Saturday, 11th January 2025

Relationship tips: ನಿಮ್ಮ ಹೆಂಡ್ತಿ ಜೊತೆ ಮನಸ್ತಾಪ ಬಂದಾಗ ಯಾವುದೇ ಕಾರಣಕ್ಕೂ ಈ ವಿಚಾರಗಳನ್ನು ಹಂಚಿಕೊಳ್ಳಲೇಬೇಡಿ!

husband-wife

ನವದೆಹಲಿ: ಲವ್ ಮ್ಯಾರೇಜ್ ಆಗಿರಲಿ, ಅರೇಂಜ್ಡ್ ಮ್ಯಾರೇಜ್ ಆಗಿರಲಿ, ದಾಂಪತ್ಯ (Relationship tips) ಜೀವನಕ್ಕೆ ಮುಖ್ಯವಾಗಿ ಬೇಕಿರುವುದು ಹೊಂದಾಣಿಕೆ. ವೈವಾಹಿಕ ಜೀವನದಲ್ಲಿ ಪರಸ್ಪರ ಗೌರವ, ಪ್ರೀತಿ  ನಂಬಿಕೆ  ಇಲ್ಲದಿದ್ದಲ್ಲಿ ಸಂಬಂಧಗಳು ಗಟ್ಟಿಯಾಗೋದಿಲ್ಲ. ಹಾಗಾಗಿ ಜೀವಮಾನವಿಡಿ ಜತೆಯಾಗಿ ಇರಬೇಕಾದ ಸಂಗಾತಿಯ ಜತೆಗೆ ಹೇಗೆ ಜೀವನ ಸಾಗಿಸಬೇಕು, ಹೇಗೆ ಇರಬೇಕು  ಎಂದು ತಿಳಿಯುವುದು ಕೂಡ  ಅತೀ ಅಗತ್ಯ. ಆದರೆ ಕೆಲವೊಮ್ಮೆ ನಿಮಗೆ  ಅರಿಯದೆ  ನಿಮ್ಮ ಕೆಲವು ಅಭ್ಯಾಸಗಳು ನಿಮ್ಮ ವೈವಾಹಿಕ ಜೀವನವನ್ನು ಹಾಳು ಮಾಡಬಹುದು .ಹಾಗಾಗಿ ದಾಂಪತ್ಯದಲ್ಲಿ ಸಣ್ಣ ಪುಟ್ಟ ಜಗಳ ಆದಾಗ ನಿಮ್ಮ ಸಂಬಂಧದಲ್ಲಿ ಯಾವುದೇ ಬಿರುಕು ಬಾರದಂತೆ ನೋಡಿಕೊಳ್ಳಲು ಈ  ವಿಷಯಗಳ ಬಗ್ಗೆ ಎಂದಿಗೂ ನಿಮ್ಮ ಪತ್ನಿಯ ಬಳಿಯಲ್ಲಿ ಚರ್ಚಿಸಲು ಹೋಗಬಾರದು.

ನಿಮ್ಮ ಹೆಂಡತಿಯೊಂದಿಗೆ ಜಗಳವಾಡುವಾಗ ನೀವು ಹೇಳಲೇಬಾರದ ವಿಚಾರ:

  • ನಿಮ್ಮ ಪತ್ನಿಯ  ಕೆಲವೊಂದು ಗುಣಗಳು ನಿಮಗೆ ಇಷ್ಟವಾಗದೇ ಇರಬಹುದು. ಆದರೆ ಆ ವಿಚಾರವನ್ನೇ  ಪದೇ ಪದೇ  ಹೇಳಬೇಡಿ. ಅದೇ ವಿಚಾರ ಇಟ್ಟುಕೊಂಡು ಬೆದರಿಕೆ ಹಾಕಲು ಹೋಗಬೇಡಿ ಸದಾ ಅವರನ್ನು ಟೀಕಿಸಲೂಬೇಡಿ.
  • ಗಂಡ ಹೆಂಡತಿಯ ನಡುವಿನಲ್ಲಿ ಜಗಳ ಸಾಮಾನ್ಯ. ಆದರೆ ಆ ಸಂದರ್ಭದಲ್ಲಿ ಆಕೆಯ  ಕುಟುಂಬವನ್ನು  ಟೀಕಿಸಿದರೆ ಮತ್ತಷ್ಟು ಜಗಳ ಹೆಚ್ಚುವ ಸಾಧ್ಯತೆ ಇದೆ.  ಹಾಗಾಗಿ  ಪದೇ ಪದೇ  ಆಕೆಯ  ಕುಟುಂಬವನ್ನು ಟೀಕಿಸಿ, ವ್ಯಂಗ್ಯ ಮಾಡಿ ಮಾತನಾಡುವುದು ಒಳಿತಲ್ಲ. ನಿಮಗೆ ಅವರ ಕುಟುಂಬದಿಂದ ಸಮಸ್ಯೆಯಾಗುತ್ತಿದ್ದರೆ  ನಿಧಾನವಾಗಿ ಹೇಳಿ ಸರಿಪಡಿಸಿಕೊಳ್ಳಿ.
  • ಕೆಲವೊಮ್ಮೆ ಜಗಳ ಉಂಟಾಗಿ ಕೋಪ ಬರುವುದು ಸಾಮಾನ್ಯ ಆದರೆ  ನೀವು ಕೋಪ ಬಂದಾಗ ಜೋರಾದ ಸ್ವರದಲ್ಲಿ ನೀವು ಬೈಯಬೇಡಿ. ಇದರಿಂದ  ನಿಮ್ಮ ಸಂಗಾತಿಗೆ ಮತ್ತಷ್ಟು ಬೇಸರವಾಗಬಹುದು. ಏನೇ  ಸಮಸ್ಯೆಯಿದ್ದರೆ ಆಗಲೇ ಅದನ್ನು ಸಮಾಧಾನವಾಗಿ ಬಗೆಹರಿಸಿಕೊಳ್ಳಿ
  • ಯಾವುದೇ ಜಗಳ ಬಂದಾಗ ಇತರ ಮಹಿಳೆಯರನ್ನು ಹೋಲಿಸಿ ಮಾತನಾಡಬೇಡಿ, ನಿಮ್ಮ ಸಂಗಾತಿಯ ಸೌಂದರ್ಯ ಬಗ್ಗೆ ನಕಾರಾತ್ಮಕವಾಗಿ ಮಾತನಾಡಬೇಡಿ. ನಿಮ್ಮ ಸಂಗಾತಿಗೆ ಸುಂದರವಾಗಿಲ್ಲ, ಆಕರ್ಷಕವಾಗಿ ಕಾಣುತ್ತಿಲ್ಲ ಎಂಬ ನೆಗೆಟಿವ್​  ಮಾತುಗಳನ್ನು  ಯಾವುದೇ ಕಾರಣಕ್ಕೂ ಹೇಳಬಾರದು.
  • ಸಂಗಾತಿಯ ಮುಂದೆ  ಇತರ ಯಾವುದೇ  ಹೆಣ್ಣುಮಕ್ಕಳನ್ನು ಹೊಗಳಬೇಡಿ, ನಿನ್ನ ಬದಲು ಬೇರೆ ಹುಡುಗಿ ಮದುವೆ ಯಾಗುತ್ತಿದೆ ಎನ್ನುವ ಮಾತು ಹೇಳಲು ಹೋಗಬೇಡಿ. ಇದರಿಂದ ಅವರಲ್ಲಿ ಕೀಳರಿಮೆ ಭಾವನೆ ಮೂಡಿ, ಮನಸ್ಸಿಗೆ ನೋವಾಗಬಹುದು.
  • ಏನೋ ತಪ್ಪು ಮಾಡಿದಾಗ ಮನಸ್ಸಿಗೆ ನೋವಾಗುವಂತೆ ಮಾತನಾಡಬೇಡಿ, ಆ ಸಮಯದಲ್ಲಿ ಶಾಂತತೆ ಕಾಪಾಡಿಕೊಂಡು ಬಳಿಕ ನಿಧಾನವಾಗಿ ಮಾತನಾಡಿ
  • ಜಗಳ ಆದ ಸಂದರ್ಭದಲ್ಲಿ ಆಕೆಯ ಹೆಸರಿನ್ನಿಟ್ಟು ಕರೆಯಬೇಡಿ, ಡೀವೊರ್ಸ್ ವಿಚಾರ ಪ್ರಸ್ತಾಪ ಮಾಡಲೇ ಬೇಡಿ. ಗೌರವಯುತವಾಗಿ ಮಾತನಾಡಿ ಜಗಳ ಪರಿಹರಿಸಿಕೊಳ್ಳಿ. ದ್ವೇಷವನ್ನು ಇಟ್ಟುಕೊಳ್ಳುವುದು ನಿಮ್ಮ ಸಂಬಂಧದಲ್ಲಿ  ಮತ್ತಷ್ಟು ಅಂತರವನ್ನು ಸೃಷ್ಟಿಸುತ್ತದೆ
  • ದಾಂಪತ್ಯದಲ್ಲಿ ಸಂಗಾತಿಗಳಿಬ್ಬರ ಸಣ್ಣ ಪುಟ್ಟ ಮುನಿಸುಗಳು, ಜಗಳ  ಸಾಮಾನ್ಯ. ಇಬ್ಬರ ನಡುವೆ ವಾದಗಳು ಆದಾಗ ತಪ್ಪಿದ್ದರೆ ಕ್ಷಮೆ ಕೇಳಿ ಜಗಳ ಪರಿಹರಿಸಿಕೊಳ್ಳಿ.

ಈ ಸುದ್ದಿಯನ್ನೂ ಓದಿ:Viral News: ರೋಟಿ ನೀಡುವುದು ತಡವಾಯಿತೆಂದು ಮದುವೆ ಮುರಿದುಕೊಂಡ ವರ; ಠಾಣೆ ಮೆಟ್ಟಿಲೇರಿದ ವಧು!