ಅಟ್ಲಾಂಟಾ: ಎರಡು ಮಸಾಜ್ ಪಾರ್ಲರ್ಗಳು ಮತ್ತು ಉಪನಗರಗಳಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಎಂಟು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ, ಮೃತರಲ್ಲಿ ಹಲವರು ಏಷ್ಯಾ ಮೂಲದ ಮಹಿಳೆಯರಾಗಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಗೆ ಸಂಬಂಧಿಸಿದಂತೆ ನೈರುತ್ಯ ಜಾರ್ಜಿಯಾದಲ್ಲಿ ಶಂಕಿತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಟ್ಲಾಂಟಾದ ಅಕ್ವರ್ತ್ನ ಹಳ್ಳಿಯ ಸಮೀಪದಲ್ಲಿರುವ ಸ್ಟ್ರಿಪ್ ಮಾಲ್ನ ಯಂಗ್ಸ್ ಏಷ್ಯನ್ ಮಸಾಜ್ ಪಾರ್ಲರ್ ಮೇಲೆ ಗುಂಡಿನ ದಾಳಿ ಆರಂಭವಾ ಯಿತು. ಘಟನೆಯಲ್ಲಿ ಐವರಿಗೆ ಗುಂಡು ತಗುಲಿತು ಎಂದು ಚೆರೊಕಿ ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಹೇಳಿದ್ದಾರೆ.
ಘಟನಾ ಸ್ಥಳದಲ್ಲೇ ಇಬ್ಬರು ಮೃತಪಟ್ಟರು. ಮೂವರನ್ನು ಆಸ್ಪತ್ರೆಗೆ ಸಾಗಿಸ ಲಾಯಿತು. ಚಿಕಿತ್ಸೆಗೆ ಸ್ಪಂದಿಸದೇ ಇಬ್ಬರು ಆಸ್ಪತ್ರೆ ಯಲ್ಲಿ ಮೃತಪಟ್ಟರು. ಅಟ್ಲಾಂಟಾದ ನೆರೆಯ ಪಟ್ಟಣ ಬಕ್ಹೆಡ್ನ ಗೋಲ್ಡ್ ಸ್ಪಾ ಮೇಲೆ ಗುಂಡಿನ ದಾಳಿ ನಡೆದು, ಮೂವರು ಮಹಿಳೆಯರು ಮೃತಪಟ್ಟಿ ದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಿಶ್ವವಾಣಿ ಫೇಸ್ ಬುಕ್ ಪೇಜ್ ಲೈಕ್ ಮಾಡಿ