Friday, 27th December 2024

Meghana Shankarappa: ಅಸಲಿ ಬಾಯ್‌ಫ್ರೆಂಡ್‌ ಫೇಸ್ ರಿವೀಲ್ ಮಾಡಿದ ‘ಸೀತಾರಾಮ’ ನಟಿ!

ಬೆಂಗಳೂರು: ಕನ್ನಡದ ಅತಿಹೆಚ್ಚು ಟಿಆರ್‌ಪಿ ಹೊಂದಿರುವ ಧಾರಾವಾಹಿಗಳಲ್ಲಿ ಒಂದಾಗಿರುವ ಸೀತಾರಾಮ(SeethaRama) ಸೀರಿಯಲ್(Serial) ನಟಿ ಪ್ರಿಯಾ(priya) ಪಾತ್ರಧಾರಿ ಮೇಘನಾ ಶಂಕರಪ್ಪ(Meghana shankarappa) ಅವರು ನಿಜ ಜೀವನದಲ್ಲಿಯೂ ಕಮಿಟೆಡ್ ಆಗಿದ್ದಾರೆ. ಧಾರಾವಾಹಿಯಲ್ಲಿ ಸೀತಾರಾಮ ಮದುವೆಗೂ ಮುನ್ನ ಅಶೋಕ್ ಹಾಗೂ ಪ್ರಿಯಾ ಮದುವೆ ಆಗಿತ್ತು. ಆದರೆ, ಸ್ಟಿಲ್ ಬ್ಯಾಚುಲರ್ ಹುಡುಗಿಗೆ ಮನಸೋತ ಅಭಿಮಾನಿಗಳು ಸಾಕಷ್ಟಿದ್ದರು. ಆದರೆ, ಇದೀಗ ನಟಿ ಮೇಘನಾ ಶಂಕರಪ್ಪ ತಮ್ಮ ಭಾವಿ ಪತಿಯನ್ನು ವೀಕ್ಷರಿಗೆ ಪರಿಚಯಿಸಿದ್ದು, ನಿಜ ಜೀವನದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಹೌದು, ಕೆಲ ದಿನಗಳ ಹಿಂದೆ ಮೇಘನಾ ಅವರು, ತಾವು ಕಮಿಟೆಡ್ ಎನ್ನುವುದನ್ನು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದರು. ತಮ್ಮ ಬಾಯ್‌ಫ್ರೆಂಡ್ ಜನ್ಮದಿನದ ಪ್ರಯುಕ್ತ ಇಬ್ಬರೂ ಒಂದೇ ತರಹದ ಉಂಗುರ ಧರಿಸಿ ಕೈಮೇಲೆ ಕೈ ಇಟ್ಟು ಫೋಟೋ ತೆಗೆದುಕೊಂದು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡು ವಿಶ್ ಮಾಡಿದ್ದರು. ಇದರಿಂದ ಮೇಘನಾ ಕಮಿಟೆಡ್ ಎಂಬುದು ಈಗ ಶೇ.100 ಸಾಬೀತಾಗಿತ್ತು. ಈಗ ನಟಿ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಬಾಳ ಸಂಗಾತಿಯಾಗಲಿರುವ ಹುಡುಗನ ಮುಖ ಪರಿಚಯ ಮಾಡಿಸಿದ್ದು, ತನ್ನ ಇನಿಯನನ್ನು ಸ್ಪೆಷಲ್ ವಿಡೀಯೋದ ಮೂಲಕ ಅಭಿಮಾನಿಗಳಿಗೆ ಪ್ರಿಯಾ ಇಂಟ್ರೊಡ್ಯೂಸ್ ಮಾಡಿದ್ದಾರೆ.

ಸದ್ಯ ಆ ವಿಡೀಯೋವನ್ನು ತಮ್ಮ ಇನ್ ಸ್ಟಾಗ್ರಾಮ್(Instagram) ಖಾತೆಯಲ್ಲಿ ಆಪ್ಲೋಡ್ ಮಾಡಿದ್ದು, ಒಂದೊಳ್ಳೆ ಹಿನ್ನೆಲೆ ಗಾಯನದ ಮೂಲಕ ರೆಸ್ಟೋರೆಂಟ್‌ ಒಂದರಲ್ಲಿ ಫಿಲ್ಂ ಸ್ಟೈಲ್‌ನಲ್ಲಿಯೇ ಪತಿಯನ್ನು ತೋರಿಸಿದ್ದಾರೆ ನಟಿ. ಅವರ ಹೆಸರು ಜಯಂತ್‌ ಎನ್ನುವುದನ್ನು ಕ್ಯಾಪ್ಷನ್‌ ಮೂಲಕ ತಿಳಿಸಿದ್ದಾರೆ. One step closer to Forever, Meet Jayanth ಎಂದು ಬರೆದುಕೊಂಡಿದ್ದಾರೆ.

ಇನ್ನು ಸೀತಾರಾಮ ಸೀರಿಯಲ್‌ನಲ್ಲಿ ನಾಯಕ ಪಾತ್ರಧಾರಿಗಳಾದ ಸೀತಾ ಹಾಗೂ ರಾಮ ಪಾತ್ರಗಳನ್ನು ಹೊರತು ಪಡಿಸಿದರೆ ಮತ್ತೆ ಮುನ್ನೆಲೆಗೆ ಕಾಣಿಸಿಕೊಳ್ಳುವ ಪಾತ್ರಗಳಲ್ಲಿ ಸಿಹಿ, ಪ್ರಿಯಾ ಮತ್ತು ಅಶೋಕ್ ಪಾತ್ರಗಳಾಗಿವೆ. ಅದರಲ್ಲಿ ಸೀತಾಳ ಸ್ನೇಹಿತೆಯಾಗಿರುವ ಪ್ರಿಯಾ ಎಲ್ಲರ ಗಮನ ಸೆಳೆಯುತ್ತಿದ್ದಾಳೆ. ಮದುವೆಗೂ ಮುನ್ನ ಸೀತಾಳ ಸ್ನೇಹಿತೆಯಾಗಿ ಜವಾಬ್ದಾರಿ ಇಲ್ಲದ ಹುಡುಗಿ ಎಂದು ತೋರಿಸಲಾಗಿದ್ದರೂ, ಮದುವೆಯ ನಂತರ ಪ್ರಿಯಾಳಿಗೆ ಜವಾಬ್ದಾರಿಯುತ ಪಾತ್ರಗಳನ್ನು ಕೊಡಲಾಗಿದೆ. ಹೀಗಾಗಿ, ಸಾಕಷ್ಟು ಅಭಿಮಾನಿಗಳನ್ನು ಗಳಿಸಿದ್ದಾಳೆ.

ಅಷ್ಟೇ ಅಲ್ಲದೇ ಸೀತಾರಾಮ ಸೀರಿಯಲ್​ನಲ್ಲಿ ಇವರ ಮತ್ತು ಅಶೋಕ್​ ಜೋಡಿ ನೋಡಿ ಇಬ್ಬರೂ ನಿಜ ಜೀವನದಲ್ಲಿಯೂ ಮದ್ವೆಯಾಗಿ ಅಂತಿದ್ದೋರೇ ಹೆಚ್ಚು. ಅಭಿಮಾನಿಗಳು ಅಂದ್ರೆ ಹಾಗೇ ಅಲ್ವಾ? ಒಂದು ಸೀರಿಯಲ್​ನಲ್ಲಿ ನಾಯಕ-ನಾಯಕಿ ಅಥವಾ ಒಂದು ಜೋಡಿ ಸೂಪರ್​ ಹಿಟ್​ ಆಯ್ತು ಅಂದ್ರೆ ಸಾಕು, ನಿಜ ಜೀವನದಲ್ಲಿಯೂ ಒಂದಾಗಿ ಅನ್ನುತ್ತಾರೆ. ಸೀತಾ ಮತ್ತು ರಾಮ್​ ಪಾತ್ರಧಾರಿಗಳಿಗೂ ಈ ಮಾತನ್ನು ಅದೆಷ್ಟೋ ಬಾರಿ ವೀಕ್ಷಕರಿಂದ ಕೇಳಿಬಂದಿರುವುದು ಇದೆ. ಅಶೋಕ್​ ಮತ್ತು ಪ್ರಿಯಾ ಪಾತ್ರವನ್ನು ಅಭಿಮಾನಿಗಳು ಅದೆಷ್ಟು ಮೆಚ್ಚಿಕೊಂಡಿದ್ದಾರೆ ಎಂದರೆ, ನಿಜ ಜೀವನದಲ್ಲಿಯೂ ಇಬ್ಬರೂಮದುವೆಯಾಗಿ ಪ್ಲೀಸ್​, ನಿಮ್ಮ ಜೋಡಿ ಸೂಪರ್​ ಎಂದು ಅಭಿಮಾನಿಗಳು ಕಮೆಂಟ್​ ಮಾಡುತ್ತಿದ್ದರೆ, ಅವರಿಗೆಲ್ಲಾ ಮೇಘನಾ ಇದಾಗಲೇ ಬಾಯ್​ಫ್ರೆಂಡ್​ ವಿಷಯ ತಿಳಿಸಿದ್ದಾರೆ.

ಮೇಘನಾ ಶಂಕರಪ್ಪ ಅವರ ಬಣ್ಣದ ಬದುಕಿನ ಕುರಿತು ಹೇಳುವುದಾದರೆ, ‘ಸೀತಾರಾಮ’ ಸೀರಿಯಲ್​ಗೂ ಮುನ್ನ ಅವರು, ನಟಿಸಿದ್ದು ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಖಳನಾಯಕಿ ನೇತ್ರಾ ಪಾತ್ರದ ಮೂಲಕ ಗಮನ ಸೆಳೆದಿದ್ದರು ಮೇಘನಾ ಶಂಕರಪ್ಪ.

ನಿರೂಪಕಿಯಾಗಿ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದ ಮೇಘನಾ ಶಂಕರಪ್ಪ ನಟನೆಗೆ ಕಾಲಿಟ್ಟಿದ್ದು ‘ಕಿನ್ನರಿ’ ಧಾರಾವಾಹಿಯ ನಂತರ. ಮುಂದೆ ‘ಕೃಷ್ಣ ತುಳಸಿ’, ‘ರತ್ನಗಿರಿ ರಹಸ್ಯ’, ‘ದೇವಯಾನಿ’, ‘ಸಿಂಧೂರ’ ಹೀಗೆ ಕೆಲವೊಂದು ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದ ಮೇಘನಾ ಅವರು ಸದ್ಯ ಪ್ರಿಯಾ ಆಗಿ ಬದಲಾದುದು ಕಿರುತೆರೆ ವೀಕ್ಷಕರಿಗೆ ಖುಷಿ ತಂದಿದೆ. ಪಾಸಿಟಿವ್ ಆಗಿರಲಿ, ನೆಗೆಟಿವ್ ಆಗಿರಲಿ ಯಾವುದೇ ಪಾತ್ರ ನೀಡಿದರೂ ಅಚ್ಚುಕಟ್ಟಾಗಿ ಜೀವ ತುಂಬುವ ಮೇಘನಾ ಎರಡು ಶೇಡ್ ಪಾತ್ರವಿರುವ ಪಾತ್ರದ ಮೂಲಕ ಗುರುತಿಸಿಕೊಂಡಾಕೆ. ಕಿರುತೆರೆ ಅಂಗಳದಲ್ಲಿ ಭಿನ್ನ ಪಾತ್ರಗಳ ಮೂಲಕ ಮೋಡಿ ಮಾಡುತ್ತಿರುವ ಈಕೆಗೆ ಹಿರಿತೆರೆಯಲ್ಲಿ ಕಾಣಿಸಿಕೊಳ್ಳುವ ಆಸೆಯೂ ಇದೆ.

ಈ ಸುದ್ದಿಯನ್ನೂ ಓದಿ: Viral Video: ಶಾಲಾ ಮಕ್ಕಳ ಬಾಯಲ್ಲಿ ಅನುರಣಿಸಿದ ಗಾಯಕ ದಿಲ್ಜಿತ್ ದೋಸಾಂಜ್ ಹಿಟ್ ಹಾಡು; ಹೃದಯಸ್ಪರ್ಶಿ ವಿಡಿಯೊ ವೈರಲ್