Wednesday, 25th December 2024

Abhishek Ambareesh: ಅವೀವಾ-ಅಭಿಷೇಕ್ ಅಂಬರೀಶ್‌ ದಂಪತಿ ಮಸ್ತ್‌ ಫೊಟೋ ಶೂಟ್‌

ಬೆಂಗಳೂರು: ಕನ್ನಡ ಚಿತ್ರರಂಗ ಕರ್ಣ ರೆಬೆಲ್ ಸ್ಟಾರ್ ಅಂಬರೀಶ್ (Ambareesh) ಪುತ್ರ ಜ್ಯೂನಿಯರ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ (Abhishek Ambareesh) ಮತ್ತು ಅವಿವಾ ಬಿದ್ದಪ್ಪ(Aviva Biddappa) ಗೆ ಇತ್ತೀಚೆಗೆ ಗಂಡು ಮಗುವಿಗೆ ಜನ್ಮ ನೀಡಿದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ ಸ್ಪರ್ಶ್‌ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಅವಿವಾ ಜನ್ಮ ನೀಡಿದ್ದು, ಮೊಮ್ಮಗನನ್ನು ಹಿಡಿದು ಮಾಜಿ ಸಂಸದೆ ಸುಮಲತಾ ಭಾವುಕರಾಗಿದ್ದರು. ತಾಯಿ ಅವೀವಾ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ಕುಟುಂಬ ಮಾಹಿತಿ ಹಂಚಿಕೊಂಡಿತ್ತು.

ಸದ್ಯ ತಾಯ್ತನವನ್ನು ಎಂಜಾಯ್ ಮಾಡುತ್ತಿರುವ ಅವಿವಾ ತಮ್ಮ ಪ್ರೀತಿಯ ಪತಿಯೊಂದಿಗೆ ಸಖತ್ ಫೋಟೋ ಶೂಟ್ ಮಾಡಿಸಿದ್ದು, ಸದ್ಯ ಸೋಷಿಯಲ್ ಮೀಡಿಯಾ(Soacial Media)ದಲ್ಲಿ ಫೋಟೋ ವೈರಲ್ ಆಗಿವೆ.

ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಪೋಷಕರ ಒಪ್ಪಿಗೆ ಮೇಲೆ ಜೂನ್ 5, 2023ರಂದು ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡ್ಡಪ್ಪ ಪುತ್ರಿ ಅವಿವಾ ಸ್ಟಾರ್ ನಟನನ್ನು ಮದುವೆಯಾದರೂ ಸಿಕ್ಕಾಪಟ್ಟೆ ಸಿಂಪಲ್ ಆಗಿದ್ದು, ಅತ್ತೆ ಸುಮಲತಾ ಮಾತನನ್ನು ಚಾಚುತಪ್ಪದೆ ಪಾಲಿಸುತ್ತಾರೆ. ಅತ್ತೆ- ಸೊಸೆ ಎಷ್ಟು ಕ್ಲೋಸ್ ಎಂದು ಈ ಹಿಂದೆ ಅಭಿಷೇಕ್ ರಿವೀಲ್ ಮಾಡಿದ್ದರು.

ಆಗಸ್ಟ್‌ ತಿಂಗಳಿನಲ್ಲಿ ಅಂಬರೀಶ್‌ ನಿವಾಸದಿಂದ ಸಿಹಿ ಸುದ್ದಿ ಹೊರ ಬಂದಿದೆ. ಅವಿವಾ ಮೊಗುವಿನ ನಿರೀಕ್ಷೆಯಲ್ಲಿದ್ದಾರೆ ಅನ್ನೋ ಸುದ್ದಿ ಹೊರ ಬಂದರೂ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಗುಡ್‌ ನ್ಯೂಸ್ ರಿವೀಲ್ ಮಾಡಿದ ಬೆನ್ನಲೆ ಅಂಬಿ ಆಪ್ತ ಸ್ನೇಹಿತ ತಮಿಳು ನಟ ಮೋಹನ್ ಬಾಬು ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದಾರೆ. ಸೆಪ್ಟೆಂಬರ್‌ 18, 2024ರಂದು ಅವೀವಾ ಸೀಮಂತ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತ್ತು. ಹಸಿರು ಸೀರೆಯಲ್ಲಿ ಅವೀವಾ ಮಿಂಚಿದ್ದರು, ಫೋಟೋ ನೋಡಿ ಗಂಡು ಮಗುನೇ ಬರುವುದು ಎಂದು ಅಭಿಮಾನಿಗಳು ಗೆಸ್ ಮಾಡಿದ್ದರು.

ಇದೀಗ ಅಭಿ-ಅವಿವಾ ಜೋಡಿ ಮತ್ತೊಂದು ಹೊಸ ಫೋಟೋಶೂಟ್ ಮಾಡಿಸಿದ್ದು, ಪೋಷಕರಾಗಿ ಬಡ್ತಿ ಪಡೆದ ಕ್ಯಾಮೆರಾಕ್ಕೆ ಸಖತ್ ಕ್ಲಾಸಿಯಾಗಿ ಪೋಸ್ ನೀಡಿದ್ದಾರೆ.

ಜೊತೆಗೆ ಆ ಪೋಟೋಗಳನ್ನು ಅವಿವಾ ಬಿದ್ದಪ್ಪ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಜೂ. ಮಂಡ್ಯದ ಗಂಡಿನ ದಂಪತಿ ಫೋಟೋಗಳನ್ನು ಅಭಿಮಾನಿಗಳು ಫಿದಾ ಆಗಿದ್ದು, ಆ ಫೋಟೋಗಳಿಗೆ ಅವಿವಾ ಮಾಮ್ ಆಂಡ್ ಡ್ಯಾಡ್ ಎಂದು ಕ್ಯಾಪ್ಶನ್ ಹಾಕಿದ್ದಾರೆ. ಜೊತೆಗೆ ಹ್ಯಾಪಿ ಹಾಲಿಡೇ, ಮೆರಿ ಕ್ರಿಸ್ಮಸ್, ಹ್ಯಾಪಿ ನ್ಯೂ ಇಯರ್ ಎಂದು ಅಭಿಮಾನಿಗಳಿಗೆ ವಿಶ್ ಮಾಡಿದ್ದಾರೆ.

ಈ ಸುದ್ದಿಯನ್ನು ಓದಿ: Allu Arjun: ಅಲ್ಲು ಅರ್ಜುನ್‌ ಮನೆ ಬಳಿ ಗಲಾಟೆ ಮಾಡಿದ್ದ ಆರೋಪಿಗಳಿಗೆ ಜಾಮೀನು