Saturday, 23rd November 2024

ಷೇರುಪೇಟೆ: ಸೆನ್ಸೆಕ್ಸ್ ಚೇತರಿಕೆ, 13,600 ಗಡಿ ದಾಟಿದ ನಿಫ್ಟಿ

ಮುಂಬಯಿ: ಭಾರತೀಯ ಷೇರುಪೇಟೆಯಲ್ಲಿ ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (ಬಿಎಸ್​ಇ) ಸೂಚ್ಯಂಕ ಸೆನ್ಸೆಕ್ಸ್ ಚೇತರಿಕೆ ತೋರಿದ್ದು 437 ಅಂಶ ಏರಿಕೆ ದಾಖಲಿಸಿದೆ.

ಜಾಗತಿಕ ಮಾರುಕಟ್ಟೆಯ ಧನಾತ್ಮಕ ಟ್ರೆಂಡ್​ಗೆ ಅನುಗುಣವಾಗಿ ಇನ್​ಫೋಸಿಸ್​, ಎಚ್​ಯುಎಲ್​, ಟಿಸಿಎಸ್​ ಷೇರುಗಳು ಲಾಭಾಂಶ ದಾಖಲಿಸಿದ್ದೇ ಇದಕ್ಕೆ ಕಾರಣ. ನ್ಯಾಷನಲ್ ಸ್ಟಾಕ್​ ಎಕ್ಸ್​ಚೇಂಜ್ (ಎನ್​ಎಸ್​ಇ) ಸೂಚ್ಯಂಕ ನಿಫ್ಟಿ ಮತ್ತೆ 13,600 ಅಂಶದ ಗಡಿ ದಾಟಿದೆ.

ಬಿಎಸ್​ಇ ಸೆನ್ಸೆಕ್ಸ್ 437.49 (0.95%) ಅಂಶ ಏರಿಕೆ ದಾಖಲಿಸಿ 46,444.18 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ನಿಫ್ಟಿ 134.80 (1%) ಅಂಶ ಏರಿಕೆಯೊಂದಿಗೆ 13,601.10 ಅಂಶ ಏರಿಕೆ ದಾಖಲಿಸಿ ದಿನದ ವಹಿವಾಟು ಕೊನೆ ಗೊಳಿಸಿದೆ. ಇನ್​ಫೋಸಿಸ್​, ಎಂಆಯಂಡ್​ಎಂ, ಐಟಿಸಿ, ಎಸ್​ಬಿಐ, ಇಂಡಸ್​ಇಂಡ್ ಬ್ಯಾಂಕ್​, ಬಜಾಜ್ ಫೈನಾನ್ಸ್​, ಏಷ್ಯನ್ ಪೇಂಟ್ಸ್, ಟಿಸಿಎಸ್​, ಭಾರ್ತಿ ಏರ್​ಟೆಲ್​ ಷೇರು ಗಳು ಲಾಭಾಂಶ ಕಂಡಿವೆ.

ಹೊಸ ಕರೊನಾ ವೈರಸ್ ಸೋಂಕು ಹಾಗೂ ವಿವಿಧ ದೇಶಗಳು ವಿಧಿಸಿರುವ ಆರ್ಥಿಕ ನಿರ್ಬಂಧಗಳ ಕಾರಣ ಜಾಗತಿಕ ಷೇರುಪೇಟೆ ಯಲ್ಲಿ ತೀವ್ರಗತಿಯ ಏರಿಳಿತ ದಾಖಲಾಗಿದೆ.