ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮಾಪನ ಸರಿಯಾಗಿ ಆಗದೇ ಇರುವ ಕಾರಣ ಬೆಳೆ ವಿಮೆ ಜಮೆ ಆಗಿಲ್ಲದ್ದ ರಿಂದ ವಿಮೆ ಕಂಪನಿಯಿಂದ ಅನ್ಯಾಯಕ್ಕೊಳಗಾದ ಜಿಲ್ಲೆಯ ರೈತ ಸಮುದಾಯ ನಗರದ ತೋಟಗಾರಿಕಾ ಇಲಾಖೆ ಎದುರು ಪ್ರತಿಭಟನೆ ನಡೆಸಿತು.
ರೈತರು ಭಿಕ್ಷುಕರಲ್ಲ. ನಾವು ವಿಮೆ ತುಂಬುತ್ತಿದ್ದೇವೆ. ಸಾಲ ಕೊಡಿ ಅಂತನು ಕೇಳುತ್ತಿಲ್ಲ. ನಮಗೆ ವಿಮೆ ಹಣ ನೀಡಿ ಎಂದು ಕೇಳುತ್ತಿದ್ದೇವೆ. ರೈತರಿಗೆ ಸರಿಯಾಗಿ ನ್ಯಾಯ ಒದಗಿಸಿ. ದಾಕಷ್ಟು ಸಾರಿ ಮನವಿ ನೀಡಿದ್ದೇವೆ, ಪ್ರತಿಭಟನೆ ನಡೆಸಿದ್ದೇವೆ. ನಿಮಗೆ ಈಗಲೂ ರೈತರ ಸಮಸ್ಯೆ ಅರ್ಥವಾಗುತ್ತಿಲ್ಲ. ನೀವು ಸರಿಯಾದ ನ್ಯಾಯ, ಉತ್ತರ ನೀಡದೇ ಇದ್ದರೆ ನಾವು ಬೀಗಹಾಕುತ್ತೇವೆ.ಎಂದು ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಹಿಂದೆ ಸರಿಯಾಗಿ ವಿಮೆ, ಮಾಪನ ಸಿಗುತ್ತಿತ್ತು ಆದರೀಗ ಅದು ಸಿಗುತ್ತಿಲ್ಲ. ಮೊದಲೆಲ್ಲ ಹಣ ಕೊಟ್ಟು ಮಳೆ ಮಾಪನಪಡೆಯಬೇಕಾಗಿದೆ. ಉತ್ತರ ಕನ್ನಡ ಜಿಲ್ಲೆಯ ಜನ,ರೈತರು ಶಾಂತಿಪ್ರಿಯರು. ಕಲ್ಲು ಹೊಡೆದು ಪ್ರತಿಭಟನೆ ಮಾಡಿಲ್ಲ. ನಮ್ಮ ಈ ಶಾಂತಿಯನ್ನೇ ದುರುಪಯೋಗ ಪಡಿಸಿಕೊಂಡು ಅನ್ಯಾಯ ಮಾಡುತ್ತಿದ್ದಾತೆಂದು ರೈತರು ಹೇಳಿದರು.
ರೈತರು ಮನೆಯವರ ಬಂಗಾರವನ್ನು ಅಡ ಇಟ್ಟು ಪ್ರಿಮಿಯಂ ಕಟ್ಟುತ್ತಿದ್ದೇವೆ. ಅದನ್ನು ನೀವು ಅರ್ಥ ಮಾಡಿಕೊಳ್ಳಿ. ನಮಗೆ ಗಡುವು ನೀಡುತ್ತೀರಿ ನಿಮ್ಮದ್ಯಾಕೆ ಗಡುವಿಲ್ಲ ನಮ್ಮ ಬೆಳೆ ವಿಮೆ ನೀಡೋದಿಲ್ಲೆ ಎಂದು ರೈತ ದ್ಯಾಮಣ್ಣ ಹೇಳಿದರು.
ಅಧಿಕಾರಿಗಳೇ ನೀವು ನಮ್ಮಲ್ಲಿಗೆ ಬೇಡಲು ಬಂದರೂ ನಾವು ಸರಿಯಾಗಿ ಸಹಾಯ ಮಾಡುತ್ತೇವೆ. ಆದರೆ ನಾವು ಬೇಡಲು ನಿಮ್ಮಲ್ಲಿ ಗೆ ಬಂದಿಲ್ಲ. ಮನವಿ ಮಾಡಿದ್ದೇವೆ. ಆದರೆ ನೀವು ಸರಿಯಾಗಿ ಸ್ಪಂದಿಸುತ್ತಿಲ್ಲ. ವಿಮಾ ಅಧಿಕಾರಿ ಅಣ್ಣಪ್ಪ ಹಾರಿಕೆಯ ಉತ್ತರ ನೀಡಿದ್ದು ರೈತರಿ ಅಸಮಾಧಾನಕ್ಕೆ ಕಾರಣವಾಯಿತು. ಹನ್ನೊಂದು ಜಿಲ್ಲೆಗಳ ಪೈಕಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಈ ರೀತಿಯಾಗಿದೆ. ಎನ್ನುವುದುದನ್ನು ರೈತರು ಬೇಸರ ವ್ಯಕ್ತಪಡಿಸಿತು. ಮಳೆ ಮಾಪನ ಸರಿ ಇಲ್ಲದೇ ಬೆಳೆವಿಮೆಯಾಗಿ ಬಂದಿಲ್ಲ. ಜಿಲ್ಲೆಯ ರೈತರು ತುಂಬಿರೋದು 23 ಕೋಟಿ ರು. ಆಗಿರುವುದಾಗಿ ಹೇಳಿದರು.
ವಿಮಾ ಕಂಪನಿಯವರ ಮೇಲೆ ನಮಗೆ ನಂಬಿಕೆ ಇಲ್ಲದೇ ಇರುವುದರಿಂದ ಕಚೇರಿಗೆ ಬೀಗ ಹಾಕುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ನೂರಾರು ರೈತರು, ಹಲವು ರೈತ ಸಂಘಟನೆಯವತು ಭಾಗವಹಿಸಿದ್ದರು.
ಇದನ್ನೂ ಓದಿ: #sirsi