Friday, 27th December 2024

Shah Rukh Khan: ಮದುಮಗಳಿಗೆ ಕಿಂಗ್ ಖಾನ್ ಕಾಂಪ್ಲಿಮೆಂಟ್… ವೈರಲ್ ವಿಡಿಯೋದಲ್ಲೇನಿದೆ?

ನವದೆಹಲಿ: ಬಾಲಿವುಡ್(Bollywood) ಸೂಪರ್‌ ಸ್ಟಾರ್ ಶಾರುಖ್ ಖಾನ್(Shah Rukh Khan) ಅವರ ಪ್ರತಿಭೆ, ಕಲೆ, ಶ್ರಮ, ಸಿನಿಮಾಗೆ ಅವರ ಅಭಿನಯದ ಸಮರ್ಪಣೆಯಂತಹ ಅಂಶ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಲು ಸಹಾಯ ಮಾಡಿದೆ ಎಂಬುದರಲ್ಲಿ ಸಂದೇಹವಿಲ್ಲ. ಸೆಲೆಬ್ರಿಟಿಯಾಗಲಿ ಅಥವಾ ಅಭಿಮಾನಿಯಾಗಲಿ ಪ್ರತಿಯೊಬ್ಬರೊಂದಿಗೂ ನಡೆದುಕೊಳ್ಳುವ ರೀತಿ, ಪ್ರೀತಿ-ವಾತ್ಸಲ್ಯದ ಗುಣ ಹೆಚ್ಚಿನವರ ಮೆಚ್ಚುಗೆಗೆ ಪಾತ್ರವಾಗಿದೆ. ಇದೀಗ ಇಂತದೇ ಒಂದು ವಿಡೀಯೋ ಸಾಮಾಜಿಕ ಜಾಲತಾಣದಲ್ಲಿ(Social media) ವೈರಲ್(Viral) ಆಗಿದ್ದು, ಎಸ್​​ಆರ್​ಕೆ ನವ ಜೀವನಕ್ಕೆ ಕಾಲಿಡುತ್ತಿರುವ ಮಧುಮಗಳನ್ನು ಹಾಡು ಹೊಗಳಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ(social media) ಸದ್ದು ಮಾಡುತ್ತಿದೆ​. ಈ ಮೂಲಕ ಹೆಸರಾಂತ ನಟ, ಮತ್ತೊಮ್ಮೆ ತಮ್ಮ ಅಭಿಮಾನಿಗಳ ಮೇಲೆ ತಮಗಿರುವ ಅಗಾಧ ಪ್ರೀತಿಯನ್ನು ಸಾಬೀತುಪಡಿಸಿದ್ದಾರೆ.

ಬಾಲಿವುಡ್ ನಟ ಶಾರೂಖ್ ಖಾನ್(Shah Rukh Khan) ದೇಶ ಸೇರಿದಂತೆ ವಿದೇಶಗಳಲ್ಲಿಯೂ ಲಕ್ಷಾಂತರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇದೀಗ ಕಿಂಗ್​ ಆಫ್​ ರೊಮ್ಯಾನ್ಸ್ ಶಾರುಖ್ ಖಾನ್ ದೆಹಲಿಯಲ್ಲಿ ನಡೆದ ಮದುವೆಯೊಂದರಲ್ಲಿ ಪಾಲ್ಗೊಂಡಿದ್ದು, ವಧು-ವರರ ಜೊತೆ ಹೆಜ್ಜೆ ಹಾಕಿದ್ದಾರೆ.

ಅಷ್ಟೇ ಅಲ್ಲದೇ ವಧುವಿನ ಅಂದವನ್ನು ಹಾಡಿ ಹೊಗಳಿದ್ದು, ಬ್ರೈಡ್ ಮೇಕಪ್ ಕುರಿತು ಕಂಪ್ಲೀಮೆಂಟ್ ನೀಡಿದ್ದಾರೆ.. ಸದ್ಯ ಆ ವಿಡೀಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದ್ದು, ವಧುವನ್ನು ಶೃಂಗಾರಿಸಿದ ಮೇಕಪ್ ಆರ್ಟಿಸ್ಟ್ ಅಮೃತಾ ಕೌ‌ರ್ ಈ ವಿಡೀಯೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ..

ಇದೇ ವೇಳೆ ಬಿಟೌನ್ ಕಿಂಗ್‌ಖಾನ್ ಬಗ್ಗೆಯೂ ಹೊಗಳಿ ಮಾತಾನಾಡಿದ್ದು, ಶಾರೂಖ್ ಖಾನ್ ನೀವು ವಧುವಿಗೆ ನೀಡಿದ ಕಂಪ್ಲೀಮೆಂಟ್ ಯಿಂದ ನನ್ನ ಕೆಲಸವನ್ನು ಗುರುತಿಸಿದಂತಾಗಿದೆ. ಇದರಿಂದ ನನ್ನ ಪರಿಶ್ರಮಕ್ಕೆ ಬೆಲೆ ಸಿಕ್ಕಿದ್ದು, ನಿಮ್ಮ ಮಾತುಗಳು ಈ ವೃತ್ತಿಯಲ್ಲಿ ಮುಂದುವರೆಯಲು ಸ್ಪೂರ್ತಿ ನೀಡಿದ್ದರೆ, ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವುದಕ್ಕೆ ಸಾರ್ಥಕ ಎಂದೆನಿಸಿದೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ವಿಡಿಯೋಗೆ ಶಾರುಖ್ ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ. ವಧು ಅದೃಷ್ಟಶಾಲಿ ಆದರೆ ಯಾರಾದರೂ ನನ್ನ ಕನಸನ್ನು ಬದುಕಿಸಬಾರದೆ, ಈ ಮದುವೆಯಲ್ಲಿ ಭಾಗವಹಿಸಲು ಶಾರೂಖ್ ಎಷ್ಟು ಹಣವನ್ನು ತೆಗೆದುಕೊಂಡಿರಬಹುದು, ಶಾರೂಖ್ ಕನಿಷ್ಠ 60 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ಹಣವನ್ನು ತೆಗೆದುಕೊಂಡಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ.ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿರುವ ಅಮೃತಾ, ಅವರು ಫ್ಯಾಮಿಲಿ ಫ್ರೆಂಡ್ ಎಂದಿದ್ದಾರೆ. ಶಾರೂಖ್ ಸದ್ಯ ಕಿಂಗ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸುಜೋಯ್ ಘೋಷ್ ನಿರ್ದೇಶನದ ಈ ಚಿತ್ರದಲ್ಲಿ ಶಾರೂಖ್ ಪುತ್ರಿ ಸುಹಾನಾ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಈ ಸುದ್ದಿಯನ್ನು ಓದಿ: Actor Dharmendra: ವಂಚನೆ ಪ್ರಕರಣ; ಬಾಲಿವುಡ್‌ ಹಿರಿಯ ನಟ ಧರ್ಮೇಂದ್ರಗೆ ಸಮನ್ಸ್