Friday, 13th December 2024

ವಿಶ್ವಸಂಸ್ಥೆಯ ಯುಎನ್‌ಇಪಿ ನ್ಯೂಯಾರ್ಕ್ ಕಚೇರಿ ಮುಖ್ಯಸ್ಥೆಯಾಗಿ ಲಿಜಿಯಾ ನರೋನ್ಹಾ

ವಿಶ್ವಸಂಸ್ಥೆ: ಭಾರತ ಮೂಲದ ಆರ್ಥಿಕ ತಜ್ಞೆ ಲಿಜಿಯಾ ನರೋನ್ಹಾ ಅವರನ್ನು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ (ಯುಎನ್‌ಇಪಿ) ನ್ಯೂಯಾರ್ಕ್ ಕಚೇರಿ ಮುಖ್ಯಸ್ಥೆ ಹಾಗೂ ಸಹಾಯಕ ಪ್ರಧಾನ ಕಾರ್ಯದರ್ಶಿಯನ್ನಾಗಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ನೇಮಕ ಮಾಡಿದ್ದಾರೆ.

ಸದ್ಯ ಈ ಹುದ್ದೆಯಲ್ಲಿ ಭಾರತ ಮೂಲದ ಅಭಿವೃದ್ಧಿ ಅರ್ಥಶಾಸ್ತ್ರಜ್ಞ ಸತ್ಯ ತ್ರಿಪಾಠಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸುಸ್ಥಿರ ಅಭಿವೃದ್ಧಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಲಿಜಿಯಾ ಅವರು 30 ವರ್ಷಗಳಿಗೂ ಅಧಿಕ ಕಾಲ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.