Wednesday, 27th November 2024

ಮಹಿಳಾ ಪ್ರಧಾನ ಪಾತ್ರದತ್ತ ಶರಣ್ಯಾ ಚಿತ್ತ

ಕಿರುತೆರೆಯಲ್ಲಿ ಗುರುತಿಸಿಕೊಂಡವರು ತಮ್ಮ ಪ್ರತಿಭೆಯಿಂದಲೇ ಬೆಳ್ಳಿತೆರೆಗೂ ಎಂಟ್ರಿ ಕೊಡುತ್ತಿದ್ದಾರೆ. ಅಂತಹ ಸಾಲಿಗೆ ತೀರ್ಥಳ್ಳಿ ಬೆಡಗಿ ಶರಣ್ಯಾ  ಶೆಟ್ಟಿ ಸೇರ್ಪಡೆಯಾಗುತ್ತಾರೆ.

ಶಾಲಾ ದಿನಗಳಿಂದಲೂ ತಾನೊಬ್ಬ ಕಲಾವಿದೆಯಾಗಬೇಕೆಂಬ ಉತ್ಕಟ ಬಯಕೆ ಈಕೆ ಯಲ್ಲಿತು. ಜತೆಗೆ ಚಿತ್ರೀಕರಣ ಸ್ಥಳಗಳು, ಪ್ರೀಮಿಯರ್ ಷೋಗಳಿಗೆ ಹೋದಾಗ ನಾನು ನಟಿಯಾಗಬೇಕೆಂಬ ಸಣ್ಣದೊಂದು ಆಸೆ ಅಂದೇ ಚಿಗುರಿತ್ತು. ಇದಕ್ಕೆ ಮನೆಯಿಂದ ಸಕರಾತ್ಮಕ ಸಹಕಾರ, ಪ್ರೋತ್ಸಾಹ ಸಿಕ್ಕಿದ್ದರಿಂದಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದಾರೆ ಶರಣ್ಯಾ. ರೂಪದರ್ಶಿಯಾಗಿ ಹಲವು ಶೋಗಳಲ್ಲಿ ಪಾಲ್ಗೊಂಡು ಮೆಚ್ಚುಗೆಯನ್ನು ಪಡೆದಿ ದ್ದಾರೆ. ಈ ಸಮಯದಲ್ಲೆ ’ಗಟ್ಟಿ ಮೇಳ’ ಧಾರಾವಾಹಿ ಅಡಿಷನ್‌ನಲ್ಲಿ ಆಯ್ಕೆಯಾಗಿ, ಸುಮಾರು 50 ಕಂತುಗಳಲ್ಲಿ ಸಾಹಿತ್ಯ ಹೆಸರಿನಲ್ಲಿ ಖಳನಾಯಕಿಯಾಗಿ ಬಣ್ಣಹಚ್ಚಿದರು.

ಪ್ರೇಕ್ಷಕರಿಗೂ ಮೆಚ್ಚುಗೆಯಾದರು. ಹೀಗಿರುವಾಗಲೇ ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸಿ, ನಿರ್ದೇಶಿಸಿದ ’ರಾಜೇಂದ್ರಪೊನ್ನಪ್ಪ’ ಚಿತ್ರದಲ್ಲಿ ಮಗಳ ಪಾತ್ರದಲ್ಲಿ ಬಣ್ಣಹಚ್ಚುವ ಅವಕಾಶ ಒಲಿದಿದೆ.

ಇದರ ನಂತರ ರೆಟ್ರೋ ಕಥೆ ಹೊಂದಿರುವ ’1980’ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಅವರ ಜತೆ ನಟಿಸುವ ಅವಕಾಶವೂ ಸಿಕ್ಕಿದೆ. ಈ ಸಿನಿಮಾವು ಮೊದಲು ಬಿಡುಗಡೆಯಾಗುತ್ತಿರುವುದರಿಂದ ಇದೇ ಪ್ರಥಮ ಚಿತ್ರವೆಂದು ಹೇಳಿಕೊಳ್ಳುವುದಕ್ಕೆ ಖುಷಿ ಆಗುತ್ತದೆ ಎನ್ನುತ್ತಾರೆ ಶರಣ್ಯಾ.

ರಂಗಿತರಂಗ ನಿರ್ಮಾಪಕ, ಭರತ್ ನಿರ್ದೆಶನದ ’ಸ್ಪೂಕಿ ಕಾಲೇಜ್’ ನಲ್ಲಿ ಎರಡನೇ ನಾಯಕಿಯಾಗಿ ‘31ಡೇಸ್’ ಚಿತ್ರಕ್ಕೆ ನಿರಂಜನ್ ಶೆಟ್ಟಿಗೆ ಜೋಡಿಯಾಗಿ, ’14 ಫೆಬ್’ ಸಿನಿಮಾಕ್ಕೆ ನಾಯಕಿಯಾಗಿ ಗ್ಲಾಮರೆಸ್ ಮತ್ತು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನು ಮೂರು ನಾಲ್ಕು ಸಿನಿಮಾಗಳಲ್ಲಿ ನಟಿಸಲು ಮಾತುಕತೆ ನಡೆದಿದೆ. ನೆರೆಯ ರಾಜ್ಯಗಳಿಂದ ಚಿತ್ರಕ್ಕಿಂತಲೂ ಧಾರವಾಹಿಗಳಲ್ಲಿ ನಟಿಸಲು ಬೇಡಿಕೆ ಬರುತ್ತಿದೆ.

ಯಾವುದನ್ನು ಒಪ್ಪಿಕೊಂಡಿಲ್ಲ, ಕನ್ನಡ ಚಿತ್ರದಲ್ಲಿ ನಟಿಸುವುದೇ ನನ್ನ ಮೊದಲ ಆದ್ಯತೆ ಎನ್ನುತ್ತಾರೆ ಶರಣ್ಯಾ ಶೆಟ್ಟಿ. ಶರಣ್ಯಾ ಕ್ಲಾಸಿಕಲ್ ಡ್ಯಾನ್ಸರ್, ಹಾಗಾಗಿ ಮುಂದೆ ಮಹಿಳಾ ಪ್ರಧಾನ ಚಿತ್ರಗಳಲ್ಲಿ ನಟಿಸಬೇಕು ಎಂಬ ಮಹದಾಸೆ ಅವರ ಮನದಲ್ಲಿ ಬೇರೂರಿದೆ. ಸದ್ಯ ಅಂತಹ ಕಥೆಗಾಗಿ ಎದುರು ನೋಡು ತ್ತಿದ್ದಾರೆ.