ಭಾರತದ ಭೂ ಶಿರ ಜಮ್ಮು ಕಾಶ್ಮೀರದಲ್ಲಿ ಸಮಸ್ಯೆೆ ಮುಗಿಯದಾಗಿತ್ತು. ಉಗ್ರರ ಉಪಟಳ ಮಿತಿಮೀರಿತ್ತು. ಹಾಗಾಗಿ ಕಾಶ್ಮೀರ ಸಮಸ್ಯೆಕಗ್ಗಂಟಾಗಿಯೇ ಉಳಿದಿತ್ತು. ಕಾಶ್ಮೀರ ನಮ್ಮ ದೇಶದ ವಿಭಾಜ್ಯ ಅಂಗವಾಗಿದ್ದರೂ, ‘ಆರ್ಟಿಕಲ್ 370’ ವಿಶೇಷ ಸವಲತ್ತು ಗಳನ್ನು ಕಲ್ಪಿಸಿತ್ತು. ಇದು ಕಾಶ್ಮೀರಿಗರಿಗೆ ವಿಶೇಷ ಮಾನ್ಯತೆ ನೀಡಿದ್ದರೂ, ಪರೋಕ್ಷವಾಗಿ ಉಗ್ರರ ಉಪಟಳ ಹೆಚ್ಚಾಗಲು ಕಾರಣ ವಾಗಿತ್ತು. ಈಗ 370ನೇ ವಿಧಿವಶವಾಗಿದ್ದು, ಕಾಶ್ಮೀರದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆದಿದೆ.
ಈಗ ಇದೇ ಅಂಶಗಳನ್ನು ಆಧರಿಸಿ, ಕನ್ನಡದಲ್ಲಿ ‘ಆರ್ಟಿಕಲ್ 370’ ಎಂಬ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇಡೀ ಚಿತ್ರದ ಕಥೆ ಕಾಶ್ಮೀರ, ಅಲ್ಲಿ ಹಗಲಿರುಳು ಶ್ರಮಿಸುವ ಯೋಧರ ಕುರಿತಾಗಿದೆ. ನಿರ್ದೇಶಕ ಶಂಕರ್ ಈ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಚಿತ್ರ ಕ್ಕಾಗಿ ಎರಡು ವರ್ಷಗಳು ಶ್ರಮವಹಿಸಿ ಅಗತ್ಯವಾದ ಮಾಹಿತಿಗಳನ್ನು ಕಲೆ ಹಾಕಿ ಚಿತ್ರಕ್ಕೆ ಕಥೆ, ಚಿತ್ರಕಥೆಯನ್ನು ಬರೆದಿದ್ದಾರೆ.
ಯೋಧರ ಕುರಿತ ಕಥೆ ಇದಾಗಿದ್ದು, ಸುಪ್ರೀಂ ಹೀರೋ ಶಶಿಕುಮಾರ್ ಚಿತ್ರದ ನಾಯಕರಾಗಿ ನಟಿಸುತ್ತಿದ್ದಾರೆ. ವೀರ ಯೋಧರಾಗಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಭಯೋತ್ಫಾದಕರ ಅಟ್ಟಹಾಸ
ಕಾಶ್ಮೀರದಲ್ಲಿ ಪಾಪಿ ಪಾಕಿಸ್ತಾನದ ಕುತಂತ್ರ ಮುಂದುವರಿದಿದೆ. ಸದ್ದಿಲ್ಲದೆ ಉಗ್ರರನ್ನು ಕಳುಹಿಸಿ ಭಯೋ ತ್ಫಾದಕ ಕೃತ್ಯಗಳನ್ನು ನಡೆಸುತ್ತಿದೆ. ಇದಕ್ಕೆ ಜಗ್ಗದ ಭಾರತೀಯ ಸೇನೆ, ಪಾಪಿಸ್ತಾನಕ್ಕೆ ತಕ್ಕ ಉತ್ತರ ನೀಡು ತ್ತಿದೆ. ಇದು ಚಿತ್ರದ ಕಥೆಯ ಒಂದು ತಿರುಳಾ ಗಿದ್ದು, ಕಾಶ್ಮೀರದಲ್ಲಿ ನೆಲೆಸಿರುವ ನಾಗರೀಕರನ್ನು ರಕ್ಷಿಸಲು ನಮ್ಮ ಯೋಧರ ಸಾಹಸ ಕಥೆಯ ತಿರುಳಾಗಿದೆ. ಇಲ್ಲಿ ಶಶಿಕುಮಾರ್ ಮೇಜರ್ ಪಾತ್ರದಲ್ಲಿ ಮಿಂಚಲಿದ್ದಾರೆ.
ಪ್ರೀತಿಯಿಂದ ದೇಶ ಸೇವೆಗೆ ತೆರಳುವ ನಾಯಕ, ರಜೆಯಲ್ಲಿ ಮನೆಗೆ ಮರಳಿರುತ್ತಾನೆ. ಮನೆಮಂದಿಯ ಜತೆ ಸುಖವಾಗಿ ಕಾಲ ಕಳೆಯುತ್ತಿರುವಾಗಲೂ ದೇಶ ರಕ್ಷಣೆಯದ್ದೇ ಧ್ಯಾನ ಇವರದ್ದಾಗಿರುತ್ತದೆ. ಹೀಗಿರುವಾಗಲೇ ದೇಶದಲ್ಲಿ ಯುದ್ಧದ ವಾತಾವರಣ ಮೂಡುತ್ತದೆ. ಹಾಗಾಗಿ ರಜೆಗೆ ಬಂದ ಮೇಜರ್, ಮತ್ತೆ ದೇಶ ರಕ್ಷಣೆಗಾಗಿ ಮರಳಲೇ ಬೇಕಾಗುತ್ತದೆ. ಅಲ್ಲಿ ತನ್ನ ತಾಯ್ನಾಡನ್ನು ಹೇಗೆ ರಕ್ಷಿಸುತ್ತಾನೆ ಎಂಬುದನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಪ್ರಯತ್ನ ಮಾಡುತ್ತಿದ್ದಾರೆ ನಿರ್ದೇಶಕ ಶಂಕರ್.
ಶಶಿಕುಮಾರ್‌ಗೆ ಜತೆಯಾಗಿ ಶ್ರುತಿ ನಟಿಸುತ್ತಿದ್ದಾರೆ. ವೀರ ಸೇನಾನಿಗೆ ಸ್ಫೂರ್ತಿ ತುಂಬುವ ದಿಟ್ಟ ಮಹಿಳೆಯಾಗಿ ಶ್ರುತಿ ನಟಿಸಿದ್ದಾರೆ. ಶಶಿಕುಮಾರ್ ಅವರ ತಂದೆಯ ಪಾತ್ರದಲ್ಲಿ ಹಿರಿಯ ನಟ ಶಿವರಾಮ್ ಬಣ್ಣ ಹಚ್ಚಿದ್ದಾರೆ. ಇವರೊಂದಿಗೆ ಮತ್ತಷ್ಟು ಹಿರಿ ಕಿರಿಯ ಕಲಾವಿದರು ಪಾತ್ರನಿರ್ವಹಿಸಿದ್ದಾರೆ.
ಮುಗಿಯದ ಜಟಾಪಟಿ
‘ಆರ್ಟಿಕಲ್ 370’ ರದ್ದಾಗಿದೆ. ಆದರೂ ಜಟಾಪಟಿ ನಿಂತಿಲ್ಲ. ಕಾಶ್ಮೀರದಲ್ಲಿ ಹಂತ ಹಂತವಾಗಿ ಶಾಂತಿ ನೆಲೆಸುತ್ತಿದ್ದರು. ಅಲ್ಲಲ್ಲಿ ಶಾಂತಿ ಕದಡುವ ಯತ್ನವೂ ನಡೆದಿದೆ. ವಿಧಿ 370 ರಿಂದ ದೇಶಕ್ಕಾದ ಅನ್ಯಾಯ, ವಿಧಿ ರದ್ದತಿಯಿಂದ ದೇಶದಲ್ಲಿ ಮೂಡಿದ
ಸಂಭ್ರಮ. ಕಾಶ್ಮೀರವನ್ನು ಕಾಯುತ್ತಿರುವ ನಮ್ಮ ವೀರ ಯೋಧರ ಬಗ್ಗೆಯೇ ಚಿತ್ರ ಸಾಗುತ್ತದೆ. ‘ಆರ್ಟಿಕಲ್ 370’ ದೇಶ ಪ್ರೇಮ
ಸಾರುವ ಚಿತ್ರವಾಗುವುದು ದಿಟ. ಮಡಿಕೇರಿ, ಚಿಕ್ಕಮಗಳೂರು, ರಾಮನಗರದ ಸುತ್ತಮುತ್ತ ಸುಮಾರು 30 ದಿನಗಳ ಕಾಲ
ಚಿತ್ರೀಕರಿಸಿಕೊಂಡಿರುವ ಚಿತ್ರತಂಡ, ಕ್ಲೈಮ್ಯಾಕ್‌ಗಾಗಿ ಕಾಶ್ಮೀರಕ್ಕೆ ತೆರಳಿದೆ.
ಈಗಾಗಲೇ ಶೇ90 ರಷ್ಟು ಚಿತ್ರೀಕರಣ ಮುಗಿಸಿದ್ದು, ಯುಗಾದಿಯ ಬಳಿಕ ಚಿತ್ರವನ್ನು ತೆರೆಗೆ ತರುವ ಪ್ಲಾನ್ ಚಿತ್ರತಂಡಕ್ಕಿದೆ.
ಅದಕ್ಕಾಗಿ ಭರದ ಚಿತ್ರೀಕರಣ ನಡೆಸಿದೆ. ಕೊರೆಯು ಚಳಿಯಲ್ಲೂ ಶೂಟಿಂಗ್ ಸಾಗಿದೆ.