ಸಿಂಧನೂರು: ಕ್ಷೇತ್ರದಲ್ಲಿ ಇಲ್ಲಿವರೆಗೂ ಬಣಗಳು ಇದ್ದವು ಇನ್ನು ಮುಂದೆ ಯಾವುದೇ ಬಣಗಳು ಇರುವುದಿಲ್ಲ ಒಗ್ಗಟ್ಟಾಗಿ ಚುನಾವಣೆಗಳನ್ನು ಎದುರಿಸುತ್ತೇವೆ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು ಅವರು ಗಂಗಾವತಿ ರಸ್ತೆಯಲ್ಲಿ ಇರುವ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಶನಿವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಪಕ್ಷದ ರಾಜ್ಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಮಾರ್ಗ ಸೂಚನೆಯಂತೆ ಕ್ಷೇತ್ರದಲ್ಲಿ ಯಾವುದೇ ಬಣಗಳು ಇಲ್ಲದಂತೆ ಒಗ್ಗಟ್ಟಾಗಿ ಗ್ರಾಮ ಪಂಚಾಯತಿ ಚುನಾವಣೆ ಎದುರಿಸಲು ಸಿದ್ಧರಿದ್ದೇವೆ ಶೇಷಗಿರಿರಾವ್ ಹಾಗೂ ಅಮರೇಗೌಡ ವಿರುಪಾಪುರ ಬಣಗಳು ಇನ್ ಮುಂದೆ ಇರುವುದಿಲ್ಲ ಎಲ್ಲರೂ ಪಕ್ಷಕ್ಕಾಗಿ ದುಡಿಯುವ ಕೆಲಸ ಮಾಡುತ್ತೇವೆ ಕಾರ್ಯಕರ್ತರಿಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ ಸಿಂಧನೂರು ಕ್ಷೇತ್ರದಲ್ಲಿ ಕೇಸರಿ ಧ್ವಜ ಹಾರಿಸಲು ಪಕ್ಷದ ಕಾರ್ಯಕರ್ತರು ಸಿದ್ಧರಾಗಬೇಕು ಎಂದರು.
ರಾಜ್ಯ ಬಿಜೆಪಿ ಕಾರ್ಯದರ್ಶಿ ಜಗದೀಶ್ ಹಿರೇಮನಿ ಮಾತನಾಡಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿಪರ ಯೋಜನೆಗಳು ಹಾಗೂ ಅನೇಕ ಹೊಸ ಹೊಸ ಕಾಯ್ದೆಗಳು ಜನ ಮೆಚ್ಚುಗೆ ಗಳಿಸುವ ರೀತಿಯಲ್ಲಿ ಇದ್ದಾವೆ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದ ಸರ್ಕಾರ ಅನೇಕ ಬಡವರಿಗೆ ಸಹಾಯ ಹಸ್ತ ನೀಡುವ ಕೆಲಸ ಮಾಡುತ್ತಿದೆ, ಗ್ರಾಮೀಣ ಪ್ರದೇಶಕ್ಕೆ ಅನೇಕ ಯೋಜನೆಗಳು ಜಾರಿಗೆ ತಂದ ಸರ್ಕಾರ ಬಿಜೆಪಿ ಆಗಿದೆ.
ಈ ಬಾರಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳಿಗೆ ಬೆಂಬಲಿಸಬೇಕು ಕಾರ್ಯಕರ್ತರು ಎಂದರು ಬಿಜೆಪಿ ಪಕ್ಷ ಒಂದು ಶಿಸ್ತಿನ ಪಕ್ಷವಾಗಿದೆ ರಾಜ್ಯದಲ್ಲಿ ಯಾವ ಹಳ್ಳಿಗಳಲ್ಲೂ ಸಹ ಬಣಗಳು ಇನ್ನು ಮುಂದೆ ಇರುವುದಿಲ್ಲ ಪ್ರತಿಯೊಬ್ಬರು ಕಾರ್ಯಕರ್ತರಾಗಿ ಕೆಲಸ ಮಾಡಿ ಮತ್ತಷ್ಟು ಪಕ್ಷವನ್ನು ಬಲಪಡಿಸುವ ಕೆಲಸ ಮಾಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ರಮಾನಂದ ಯಾದವ್, ಜಿಪಂ ಸದಸ್ಯ ಎನ್ ಶಿವನಗೌಡ ಗೋರೆಬಾಳ, ಬಿಜೆಪಿ ರಾಜ್ಯ ಕಾರ್ಯ ಕಾರಿಣಿ ಸದಸ್ಯ ಶೇಷಗಿರಿರಾವ್ ಕೊಲ್ಲಾ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಾಣೇಶ್ ದೇಶಪಾಂಡೆ, ಶಂಕರರೆಡ್ಡಿ, ಮಧ್ವರಾಜ್ ಆಚಾರ್, ಅಮರೇಗೌಡ ವಿರುಪಾಪುರ, ಮಲ್ಲಿಕಾರ್ಜುನ ,ಹನುಮೇಶ್ ಸಾಲಗುಂದ, ಪ್ರೇಮ ಸಿದ್ಧಾಂತಿ ಮಠ ಇತರರು ಇದ್ದರು.