾಯಿ ಬಿಟ್ಟಿದ್ದಾನೆ . ಅದರಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಅಬ್ಬಾಸ್ ಮುನೀರ್ ಇರಾನಿ, ಅಬ್ಬಾಸ್ ಜಾಜ್ ಇರಾನಿ, ಜಾವೀದ್ ಜಹಾಂಗೀರ್ ಇರಾನಿ,  ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ೧೪೩ ಗ್ರಾಂ ಚಿನ್ನಭರಣವನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದ ತನಿಖಾ ತಂಡದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ಅಭಿನಂದಿಸಿದ್ದಾರೆ.