ಹೈದ್ರಾಬಾದ್: ಪುಷ್ಪ 2 ಪ್ರೀಮಿಯರ್ ಶೋ (Pushpa 2 Premiere Show) ವೇಳೆ ಹೈದರಾಬಾದ್ನಲ್ಲಿ (Hyderabad) ನಡೆದ ಕಾಲ್ತುಳಿತದ ಕೇಸ್ ದಿನದಿಂದ ದಿನಕ್ಕೆ ಹೊಸ ಟ್ಟಿಸ್ಟ್ ಪಡೆಯುತ್ತಿದೆ. ಬೇಲ್ ಸಿಕ್ಕಿ ಹೊರ ಬಂದ್ರು ನಟ ಅಲ್ಲು ಅರ್ಜುನನ್ನು (Allu Arjun) ಪೊಲೀಸರು ಬಿಡ್ತಿಲ್ಲ. ಮತ್ತೆ ನೋಟಿಸ್ ನೀಡಿದ್ರು. ಇಂದು ವಿಚಾರಣೆಗೆ ಹಾಜರಾದ ನಟ ಅಲ್ಲು ಅರ್ಜುನ್ಗೆ ಪೊಲೀಸರು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಪುಷ್ಪರಾಜ್ ವಿಚಾರಣೆ ನಡೆಸಿದ ಪೊಲೀಸರು ನಟನ ಬೌನ್ಸರ್ನನ್ನು ಬಂಧಿಸಿದ್ದಾರೆ. ಈ ಮಧ್ಯೆ ಹಿಟ್ ಡೈರೆಕ್ಟರ್ ಸುಕುಮಾರ್ (Sukumar) ಸಿನಿಮಾರಂಗ ಬಿಡುವ ಬಗ್ಗೆ ಮಾತನಾಡಿರುವ ವಿಡಿಯೋ ವೈರಲ್ (Viral Video) ಆಗುತ್ತಿದೆ.
ರಾಮ್ ಚರಣ್ (Ram Charan) ಅವರ ʼಗೇಮ್ ಚೇಂಜರ್ʼ (Game Changer) ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಅಮೆರಿಕಾದ (USA) ಡಲ್ಲಾಸ್ನಲ್ಲಿ (Dallas) ನಡೆದ ಈ ಪ್ರಚಾರ ಕಾರ್ಯಕ್ರಮದಲ್ಲಿ ಸುಕುಮಾರ್ ಅವರು ʼಗೇಮ್ ಚೇಂಜರ್ʼ ಸೂಪರ್ ಹಿಟ್ ಆಗುತ್ತದೆ. ರಾಮ್ ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ ಎಂದಿದ್ದರು. ಇದೇ ಕಾರ್ಯಕ್ರಮದಲ್ಲಿ ನಿರೂಪಕಿ ಸುಕುಮಾರ್ ಅವರಿಗೆ ಪ್ರಶ್ನೆಯೊಂದನ್ನು ಕೇಳಿದ್ದು, ಈ ಪ್ರಶ್ನೆಗೆ ಸುಕುಮಾರ್ ಕೊಟ್ಟ ಉತ್ತರ ವೈರಲ್ ಆಗಿದೆ.
“ಜೀವನದಲ್ಲಿ ಏನನ್ನು ಬಿಡಲು ಬಯಸುತ್ತೀರಿ..?” ಎಂದು ಕೇಳಿದಾಗ, ಸುಕುಮಾರ್ ತಕ್ಷಣವೇ “ಸಿನಿಮಾ”ಎಂದು ಉತ್ತರಿಸಿದ್ದಾರೆ. ಪಕ್ಕದಲ್ಲಿದ್ದ ರಾಮ್ ಚರಣ್ ಅವರು ಸುಕುಮಾರ್ ಅವರಿಂದ “ಮೈಕ್ ತೆಗೆದುಕೊಂಡು ಇಲ್ಲ ಇಲ್ಲ ಅದು ಆಗುವುದಿಲ್ಲ” ಎಂದು ಉತ್ತರಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ದಂಪತಿಯ ಸರಸ ಸಲ್ಲಾಪ ನೋಡಿ ಪೆಂಗ್ವಿನ್ ಮಾಡಿದ್ದೇನು? ವಿಡಿಯೊ ನೋಡಿ
ಕೆಲ ಸೆಕೆಂಡ್ಗಳ ಈ ವಿಡಿಯೋ ಟಾಲಿವುಡ್ ವಲಯದಲ್ಲಿ ಹರಿದಾಡುತ್ತಿದೆ. ಸಿನಮಾ ಸಂಬಂಧಿತ ಕೆಲಸಗಳ ಒತ್ತಡದಿಂದಾಗಿ ಅವರು ಈ ರೀತಿ ಉತ್ತರಿಸಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಮುಂದೆ ಸುಕುಮಾರ್ ʼಪುಷ್ಪ-3ʼ ಹಾಗೂ ರಾಮ್ ಚರಣ್ ಅವರ ಸಿನಿಮಾದಲ್ಲಿ ಕೆಲಸ ಮಾಡಲಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ, ಸುಕುಮಾರ್ ಕೆಲ ಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಳ್ಳಲಿದ್ದಾರೆ ಎಂದೂ ಹೇಳಲಾಗುತ್ತಿದೆ.