Sunday, 5th January 2025

‌Vishweshwar Bhat Column: ಪ್ರವಾಸಿಗನ ಕಣ್ಣಲ್ಲಿ ಜಪಾನ್‌

ಸಂಪಾದಕರ ಸದ್ಯಶೋಧನೆ

ವಿಶ್ವೇಶ್ವರ ಭಟ್

ಮೈಕೆಲ್ ಸ್ಟೋಯಿನ್ ಎಂಬ ಪ್ರವಾಸಿಗ ಜಪಾನಿನ ಬಗ್ಗೆ ಬರೆದ ಅನುಭವ ಕಥನವನ್ನು ನಾನು ಇತ್ತೀಚೆಗೆ ಓದುತ್ತಿz. ಆತ ಪ್ರಸ್ತಾಪಿಸಿದ ಕೆಲವು ಸಂಗತಿಗಳನ್ನಷ್ಟೇ ಇಲ್ಲಿ ಹೇಳುತ್ತೇನೆ. ಜಪಾನಿಗೆ ತನ್ನ ಮೊದಲ ಪ್ರವಾಸದ ನಂತರ, ದೂರದಿಂದ ಬಹುತೇಕ ಪೌರಾಣಿಕವಾಗಿ ತೋರುವ ಎಷ್ಟೋ ವಿಷಯಗಳು ಅನಂತರ ನಿಜವೆಂದು ಅವನಿಗೆ ಮನವರಿಕೆಯಾಗಿ ಆಶ್ಚರ್ಯವಾಯಿತಂತೆ. ಜಪಾನ್ ಬಗೆಗಿನ ಕೆಲವು ಆಶ್ಚರ್ಯಕರ ಸಂಗತಿಗಳನ್ನು ನೋಡುವವ ರೆಗೂ ಆತ ಸಂಪೂರ್ಣವಾಗಿ ನಂಬಿರಲಿಲ್ಲವಂತೆ.

“ಜಪಾನ್ ಸ್ವಚ್ಛವಾಗಿದೆ ಎಂದು ನಾನು ಕೇಳಿದ್ದೆ. ಆದರೆ ಅದನ್ನು ಪ್ರತ್ಯಕ್ಷ ನೋಡುವವರೆಗೂ ಅದು ಅಷ್ಟೊಂದು ಸ್ವಚ್ಛವಾಗಿದೆ ಎಂದು ನನಗೆ ತಿಳಿದಿರಲಿಲ್ಲ. ನಾನು ಅಮೆರಿಕದಲ್ಲಿನ ಸಾರ್ವಜನಿಕ ಸ್ವಚ್ಛತೆಯನ್ನು ನೋಡಿದ್ದೆ.
ಆದರೆ ಜಪಾನಿನ ಸ್ವಚ್ಛತೆಯನ್ನು ನೋಡಿದರೆ, ಒಂದು ಕ್ಷಣ ಅಮೆರಿಕನ್ನರೂ ಬೆರಗಾಗುತ್ತಾರೆ. ಆ ರೀತಿಯ ನಂಬಲಾಗದ ಸ್ವಚ್ಛತೆ ಜಪಾನಿನಲ್ಲಿದೆ. ಸಾರ್ವಜನಿಕ ಸ್ಥಳಗಳು, ನಗರದ ಬೀದಿಗಳಿಂದ ಸುರಂಗಮಾರ್ಗ ನಿಲ್ದಾಣ ಗಳವರೆಗೆ, ಪ್ರತಿ ಅಂಗುಲ ಜಾಗವನ್ನೂ ಜಪಾನಿಯರು ಸೂಕ್ಷ್ಮವಾಗಿ ಗಮನಿಸಿ ಸ್ವಚ್ಛವಾಗಿಟ್ಟುಕೊಂಡಿದ್ದಾರೆ.

ಸುತ್ತಲೂ ಯಾವುದೇ ಕಸದ ತೊಟ್ಟಿಗಳು ಇಲ್ಲದಿದ್ದರೂ ಅಷ್ಟು ಸ್ವಚ್ಛತೆ ಕಾಪಾಡಿರುವುದು ಅಪವಾದವಾದರೂ ವಾಸ್ತವ. ಇದು ಪ್ರತಿಯೊಬ್ಬರೂ ಕಟ್ಟುನಿಟ್ಟಾಗಿ ಪಾಲಿಸುವ ಸಾಂಸ್ಕೃತಿಕ ಮೌಲ್ಯವಾಗಿದೆ ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವ ವಿಷಯದಲ್ಲಿ ಜಪಾನಿಯರು ಗುಲಗುಂಜಿಯಷ್ಟೂ ರಾಜಿ ಮಾಡಿಕೊಳ್ಳು ವುದಿಲ್ಲ. ಸ್ವಚ್ಛತೆಯ ಹಾಗೆ ಎಡೆ ಕಣ್ಣಿಗೆ ಕಟ್ಟುವ ಇನ್ನೊಂದು ಸಂಗತಿಯೆಂದರೆ ಸಭ್ಯತೆ ಮತ್ತು ಗೌರವ” ಎಂದು ಆತ ಬರೆಯುತ್ತಾನೆ. “ಜಪಾನಿನಲ್ಲಿ ಜನರು ಸಭ್ಯತೆಯನ್ನು ಪ್ರಾಮಾಣಿಕವಾಗಿ ಗೌರವಿಸುತ್ತಾರೆ. ನಮಸ್ಕರಿಸುವುದು, ಸಾರ್ವಜನಿಕವಾಗಿ ಸದ್ದಿಲ್ಲದೆ ಮಾತನಾಡುವುದು ಮತ್ತು personal space ಅನ್ನು ಗೌರವಿಸುವುದು ಅವರಿಗೆ ರೂಢಿಯಾಗಿದೆ. ದೈನಂದಿನ ಸಂವಹನಗಳಲ್ಲಿನ ಚಿಂತನಶೀಲತೆಯ ಮಟ್ಟವು ನಿಜವಾಗಿಯೂ ಶಾಂತಿ ಮತ್ತು ಸಾಮರಸ್ಯದ ಅರ್ಥವನ್ನು ಸೃಷ್ಟಿಸುತ್ತದೆ. ಅದನ್ನು ಬೇರೆಡೆ ಕಾಣಲು ಸಾಧ್ಯವಿಲ್ಲವೇನೋ ಎಂದು ಅನಿಸುವಷ್ಟರ ಮಟ್ಟಿಗೆ ಅಪರೂಪವಾಗಿದೆ. ಜಪಾನಿನ ರೈಲುಗಳು ಸಮಯಕ್ಕೆ ಸರಿಯಾಗಿ ಓಡುತ್ತವೆ ಎಂದು ನಾನು ಕೇಳಿz. ಆದರೆ ರೈಲುಗಳು ನಿಮಿಷಕ್ಕಲ್ಲ, ಸೆಕೆಂಡುಗಳಿಗೆ ಪ್ರಾಧಾನ್ಯ ಕೊಟ್ಟು ಸಮಯ ಪಾಲಿಸುತ್ತವೆ ಎಂಬುದು ಗೊತ್ತಿರಲಿಲ್ಲ.

ಒಂದು ರೈಲು 10:01:01 ಕ್ಕೆ ಹೊರಡಬೇಕಿದೆಯೆನ್ನಿ. ಒಂದು ಸೆಕೆಂಡು ಸಹ ತಡವಾಗುವುದಿಲ್ಲ. ಇದು ಎಂಥವರಿಗೂ ಒಂದು ಬೆರಗಷ್ಟೇ ಅಲ್ಲ, ಹಿತಕರವಾದ ಆಘಾತವನ್ನುಂಟು ಮಾಡದೇ ಹೋಗುವುದಿಲ್ಲ. ಜಪಾನನ್ನು ಅನ್ವೇಷಿಸಲು ಅಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ದಕ್ಷತೆ ಮತ್ತು ವಿಶ್ವಾಸಾರ್ಹತೆ, ಸುಲಭ ಮತ್ತು ಒತ್ತಡ-ಮುಕ್ತ ಮನಸ್ಥಿತಿ ಯನ್ನು ಸಹಜವಾಗಿ ನಿರ್ಮಿಸುವುದು ಸುಳ್ಳಲ್ಲ. ವಿಶ್ವದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾದ ಟೋಕಿಯೋ ದಲ್ಲಿ, ಪ್ರತಿ ಅಂಗುಲ ಜಾಗವನ್ನೂ ಬುದ್ಧಿವಂತಿಕೆಯಿಂದ ಬಳಸಲಾಗಿದೆ.

ಅಪಾರ್ಟ್‌ಮೆಂಟ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಅಂಗಡಿಗಳು ಸಾಂದ್ರವಾಗಿದ್ದರೂ, ಅವುಗಳನ್ನು ಆರಾಮವಾಗಿ,
ಹಿತಕರವಾಗಿ ಬಳಸುವ ರೀತಿಯಲ್ಲಿ ವ್ಯವಸ್ಥಿತವಾಗಿ ಆಯೋಜಿಸಲಾಗಿದೆ. ಅಂಥ ಕಿರಿದಾದ ಸ್ಥಳಗಳಲ್ಲಿ ಅವರು ಹೊಂದಿರುವ ಕ್ರಿಯಾತ್ಮಕತೆ ಆಶ್ಚರ್ಯ ಹುಟ್ಟಿಸುತ್ತದೆ” ಎಂದು ಆತ ಹೇಳುತ್ತಾನೆ. ರೈಲು ನಿಲ್ದಾಣ, ಮಾರುಕಟ್ಟೆ
ಮತ್ತು ಸಾರ್ವಜನಿಕ ಸ್ಥಳಗಳಲ್ಲೂ ಅನಿರೀಕ್ಷಿತ ಶಾಂತ ವಾತಾವರಣ ಇರುವುದನ್ನು ಕಾಣಬಹುದು. ಸಾರ್ವ ಜನಿಕವಾಗಿ ಜನರು ಮಾತಾಡುವುದು, ಗದ್ದಲವೆಬ್ಬಿಸುವುದನ್ನು ನೋಡಲು ಸಾಧ್ಯವಿಲ್ಲ. ತಮ್ಮಿಂದ ಸಾರ್ವಜನಿಕ ಶಾಂತಿ, ಏಕಾಂತಕ್ಕೆ ಭಂಗ ಆಗದಂತೆ ಅವರ ನಡವಳಿಕೆಯಿರುವುದನ್ನು ಕಾಣಬಹುದು. ಬಿಡುವಿಲ್ಲದ ನಗರದ ಮಧ್ಯದಲ್ಲಿಯೂ ಅಲ್ಲಿನ ಜನ ನೆಮ್ಮದಿಯ ವಾತಾವರಣವನ್ನು ಸೃಷ್ಟಿಸುತ್ತಾರೆ. ಆಹಾರವನ್ನು ಪ್ಯಾಕ್ ಮಾಡುವು ದಿರಬಹುದು, ಉದ್ಯಾನದ ವಿನ್ಯಾಸವಾಗಿರಬಹುದು ಅಥವಾ ಬಸ್ ನಿಲ್ದಾಣದ ಆಸನವನ್ನು ಇಟ್ಟಿರುವ ರೀತಿಯಿರ ಬಹುದು, ಜಪಾನಿಯರು ಸಣ್ಣ-ಪುಟ್ಟ ಸಂಗತಿಗಳಿಗೂ ನಂಬಲಾಗದ ಗಮನವನ್ನು ಕೊಡುತ್ತಾರೆ. ಎಲ್ಲವನ್ನೂ ಅವರು ಚಿಂತನಶೀಲವಾಗಿ ರೂಪಿಸಿzರೆ ಎಂದು ಬಣ್ಣಿಸುತ್ತಾನೆ.

ಇದನ್ನೂ ಓದಿ: @vishweshwarbhat