Saturday, 23rd November 2024

ಮತ್ತೊಮ್ಮೆ ಕಂಪಿಸಿದ ನ್ಯೂಜಿಲೆಂಡ್‌: 6.4 ತೀವ್ರತೆ ದಾಖಲು

ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನಲ್ಲಿ ಶನಿವಾರ ರಿಕ್ಟರ್ ಮಾಪನದಲ್ಲಿ 6.4 ತೀವ್ರತೆಯ ಭೂಕಂಪನವಾಗಿರುವುದು ವರದಿಯಾಗಿದೆ.

ನ್ಯೂಜಿಲೆಂಡ್‌ನ ಉತ್ತರ ದ್ವೀಪದಲ್ಲಿ ಭೂಮಿ ಕಂಪಿಸಿದೆ. ಯಾವುದೇ ಗಂಭೀರವಾದ ಹಾನಿ ಅಥವಾ ಗಾಯದ ಬಗ್ಗೆ ವರದಿ ಯಾಗಿಲ್ಲ. ಗಿಸ್ಬೋರ್ನ್ ಕಚಲಾಚೆಯ ಮೇಲೆ ಭೂಕಂಪನದ ಕೇಂದ್ರ ಬಿಂದು ದಾಖಲಾಗಿದೆ ಎಂದು ಅಮೆರಿಕ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ.

ಶುಕ್ರವಾರ ನ್ಯೂಜಿಲೆಂಡ್‌ನ ಈಶಾನ್ಯಕ್ಕೆ ದಕ್ಷಿಣ ಪೆಸಿಫಿಕ್‌ನಲ್ಲಿ 1,000 ಕಿ.ಮೀ. ದೂರದಲ್ಲಿ ಕೆರ್ಮಾಡೆಕ್ ದ್ವೀಪ ಪ್ರದೇಶದಲ್ಲಿ 8.1 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಪರಿಣಾಮ 11 ಮೀಟರ್ ಎತ್ತರದ ಸುನಾಮಿ ಅಲೆಗಳು ಅಪ್ಪಳಿಸುವ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು.