Wednesday, 25th December 2024

BBK 11: ಬಿಗ್ ಬಾಸ್ ಮನೆಯಲ್ಲಿ ಕೂಗಾಡಿ, ರಂಪಾಟ ಮಾಡಿದ ಚೈತ್ರಾ ಕುಂದಾಪುರ: ಕಾರಣವೇನು?

Chaithra vs Aishwarya

ಬಿಗ್ ಬಾಸ್ ಕನ್ನಡ ಸೀಸನ್ 11 (Bigg Boss Kannada 11) ಹದಿಮೂರನೇ ವಾರಕ್ಕೆ ಕಾಲಿಟ್ಟಿದೆ. ಮನೆಯಲ್ಲಿ ಸದ್ಯ ಹತ್ತು ಮಂದಿ ಇದ್ದಾರಷ್ಟೆ. ಅಂತಿಮ ಘಟ್ಟದತ್ತ ತಲುಪುತ್ತಿರುವ ಸೀಸನ್​ನಲ್ಲಿ ಟಾಸ್ಕ್​ಗಳ ಕಾವು ಏರುತ್ತಿದೆ. ಮನೆಯಲ್ಲಿ ಉಳಿದುಕೊಂಡು ಫೈನಲ್ ವರೆಗೆ ತಲುಪಲು ಸ್ಪರ್ಧಿಗಳು ನಾನಾ ಕಸರತ್ತು ನಡೆಸುತ್ತಿದ್ದಾರೆ. ಈ ವಾರ ಮನೆಮಂದಿಗೆ ಇನ್ನಷ್ಟು ಕಠಿಣ ಟಾಸ್ಕ್ ಎದುರಾಗಲಿದೆ. ಅದು ಮೊದಲ ದಿನದಿಂದಲೇ ಶುರುವಾಗಿದೆ.

ಇಷ್ಟು ದಿನ ಗುಂಪು ಗುಂಪಾಗಿ ನಾಮಿನೇಟ್, ಟಾಸ್ಕ್ ಮಧ್ಯೆ ಒಪ್ಪಂದ ಮಾಡಿಕೊಂಡು ಬರುತ್ತಿದ್ದವರೆಲ್ಲ ಈಗ ವೈಯಕ್ತಿಕ ಆಟ ಶುರುಮಾಡಿಕೊಂಡಿದ್ದಾರೆ. ತಮ್ಮ ಸ್ನೇಹಿತರನ್ನೇ ಟಾರ್ಗೆಟ್ ಮಾಡುತ್ತಿದ್ದಾರೆ. ಇದರ ಮೊದಲ ಭಾಗವಾಗಿ ಇಂದು ಚೈತ್ರಾ ಕುಂದಾಪುರ ಹಾಗೂ ಐಶ್ವರ್ಯಾ ಸಿಂಧೋಗಿ ಮಧ್ಯೆ ಮನೆಯಲ್ಲಿ ಬೆಂಕಿ ಹತ್ತಿಕೊಂಡಿದೆ. ಇಬ್ಬರು ಜೋರಾಗಿ ಕಿತ್ತಾಡಿಕೊಂಡಿದ್ದಾರೆ. ಅದರಲ್ಲೂ ಚೈತ್ರಾ ಕೂಗಾಡಿ ರಂಪಾಟ ಮಾಡಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಎಚ್ಚೆತ್ತುಕೊಳ್ಳಬೇಕಿರುವ ಸದಸ್ಯರು ಯಾರು ಎಂದು ಹೇಳಬೇಕು. ಅವರ ಮುಖಕ್ಕೆ ಟೀ ಚೆಲ್ಲಬೇಕು ಎಂಬ ಟಾಸ್ಕ್ ನೀಡಿದ್ದಾರೆ. ಈ ಟಾಸ್ಕ್​ನಲ್ಲಿ ಮೊದಲಿಗೆ ಗೌತಮಿ ಅವರು ಉಗ್ರಂ ಮಂಜು ಅವರ ಮುಖಕ್ಕೆ ಟೀ ಎರಚಿದ್ದಾರೆ. ಗೌತಮಿ ಅವರು ಇದ್ದಾಗ ಮಂಜು ಮಾತನಾಡಲ್ಲ. ಗೌತಮಿ ಅವರಿಗೆ ಹೆದರಿಕೊಳ್ಳುತ್ತಾರೆ. ಹಾಗಾಗಿ ಅವರು ಎಚ್ಚೆತ್ತುಕೊಳ್ಳಬೇಕೆಂದು ಹೇಳಿದ್ದಾರೆ.

ಮಂಜು ಚೈತ್ರಾ ಮುಖಕ್ಕೆ ಟೀ ಚೆಲ್ಲಿದ್ದಾರೆ. ಐಶ್ವರ್ಯ ಮುಖಕ್ಕೆ ಭವ್ಯ ಕೂಡ ಎಚ್ಚೆತ್ತುಕೋ ಎಂದು ಚಹಾ ಚೆಲ್ಲಿದರು. ಆದರೆ ಮನೆಯಲ್ಲಿ ಟಾರ್ಗೆಟ್ ನಾಮಿನೇಷನ್ ವಿಷಯವಾಗಿ ಐಶರ್ಯ ಹಾಗೂ ಚೈತ್ರಾ ನಡುವೆ ಟಾಕ್ ವಾರ್ ನಡೆದಿದೆ. ಐಶ್ವರ್ಯಾ ಅವರು ಚೈತ್ರಾ ಅವರ ಹೆಸರು ಹೇಳಿದ್ದಾರೆ. ನಿಮ್ಮ ಆಟಗಳಿಗೆ ನಾನು ಬಲಿಪಶು ಆದೆ ಈ ವಾರ ಎಂದಿದ್ದು, ಇದಕ್ಕೆ ಚೈತ್ರಾ ಅವರು, ಟಾರ್ಗೆಟ್‌ ನಾಮಿನೇಷನ್‌ ಎನ್ನುವ ಮಾತು ಇದೇ ಐಶ್ವರ್ಯಾ ಅವರ ಬಾಯಿಯಿಂದಲೇ ಬಂದಿದ್ದು ಎಂದಿದ್ದಾರೆ. ಐಶ್ವರ್ಯಾ ಅವರು, ಹೇ ತುಂಬಾ ಚೆನ್ನಾಗಿ ಸುಳ್ಳು ಹೇಳ್ತಾನೇ ಇದ್ದೀರಾ. ಬಾಯಿ ಮುಚ್ಚೆ ಸಾಕು ಎಂದು ಗರಂ ಆಗಿ ಹೇಳಿದ್ದಾರೆ.

ಇದರಿಂದ ಮತ್ತಷ್ಟು ಕೆರಳಿದ ಚೈತ್ರಾ, ಬಾಯಿ ಮುಚ್ಚೆ ಅಂತ ಐಶ್ವರ್ಯ ಹೇಳಿದಾಗ ಚೈತ್ರಾ ಕೈಯನ್ನು ಜೋರಾಗಿ ಟೇಬಲ್​ಗೆ ಗುದ್ದಿದ್ದರಿಂದ ಕೈಯಲ್ಲಿದ್ದ ಬಳೆಗಳು ಪೀಸ್ ಪೀಸ್ ಆಗಿವೆ. ಮುಚ್ಚುಕೊಂಡು ಇರೇ.. ನೀವು ಎಂದು, ಚೈತ್ರಾ ಹೇಳಿದ್ದಾರೆ. ಇಬ್ಬರ ನಡುವೆ ಮಾತಿನ ಯುದ್ಧವೇ ನಡೆದಿದ್ದು ಎಷ್ಟೇ.. ಮಾತನಾಡುತ್ತಿಯಾ ಎಂದು ಕ್ಯಾಪ್ಟನ್ ಭವ್ಯ ಹೇಳಿದರೂ ಚೈತ್ರಾ ಸುಮ್ಮನಾಗಿಲ್ಲ. ಇದನ್ನೆಲ್ಲ ಕಂಡು ಮನೆಮಂದಿಗೆ ಆಘಾತವಾಗಿದೆ.

BBK 11: ಬಿಗ್ ಬಾಸ್ ಮನೆಗೆ ಮತ್ತೆ ಹೋಗ್ತಾರ ಗೋಲ್ಡ್ ಸುರೇಶ್?: ಇಲ್ಲಿದೆ ಖಚಿತ ಮಾಹಿತಿ