ನವದೆಹಲಿ: ‘ಟೂಲ್ ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.13ರಂದು ಬೆಂಗಳೂರು ನಿವಾಸದಿಂದ ಬಂಧನಕ್ಕೊಳಗಾಗಿದ್ದ 22 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿ ಅವರಿಗೆ ದೆಹಲಿ ನ್ಯಾಯಾಲಯ ಮಂಗಳವಾರ ಜಾಮೀನು ಮಂಜೂರು ಮಾಡಿದೆ.
ರವಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಪಟಿಯಾಲಾ ಗೃಹ ನ್ಯಾಯಾಲಯ ಸಂಕೀರ್ಣದ ಹೆಚ್ಚುವರಿ ಸೆಷನ್ಸ್ ನ್ಯಾಯಾ ಧೀಶ ಧರ್ಮೇಂದರ್ ರಾಣಾ ಅವರು ಈ ತೀರ್ಪು ನೀಡಿದ್ದಾರೆ.