Friday, 1st November 2024

ದೇವರ ಹುಂಡಿ ಹೊಡೆದು ಹಣ ದೋಚಿ ಪರಾರಿಯಾದ ಖದೀಮರು

ಪಾವಗಡ: ಪಟ್ಟಣದ ಬನಶಂಕರಿ ಬಡಾವಣೆಯಲ್ಲಿ ಇರುವ ಬನಶಂಕರಿ ದೇವಾಲಯದ ಹುಂಡಿ ಹೊಡೆದು ಅದರಲ್ಲಿ ಇದ್ದ ಹಣ ದೋಚಿ ಪರಾರಿಯಾದ ಘಟನೆ ಪಾವಗಡ ಪಟ್ಟಣದಲ್ಲಿ ಸಂಭವಿಸಿದೆ.

ಈ ದೇವಾಲಯ ಬನಶಂಕರಿ ಬಡಾವಣೆಯ ಮದ್ಯದಲ್ಲಿ ಇದ್ದು ಈ ಭಾಗದಲ್ಲಿ ವಾಸಿಸುತ್ತಿರುವ ಜನರು ಭಯಭೀತಿಗೊಂಡಿದ್ದಾರೆ.

ದೇವಾಲಯದ ಕಮೀಟಿಯ ಸದಸ್ಯ ಗೋಪಾಲಪ್ಪ ಮಾತನಾಡಿ ಪ್ರತಿವರ್ಷ ಜನವರಿಯಲ್ಲಿ ಈ ದೇವಾಲಯದಲ್ಲಿ ವಿಶೇಷ ಪೂಜೆ ಕಾರ್ಯಗಳನ್ನು ನಿರ್ವಹಿಸಲಾಗುತ್ತದೆ ಆ ವೇಳೆಯಲ್ಲಿ ಹೆಚ್ಚಿನದಾಗಿ ಭಕ್ತರು ಬರುತ್ತಾರೆ. ಹುಂಡಿಯಲ್ಲಿ ಸುಮಾರು ಐವತ್ತು ಸಾವಿರದಷ್ಟು ಹಣ ಇರಬಹುದು ಎಂಬು ದಾಗಿ ದೇವಲಯದ ಕಮೀಟಿಯ ಸದಸ್ಯ ಗೋಪಾಲಪ್ಪ ತಿಳಿಸಿದ್ದಾರೆ.

ಸ್ಥಳಕ್ಕೆ ಪೊಲೀಸ್‌ ಅಧಿಕಾರಿಗಳು ಬಂದು ತನಿಖೆ ನಡೆಸಿ ಪ್ರಕರಣ ದಾಖಲಿಸಿ ಕೊಂಡಿದ್ದಾರೆ.