Thursday, 31st October 2024

ಕೌಜಲಗಿಯಲ್ಲಿ ಕಬ್ಬಿನ ತೋಟಕ್ಕೆ ಆಕಸ್ಮಿಕ ಬೆಂಕಿ

ಕೌಜಲಗಿ: ಪಟ್ಟಣದ ಕುಲಗೋಡ ರಸ್ತೆಯ ಅಮಿತ ವಾಮನರಾವ್ ಕುಲಕರ್ಣಿ ಅವರ ಕಬ್ಬಿನ ತೋಟಕ್ಕೆ ಭಾನುವಾರ ಆಕಸ್ಮಿಕ ಬೆಂಕಿ ತಗುಲಿ ಬೆಳೆ ನಾಶವಾಗಿದೆ.

ಇಲ್ಲಿಯ ಸರ್ಕಾರಿ ಆಸ್ಪತ್ರೆ ಹತ್ತಿರದ ಅಮಿತ ವಾಮನರಾವ್ ಕುಲಕರ್ಣಿ ರೈತರು ಸುಮಾರು 2.5 ಎಕರೆ ಭೂಮಿಯಲ್ಲಿ ಕಬ್ಬು ಬೆಳೆ ಬೆಳೆದಿದ್ದರು. ಕಬ್ಬು ಕೆಲವೇ ದಿನಗಳಲ್ಲಿ ಕಟಾವಿಗೆ ಬಂದಿತ್ತು. ಅಷ್ಟರಲ್ಲಿ ತೋಟದಲ್ಲಿ ವಿದ್ಯುತ್ ಕಂಬದಲ್ಲಿ ಶಾರ್ಟ ಸರ್ಕೀಟ್‍ನಿಂದಾಗಿ ಆಕಸ್ಮಿಕವಾಗಿ ಬೆಂಕಿ ತಗುಲಿದೆ.

ಅಂದಾಜು 2.5 ರಿಂದ 3 ಲಕ್ಷ ರೂಪಾಯಿ ವರೆಗೆ ಕಬ್ಬಿಗೆ ಬೆಂಕಿ ತಗುಲಿರುವು ದರಿಂದ ನಷ್ಟ ವಾಗಿದೆ ಎಂದು ರೈತ ಅಮಿತ್ ಕುಲಕರ್ಣಿ ಹೇಳಿದ್ದಾರೆ.

ಹೆಸ್ಕಾಂದಿಂದ ಪದೇ ಪದೇ ತೊಂದರೆಯಾಗದಂತೆ ಸಂಬಂಧಿಸಿದ ಅಧಿಕಾರಿಗಳು ಕಾಳಜಿ ವಹಿಸಬೇಕು ಹಾಗೂ ಸರಕಾರ ತಕ್ಷಣವೇ ನಮ್ಮ ಕಬ್ಬಿನ ತೋಟಕ್ಕೆ ಬೆಂಕಿ ತಗುಲಿ ಬೆಳೆ ನಾಶವಾಗಿರುವುದರಿಂದ ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ.