ನ್ಯೂಯಾರ್ಕ್: ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಸೋಮವಾರದಿಂದ ನ್ಯೂಯಾರ್ಕ್‌ನಲ್ಲಿ ಶಾಲೆ ಗಳನ್ನು ಪುನರಾರಂಭಿಸಲಾಗಿದೆ.
ಶಿಶುವಿಹಾರದಿಂದ ಐದನೇ ತರಗತಿಯ ಮಕ್ಕಳಿಗಾಗಿ ಶಾಲೆಗಳನ್ನು ತೆರೆಯಲಾಗಿದೆ. ಪೋಷಕರು ಆನ್‌ಲೈನ್ ತರಗತಿಗಳನ್ನು ಕೂಡ ಆಯ್ಕೆ ಮಾಡಿಕೊಳ್ಳಬಹುದು. ವಿಶೇಷ ಶಿಕ್ಷಣ ಅಗತ್ಯವಿರುವ ವಿದ್ಯಾರ್ಥಿಗಳಿಗಾಗಿ ಗುರುವಾರದಿಂದ ತರಗತಿ ಆರಂಭಿಸಲಾಗು ವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಜಾದಿನಗಳ ಬಳಿಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳನ್ನು ಪುನರಾರಂಭಿಸಲಾಗುವುದು. ಅಲ್ಲಿಯವರೆಗೆ ಆನ್‌ಲೈನ್ ತರಗತಿ ಗಳನ್ನು ನಡೆಸಲಾಗುವುದು ಎಂದು ಮೇಯರ್ ಮಾಹಿತಿ ನೀಡಿದ್ದಾರೆ. ಈ ಹಿಂದೆ ನಗರದಲ್ಲಿ ಸತತ ಏಳು ದಿನಗಳ ಕಾಲ ಶೇಕಡ 3 ರಷ್ಟು ಪ್ರಕರಣಗಳು ವರದಿಯಾದ ಕಾರಣ ಶಾಲೆಗಳನ್ನು ಮುಚ್ಚುವಂತೆ ಮೇಯರ್ ಬಿಲ್ ಡೆ ಬ್ಲಾಸಿಯೋ ನವೆಂಬರ್ 18ರಂದು ಆದೇಶ ನೀಡಿದ್ದರು.