Monday, 13th January 2025

Jagmeet Singh: ಕೆನಡಾದ ತಂಟೆಗೆ ಬಂದ್ರೆ ಹುಶಾರ್‌! ಟ್ರಂಪ್‌ಗೆ ಜಸ್ಟಿನ್‌ ಟ್ರುಡೊ ಆಪ್ತ ಜಗ್ಮೀತ್ ಸಿಂಗ್‌ ಖಡಕ್‌ ಎಚ್ಚರಿಕೆ

Jagmeet Singh

ಒಟ್ಟಾವಾ : ಕೆನಡಾದಲ್ಲಿ ರಾಜಕೀಯ ಅವ್ಯವಸ್ಥೆಗಳು ನಡೆಯುತ್ತಿದ್ದು, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಪ್ರಧಾನಿ ಹುದ್ದೆಯಿಂದ ಇಳಿಯಲಿದ್ದಾರೆ. ಈ ನಡುವೆ ನ್ಯೂ ಡೆಮಾಕ್ರಟಿಕ್ ಪಕ್ಷದ (NDP) ನಾಯಕ ಮತ್ತು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ (Justin Trudeau) ಅವರ ಲಿಬರಲ್‌ ಪಕ್ಷದ ಮಿತ್ರರಾಗಿದ್ದ ಜಗ್ಮೀತ್ ಸಿಂಗ್ (Jagmeet Singh) ಅವರು ಅಮೆರಿಕದ ನೂತನ ಅಧ್ಯಕ್ಷ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ (Donald Trump) ಕಟ್ಟುನಿಟ್ಟಾಗಿ ಎಚ್ಚರಿಕೆ ನೀಡಿದ್ದಾರೆ. ಕೆನಡಾವನ್ನು ವಶಕ್ಕೆ ತೆಗೆದುಕೊಳ್ಳುವ ನಿಮ್ಮ ಗುರಿ ಎಂದಿಗೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹರಿಬಿಟ್ಟಿರುವ ಅವರು “ನನ್ನ ಬಳಿ ಡೊನಾಲ್ಡ್ ಟ್ರಂಪ್‌ಗೆ ಸಂದೇಶವಿದೆ. ನಮ್ಮ ದೇಶ (ಕೆನಡಾ) ಮಾರಾಟಕ್ಕಿಲ್ಲ ಎಂದು ಹೇಳಿದ್ದಾರೆ. ಕೆನಡಿಯನ್ನರು ಹೆಮ್ಮೆಯ ಜನರು, ಅವರು ತಮ್ಮ ದೇಶದ ಬಗ್ಗೆ ಹೆಮ್ಮೆಪಡುತ್ತಾರೆ ಮತ್ತು ಅದನ್ನು ರಕ್ಷಿಸಲು ಹೋರಾಡಲು ಸಿದ್ಧರಾಗಿದ್ದಾರೆ ಎಂದು ಸಿಂಗ್ ಹೇಳಿದರು.

ಲಾಸ್‌ ಏಂಜಲಿಸ್‌ನಲ್ಲಿ ನಡೆದ ಕಾಡ್ಗಿಚ್ಚಿನ ಬಗ್ಗೆ ಮಾತನಾಡಿದ ಅವರು, ಬೆಂಕಿ ನಂದಿಸಲು ಹಾಗೂ ಅಮೆರಿಕದ ಜನರ ರಕ್ಷಣೆಗಾಗಿ ಕೆನಡದ ಅಗ್ನಿಶಾಮಕ ದಳದವರು ಕೆಲಸ ಮಾಡಿದ್ದಾರೆ. ನರೆಹೊರೆಯ ದೇಶವಾಗಿ ನಾವು ಏನು ಮಾಡಬೇಕೋ ಅದನ್ನು ನಿರ್ವಹಿಸಿದ್ದೇವೆ. ಇದು ನಾವು ಯಾರು ಎಂದು ತೋರಿಸುತ್ತದೆ ಎಂದು ಹೇಳಿದರು.

ಕೆನಡಾದ ಮೇಲೆ ಅಮೆರಿಕ ಸುಂಕ ವಿಧಿಸಿದರೆ ಪ್ರತೀಕಾರ ತೀರಿಸುವುದಾಗಿ ಸಿಂಗ್ ಪ್ರತಿಜ್ಞೆ ಮಾಡಿದರು. ಡೊನಾಲ್ಡ್ ಟ್ರಂಪ್ ನೀವು ನಮ್ಮೊಂದಿಗೆ ಜಗಳವಾಡಬಹುದು ಎಂದು ಎಂದು ನೀವು ಭಾವಿಸಿದರೆ ಅದಕ್ಕೆ ನೀವು ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಕೆನಡಾದಲ್ಲಿ ಯಾರೇ ಪ್ರಧಾನಿಯಾದರೂ ನಾವು ದೇಶಕ್ಕಾಗಿ ಹೋರಾಟ ನಡೆಸುತ್ತೇವೆ ಎಂದು ಎಂದು ಅವರು ಹೇಳಿದರು.

ಏನಿದು ಘಟನೆ ?

ಈ ಹಿಂದೆ ಡೊನಾಲ್ಡ್‌ ಟ್ರಂಪ್‌ ಸಾಮಾಜಿಕ ಮಾಧ್ಯಮದಲ್ಲಿ ಕೆನಡಾ ಅಮೆರಿಕಕ್ಕೆ ಸೇರಬೇಕೆಂದು ಹೇಳಿದ್ದರು. ಕೆನಡಾದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮತ್ತು ಅದನ್ನು 51 ನೇ ಯುಎಸ್ ರಾಜ್ಯವನ್ನಾಗಿ ಮಾಡುವ ತನ್ನ ಯೋಜನೆಗಳ ಬಗ್ಗೆ ಟ್ರಂಪ್ ಧ್ವನಿಯೆತ್ತಿದ್ದರು. ಅನೇಕ ಕೆನಡಿಯನ್ನರು ಕೆನಡಾ ಅಮೆರಿಕದ 51ನೇ ರಾಜ್ಯವಾಗಬೇಕೆಂದು ಬಯಸುತ್ತಾರೆ ಎಂದು ಪೋಸ್ಟ್‌ ಮಾಡಿದ್ದರು. ಒಂದು ವೇಳೆ ಕೆನಡಾ ಅಮೆರಿಕದ ಭಾಗವಾದರೆ ಅಲ್ಲಿನ ಜನರಿಗೆ ತೆರಿಗೆಯಲ್ಲಿ ಶೇ 60 ರಷ್ಟು ವಿನಾಯಿತಿ ನೀಡಲಾಗುವುದು ಹಾಗೂ ಅಮೆರಿಕದ ಸೇನಾ ಕೆನಡಾ ದೇಶವನ್ನು ರಕ್ಷಿಸುತ್ತದೆ ಎಂದು ಹೇಳಿದ್ದರು ಅದು ಭಾರೀ ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು. ಆ ವಿಷಯವಾಗಿ ಇದೀಗ ಎನ್‌ಡಿಪಿ ನಾಯಕ ಟ್ರಂಪ್‌ಗೆ ಎಚ್ಚರಿಕೆ ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ : Donald Trump: ಹಶ್‌ ಪ್ರಕರಣದಲ್ಲಿ ತಪ್ಪಿದ ಜೈಲುಶಿಕ್ಷೆ; ಟ್ರಂಪ್‌ಗೆ ಬಿಗ್‌ ರಿಲೀಫ್‌!

Leave a Reply

Your email address will not be published. Required fields are marked *