ದೇಶದಲ್ಲಿ ಕೇಳಿಬರುತ್ತಿರುವ ಪ್ರಮುಖ ವಿವಾದಿತ ವಿಷಯ ಲವ್ ಜಿಹಾದ್. ಪ್ರೇಮದ ನೆಪದಲ್ಲಿ ಅನ್ಯಧರ್ಮೀಯರನ್ನು
ವಿವಾಹವಾಗಿ, ಬಲವಂತದಿಂದ ಮತಾಂತರಗೊಳಿಸುವ ಈ ಪದ್ಧತಿ ನಿರ್ಮೂಲನೆಯ ಕೂಗು ಹೆಚ್ಚುತ್ತಿದೆ.
ಈ ಪಿಡುಗಿನ ನಿವಾರಣೆ ನಿಟ್ಟಿನಲ್ಲಿ ಈಗಾಗಲೇ ಅನೇಕ ಪ್ರಯತ್ನಗಳು ಆರಂಭಗೊಂಡಿದ್ದರೂ, ಅವುಗಳು ಎಷ್ಟು ಪರಿಣಾಮಕಾರಿ ಎಂಬುದು ಚಿಂತನಾರ್ಹ. ಉತ್ತರ ಪ್ರದೇಶ, ಹರಿಯಾಣ ನಂತರ ಮಧ್ಯಪ್ರದೇಶದಲ್ಲಿಯೂ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ಚಿಂತನೆ ನಡೆದಿದೆ. ಇದೇ ಮಾದರಿ ಕರ್ನಾಟಕದಲ್ಲೂ ಕಾನೂನು ಜಾರಿಗೊಳಿಸಬೇಕೆಂಬ ಒತ್ತಾಯಗಳು ಕೇಳಿಬರಲಾ ರಂಭಿಸಿವೆ.
ಕೇಂದ್ರದಲ್ಲಿ ಬಿಜೆಪಿಯೇ ಆಡಳಿತ ಪಕ್ಷವಾಗಿರುವಾಗ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಹರಿಯಾಣ ಮುಖ್ಯ ಮಂತ್ರಿ ಎಂಎಲ್ ಕಟ್ಟರ್ ಹಾಗೂ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ತಮ್ಮ ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಕಾನೂನು ರೂಪಿಸುವುದು ಸಮಂಜಸವೇ. ಲವ್ ಜಿಹಾದ್ ನಿರ್ಮೂಲನೆಗಾಗಿ ಹಲವು ರಾಜ್ಯಗಳು ಪ್ರಯತ್ನ ಆರಂಭಿಸಿರುವ ಈ ವೇಳೆಯಲ್ಲಿ ಕೆಲವು ರಾಜ್ಯಗಳಲ್ಲಿ ಪ್ರತ್ಯೇಕವಾಗಿ ಕಾನೂನು ಜಾರಿಗೊಳಿಸುವುದಕ್ಕಿಂತಲೂ ಏಕರೂಪದ ಕಾನೂನು ಜಾರಿಗೊಳಿಸು ವುದು ಮಹತ್ವವಾದದ್ದು.
ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರಯತ್ನ ಆರಂಭಿಸಿರುವ ಹಾಗೂ ಚಿಂತನೆ ನಡೆಸುತ್ತಿರುವ ರಾಜ್ಯಗಳು ಒಗ್ಗಟ್ಟಾಗಿ ಕೇಂದ್ರ ಸರಕಾರ ವನ್ನು ಒತ್ತಾಯಿಸುವ ಮೂಲಕ ಒಂದೇ ಮಾದರಿಯ ಕಾನೂನು ಜಾರಿಗೆ ತರುವುದು ಉತ್ತಮ ಮಾರ್ಗ. ಮಧ್ಯ ಪ್ರದೇಶ ಸರಕಾರ ಮದುವೆ ಉದ್ದೇಶಕ್ಕಾಗಿ ಬಲವಂತದ ಮತಾಂತರಗೊಳಿಸುವ ಅಪರಾಧ ಗಳಿಗೆ 1ಲಕ್ಷ ದಂಡ ಹಾಗೂ 10ವರ್ಷ ಜೈಲುಶಿಕ್ಷೆ ವಿಧಿಸುವ ಧರ್ಮ ಸ್ವಾತಂತ್ರ್ಯ ಮಸೂದೆ 2020 ಮಂಡನೆಗಾಗಿ ಉನ್ನತ ಮಟ್ಟದ ಸಭೆ ನಡೆಸಿದೆ.
ಆದರೆ ಇದು ಬೇಟಿ ಬಜಾವೋ ಅಭಿಯಾನದ ಒಂದು ಭಾಗ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಈ ಕಾರಣದಿಂದ ಕೇಂದ್ರ ಸರಕಾರದ ಮೂಲಕ ಒಂದೇ ಮಾದರಿಯ ಕಾನೂನು ಜಾರಿಗೊಳಿಸುವುದು ಲವ್ ಜಿಹಾದ್ ನಿರ್ಮೂಲನೆಗೆ ಸೂಕ್ತ ಪರಿಹಾರ.