Friday, 22nd November 2024

ಇಂಗ್ಲೆಂಡ್ 578 ರನ್ ಗಳಿಗೆ ಆಲೌಟ್: ಟೀಂ ಇಂಡಿಯಾಕ್ಕೆ ಆರಂಭದಲ್ಲೇ ಆಘಾತ

ಚೆನ್ನೈ: ಭಾರತದ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಇಂಗ್ಲೆಂಡ್ ತಂಡ 578 ರನ್ ಗಳಿಗೆ ಆಲೌಟ್ ಆಗಿದೆ. ಪ್ರತಿಯಾಗಿ ಇನ್ನಿಂಗ್ಸ್ ಆರಂಭಿಸಿದ ಭಾರತ ಸ್ಪೋಟಕ ಬ್ಯಾಟ್ಸ್ಮನ್ ರೋಹಿತ್ ಶರ್ಮಾ ವಿಕೆಟ್ ಕಳೆದುಕೊಂಡು ಆಘಾತಕ್ಕೊಳಗಾಯಿತು. ಶುಬ್ಮನ್‌ ಗಿಲ್‌ ಸಹ ವೇಗಿ ಜೋಫ್ರಾ ಆರ್ಚರ್‌ ಗೆ ವಿಕೆಟ್ ಒಪ್ಪಿಸಿದರು.

ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ಪ್ರಥಮ ಇನ್ನಿಂಗ್ಸ್ ನಾಯಕ ಜೋ ರೂಟ್ (218 ರನ್), ಬೆನ್ ಸ್ಟೋಕ್ಸ್ (82 ರನ್) ಅವರ ಅಮೋಘ ಬ್ಯಾಟಿಂಗ್ ಪ್ರದರ್ಶನ ಕಳೆ ನೀಡಿತು. 2ನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ತಂಡ 8 ವಿಕೆಟ್ ನಷ್ಟಕ್ಕೆ 555 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ಇಂದು 23 ರನ್ ಗಳಿಸು ವಷ್ಟರಲ್ಲಿ ಬಾಕಿ 2 ವಿಕೆಟ್ ಕಳೆದು ಕೊಂಡಿದೆ.

3ನೇ ದಿನ ಆರಂಭವಾಗುತ್ತಿದ್ದಂತೆಯೇ ಜೋಫ್ರಾ ಆರ್ಚರ್ ರನ್ನು ಇಶಾಂತ್ ಶರ್ಮಾ ಶೂನ್ಯಕ್ಕೆ ಕ್ಲೀನ್ ಬೋಲ್ಡ್ ಮಾಡಿದರು. ಬಳಿಕ ಜೇಮ್ಸ್ ಆಂಡರ್ಸನ್ ರನ್ನು ಅಶ್ವಿನ್ ಬೋಲ್ಡ್ ಮಾಡಿದರು. ಆ ಮೂಲಕ ಇಂಗ್ಲೆಂಡ್ 578 ರನ್ ಗಳಿಗೆ ಆಲೌಟ್ ಆಯಿತು.

ಭಾರತದ ಪರ ಇಶಾಂತ್ ಶರ್ಮಾ, ಶಾಬಾಜ್ ನದೀಂ ತಲಾ 2 ವಿಕೆಟ್ ಪಡೆದರೆ, ಜಸ್ ಪ್ರೀತ್ ಬುಮ್ರಾ ಮತ್ತು ಆರ್ ಅಶ್ವಿನ್ ತಲಾ 3 ವಿಕೆಟ್ ಪಡೆದರು.