Friday, 10th January 2025

Gurucharan Singh: 19 ದಿನಗಳಿಂದ ಊಟ ತಿಂಡಿ ಇಲ್ಲ… ಪ್ರಜ್ಞೆಯೂ ಇಲ್ಲ- ಖ್ಯಾತ ಕಿರುತೆರೆ ನಟನಿಗೆ ಇದೇನಾಯ್ತು?

Gurucharan Singh

ನವದೆಹಲಿ: ಜನಪ್ರಿಯ ಟಿವಿ ಕಾರ್ಯಕ್ರಮಗಳಲ್ಲಿ ಒಂದಾದ  ತಾರಕ್​ ಮೆಹ್ತಾ ಕಾ ಉಲ್ಟಾ ಚಶ್ಮಾದಲ್ಲಿ ರೋಷನ್ ಸಿಂಗ್ ಸೋಧಿ ಪಾತ್ರವನ್ನು ನಿರ್ವಹಿಸಿರುವ ನಟ ಗುರುಚರಣ್ ಸಿಂಗ್ (Gurucharan Singh) ಕೆಲ ದಿನದ ಹಿಂದೆ ಆಸ್ವತ್ರೆಗೆ ದಾಖಲಾಗಿದ್ದರು. ಈ ಬಗ್ಗೆ  ಸಿಂಗ್ ಅವರು ತಮ್ಮ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿರುವ ವಿಡಿಯೊವೊಂದನ್ನು ಸಹ Instagramನಲ್ಲಿ ಹಂಚಿಕೊಂಡಿದ್ದರು. ನಟ ತಾನು ಆಸ್ಪತ್ರೆಗೆ ದಾಖಲಾದ ಕಾರಣವನ್ನು ಬಹಿರಂಗ ಪಡಿಸದಿದ್ದರೂ ಸಹ, ಅವರ ಸ್ಥಿತಿ ಕ್ಷಣ ಕ್ಷಣಕ್ಕೂ ಬಿಗಡಾಯಿಸುತ್ತಿದೆ ಎಂದು ಉಲ್ಲೇಖಿಸಿದ್ದರು.

ಇದೀಗ ನಟ ಗುರುಚರಣ್ ಸಿಂಗ್ ಪ್ರಸ್ತುತ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಅವರ ಆಪ್ತ ಸ್ನೇಹಿತೆ ಭಕ್ತಿ ಸೋನಿ ಹೇಳಿದ್ದಾರೆ‌. ಅವರ ಸ್ಥಿತಿ ಮತ್ತಷ್ಟು  ಹದಗೆಟ್ಟಿದೆ ಎಂದು ಬಹಿರಂಗಪಡಿಸಿದ್ದಾರೆ. ಗುರುಚರಣ್ ಸಿಂಗ್ 19 ದಿನಗಳಿಂದ ಏನನ್ನೂ ತಿಂದಿಲ್ಲ. ಇದು ಪ್ರಜ್ಞಾಹೀನತೆ ಮತ್ತು ಆಸ್ಪತ್ರೆಗೆ ದಾಖಲಾಗುವಂತೆ ಆಗಿದೆ. ಆದಾಗ್ಯೂ, ಅವರು ಡಿಸ್ಚಾರ್ಜ್ ಆದ ನಂತರ, ಅವರ ಆರೋಗ್ಯ ಮತ್ತಷ್ಟು ಹದಗೆಟ್ಟಿತು. ಇದೀಗ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರ ಸ್ನೇಹಿತೆ ಹೇಳಿದ್ದಾರೆ.

ತಾನು  ಅವರನ್ನು ಭೇಟಿ ಮಾಡಿಲ್ಲ, ಆದರೆ ಅವರ ತಾಯಿ ನನಗೆ ಮಾಹಿತಿ ನೀಡಿದ್ದಾರೆ. ನಟನ ಕುಟುಂಬದವರು ಆತನ  ಫೋನ್‌ ಆಫ್ ಮಾಡಿದ್ದಾರೆ. ಆರೋಗ್ಯ ಚೇತರಿಸಿಕೊಳ್ಳಲು ಗುರುಚರಣ್ ಸಿಂಗ್ ಅವರ ತಾಯಿಯೊಂದಿಗೆ ಸಂಪರ್ಕದಲ್ಲಿರಲು ಅವರು ಪ್ರಸ್ತಾಪಿಸಿದ್ದಾರೆ. ಗುರುಚರಣ್ ಅವರ ಆರ್ಥಿಕ ಸ್ಥಿತಿಯ ಬಗ್ಗೆ ಆಘಾತಕಾರಿ ವಿಚಾರಗಳನ್ನು  ಬಹಿರಂಗಪಡಿಸಿ  ಆತ  ಸುಮಾರು 1.2 ಕೋಟಿ ರೂಪಾಯಿ ಸಾಲವನ್ನು ಮಾಡಿದ್ದಾನೆ. ಆದರೆ ಆತ ಖಂಡಿತವಾಗಿಯೂ ತೊಂದರೆಗೀಡಾಗಿದ್ದಾನೆ. ಆದರೆ ಅವನು ಖಿನ್ನತೆಗೆ ಒಳಗಾಗಿದ್ದಾನೆಯೇ ಎಂದು ನಾನು ಖಚಿತವಾಗಿ ಹೇಳಲಾರೆ ಎಂದಿದ್ದಾರೆ.

ತನ್ನ ಮೇಲೆ 1.5 ಕೋಟಿ ರೂಪಾಯಿ ಸಾಲದ ಹೊರೆ ಇದೆ ಅಂತ  ಗುರುಚರಣ್ ಸಿಂಗ್ ಈ ಹಿಂದೆ  ಹೇಳಿಕೊಂಡಿದ್ದರು ಆ ಸಾಲ ತೀರಿಸಲು ಪರದಾಡುತ್ತಿರೋದಾಗಿ ಹೇಳಿದ್ದಾರೆ. ನಾನು ಕಳೆದ ಕೆಲವು  ದಿನಗಳಿಂದ ಊಟ ಬಿಟ್ಟಿದ್ದೇನೆ ನಾನು ಹಾಲು, ಟೀ ಮತ್ತು ಎಳನೀರು ಇಷ್ಟನ್ನೇ ಕಳೆದ ಕೆಲವು ದಿನಗಳಿಂದ ಸೇವಿಸುತ್ತಿದ್ದೇನೆ. ಆಧ್ಯಾತ್ಮಿಕ ನೆಮ್ಮದಿಗಾಗಿ ಈ ರೀತಿ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದರು.

ಮೊನ್ನೆಯಷ್ಟೇ ಗುರು ಗೋವಿಂದ್ ಸಿಂಗ್ ಜಯಂತಿಯ ಶುಭ ಸಂದರ್ಭದಲ್ಲಿ , ಗುರುಚರಣ್ ತಮ್ಮ ಆಸ್ಪತ್ರೆಯ ಹಾಸಿಗೆಯಿಂದ ಭಾವನಾತ್ಮಕ ವೀಡಿಯೊವನ್ನು ಹಂಚಿಕೊಂಡಿದ್ದು.  ದೇವರು ತನಗೆ ಹೊಸ ಬದುಕನ್ನು ಕರುಣಿಸಿದ್ದಾನೆ ಎಂದು ಅವರು ತಮ್ಮ  ಅಭಿಮಾನಿಗಳಿಗೆ ಹಾರೈಸಿ ಕೃತಜ್ಞತೆ ಸಲ್ಲಿಸಿದ್ದರು. ಇದೀಗ ಅವರ ಸ್ಥಿತಿ ಗಂಭೀರವಾಗಿದೆ ಎಂದು ಅವರ  ಸ್ನೇಹಿತೆ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನೂ ಓದಿ:ಜೀವನ ಮತ್ತು ವೃತ್ತಿಜೀವನದಲ್ಲಿ ಕಾಡುವ ವೈಎನ್ಕೆ Wonderment !

Leave a Reply

Your email address will not be published. Required fields are marked *