Thursday, 26th December 2024

Chikkaballapur News: ಮಂಗಳನಾಥಸ್ವಾಮೀಜಿ 50ವೇ ವರ್ಷದ ಜನ್ಮದಿನ : ಚುಂಚಶ್ರೀ ಬಳಗದಿಂದ ಕಂಬಳಿ ವಿತರಣೆ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥಸ್ವಾಮೀಜಿ ಅವರ ೫೦ನೇ ವರ್ಷದ ಜನ್ಮದಿನದ ಅಂಗವಾಗಿ ಚುಂಚಶ್ರೀ ಪ್ರತಿಷ್ಟಾನದ ಚಿಕ್ಕಬಳ್ಳಾಪುರ ಬಳಗದ ವತಿಯಿಂದ ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಘಟಕದಲ್ಲಿದ್ದ ೧೦೦ ಮಂದಿ ಒಳರೋಗಿಗಳಿಗೆ ಹಣ್ಣುಹಂಪಲು ಸಹಿತ ಚಳಿಗೆ ಕಂಬಳಿ ನೀಡುವ ಮೂಲಕ ವಿಶೇಷವಾಗಿ ಆಚರಣೆ ಮಾಡಿದರು.

ನಗರದ ಹಳೇ ಜಿಲ್ಲಾಸ್ಪತ್ರೆಯಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತೆರಳಿದ ಚುಂಚಶ್ರೀ ಪ್ರತಿಷ್ಟಾನದ ಚಿಕ್ಕಬಳ್ಳಾಪುರ ವಿಭಾಗದ ಪದಾಧಿಕಾರಿಗಳು ಗುರುವಾರ ರೋಗಿಗಳಿಗೆ ನೆರವಾಗುವ ಸತ್ಕಾರ್ಯದ ಮೂಲಕ ಮಂಗಳನಾಥಸ್ವಾಮೀಜಿವರ ಜನ್ಮದಿನವನ್ನು ಆಚರಿಸಿದರು.

ಈ ವೇಳೆ ಮಾತನಾಡಿದ ಚುಂಚಶ್ರೀ ಪ್ರತಿಷ್ಟಾನದ ರಾಜ್ಯ ಉಪಾಧ್ಯಕ್ಷರಾದ ಉಷಾ ಆಂಜನೇಯರೆಡ್ಡಿ ಭೈರವೈಕ್ಯ ಶ್ರೀ ಬಾಲಗಂಗಾಧರನಾಥಸ್ವಾಮಿ ಅವರ ಕೃಪಾಶೀರ್ವಾದದೊಂದಿಗೆ,ಆದಿಚುAಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರ ಆಶೀರ್ವಾದದಿಂದ ಗುರುವಾರವಾದ ಇಂದು ಶ್ರೀ ಮಂಗಳನಾಥಸ್ವಾಮೀಜಿ ಅವರ ೫೦ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಹೆರಿಗೆ ವಾರ್ಡಿನಲ್ಲಿರುವ ಎಲ್ಲಾ ತಾಯಂದಿರಿಗೆ ಗುರುಗಳ ಆಶೀರ್ವಾದ ದೊರೆತು ತಾಯಿ ಮತ್ತು ಮಗು ಸುರಕ್ಷಿತವಾಗಿ ಮನೆಗೆ ತೆರಳಲಿ ಎನ್ನುವ ಕಾರಣಕ್ಕೆ ಸೇವಾ ಕಾರ್ಯವನ್ನು ಇಲ್ಲಿ ಹಮ್ಮಿಕೊಂಡಿದ್ದೇವೆ ಎಂದರು.

ಚುAಚಶ್ರೀ ಪ್ರತಿಷ್ಟಾನವು ಒಂದು ವರ್ಷದಿಂದ ಮಹಿಳೆಯರಿಗೆ ಸೀಮಿತವಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಶ್ರೀಗಳ ಜನ್ಮದಿನಕ್ಕೆ ಇದು ಮೊದಲ ಸೇವಾ ಕಾರ್ಯಕ್ರಮವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ರೀತಿಯ ಸೇವಾ ಕಾರ್ಯಕ್ರಮಗಳನ್ನು ಹಾಕಿಕೊಂಡು ಶ್ರೀಗಳ ಆಶೀರ್ವಾದದಲ್ಲಿ ಸಂಘಟನೆ ಮುನ್ನಡೆಯಲಿದೆ.ಚಳಿಗಾಲ ಹೆಚ್ಚಿದ್ದು ಮಗುವಿಗೆ ಜನ್ಮನೀಡಿರುವ ತಾಯಂದಿರಿಗೆ ಶೀತವಾಗಬಾರದು ಎನ್ನುವ ಕಾರಣಕ್ಕೆ ಹೊಸ ರಗ್ಗುಗಳನ್ನು ಕೊಡುವ ಜತೆಗೆ ಹಣ್ಣುಹಂಪಲು ನೀಡುತ್ತಿದ್ದೇವೆ.ನಮ್ಮ ಕುಲಗುರುಗಳ ಜನ್ಮದಿನದಂದು ಈ ಸೇವಾಕಾರ್ಯ ಮಾಡುವ ಮೂಲಕ ಪ್ರತಿಷ್ಟಾನಕ್ಕೆ ಹೆಚ್ಚಿನ ಶಕ್ತಿ ಗುರುಗಳ ಮಾರ್ಗದರ್ಶನದ ಮೂಲಕ ದೊರೆಯಲಿ ಎಂದು ಪ್ರಾರ್ಥಿಸು ತ್ತಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷೆ ಶಾಂತಾ ವೆಂಕಟೇಶ್,ಪ್ರಧಾನ ಕಾರ್ಯದರ್ಶಿ ಹೇಮಾ ಜನಾರ್ಧನ್,ಜಿಲ್ಲಾ ಗೌರವಾ ಧ್ಯಕ್ಷೆ ಲೀಲಾಶ್ರೀರಾಮಯ್ಯ ಸೇರಿದಂತೆ ಚುಂಚಶ್ರೀ ಪ್ರತಿಷ್ಟಾನದ ಎಲ್ಲಾ ನಿರ್ದೇಶಕರು ಭಾಗವಹಿಸಿದ್ದರು.

ಇದನ್ನೂ ಓದಿ:chikkaballapurnews