Friday, 20th September 2024

ಹೆದ್ದಾರಿಗಳಲ್ಲಿ ಹೂವಿನ ಗಿಡ ನೆಟ್ಟು ಪೊಲೀಸರಿಗೆ ತಿರುಗೇಟು

ನವದೆಹಲಿ: ಪ್ರತಿಭಟನಾನಿರತ ರೈತರ ತಡೆಯಲು ಹೆದ್ದಾರಿಗಳಲ್ಲಿ ಮೊಳೆ ಹಾಕಿದ್ದ ಪೊಲೀಸರಿಗೆ ಅದೇ ಜಾಗದಲ್ಲಿಯೇ ಹೂವಿನ ಗಿಡಗಳನ್ನು ನೆಡುವ ಮೂಲಕ ರೈತರು ತಿರುಗೇಟು ನೀಡಿದ್ದಾರೆ.

ಮೊಳೆ ಹಾಕಿರುವ ಜಾಗದಲ್ಲಿ ರೈತರು ಹೂವಿನ ಗಿಡ ನೆಡುತ್ತಿರುವ ಫೋಟೋ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಪೊಲೀಸರ ವರ್ತನೆ ವಿರುದ್ಧ ಟೀಕೆಗಳೂ ವ್ಯಕ್ತವಾಗುತ್ತಿವೆ. ಗಾಜಿಪುರ ಗಡಿಯಲ್ಲಿ ಮೊಳೆಗಳನ್ನ ಹಾಕಿ, ಸಿಮೆಂಟ್ ಸುರಿದು ಬ್ಯಾರಿಕೇಡ್ ಗಳನ್ನು ಇಟ್ಟಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರುದ್ಧ ಪ್ರತಿಭಟನೆ ಭುಗಿಲೆದ್ದಿದ್ದು, ದೆಹಲಿ ಗಡಿಯಲ್ಲಿ ಈಗಾಗಲೇ ಸಾವಿರಾರು ರೈತರು ತೀವ್ರವಾಗಿ ಪ್ರತಿಭಟನೆ ನಡೆಸು ತ್ತಿದ್ದಾರೆ.

ಪ್ರತಿಭಟನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಇದರಿಂದ ಮತ್ತಷ್ಟು ಉತ್ತೇಜಿತರಾಗಿರುವ ರೈತ ಮುಖಂಡರು, ಟ್ರ್ಯಾಕ್ಟರ್ ಪರೇಡ್ ಬಳಿಕ ಚಕ್ಕಾ ಜಾಮ್ ಮೂಲಕ ಮತ್ತೊಮ್ಮೆ ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ.