Thursday, 19th September 2024

ಸಂತ್ರಸ್ತರ ಹೊರ ಹಾಕುವ ಯತ್ನ.?

ನೆಲ್ಯಹುದಿಕೇರಿ ಶಾಲೆಯ ಪರಿಹಾರ ನೆರೆ ಸಂತ್ರಸ್ತರನ್ನು ಬಲವಂತವಾಗಿ ಹೊರ ಕಳುಹಿಸುವ ಪ್ರಯತ್ನ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರವಾಹ ಸಂತ್ರಸ್ತರು, ತಮಗೆ ಜಿಲ್ಲಾಡಳಿತ ಶಾಶ್ವತ ಸೂರು ಒದಗಿಸಿ ಕೊಡುವವರೆಗೆ ತಾವುಗಳು ಪರಿಹಾರ ಕೇಂದ್ರ ಬಿಟ್ಟು ಕದಲುವುದಿಲ್ಲವೆಂದು ಪಟ್ಟು ಹಿಡಿದರು.

ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದುಕೊಂಡಿರುವ ಪ್ರವಾಹ ಸಂತ್ರಸ್ತರಿಂದ ಕಂದಾಯ ಇಲಾಖೆ ಅಧಿಕಾರಿಗಳು ಪತ್ರವೊಂದಕ್ಕೆ ಬಲವಂತದಿಂದ ಸಹಿ ಪಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾವೇರಿ ನದಿ ದಡದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡಿದ್ದು, ತಮ್ಮ ಅನಧಿಕೃತ ಜಾಗವನ್ನು ಪರ್ಯಾಯ ಸ್ಥಳಕ್ಕೆೆ ತೆರಳಲು ಬಯಸುವುದಿಲ್ಲ ಹಾಗೂ ಸರಕಾರ ನೀಡುವ 1ಲಕ್ಷ ರು. ಪರಿಹಾರ ಪಡೆಯುತ್ತೇವೆ, ತಾವುಗಳು ಇರುವ ಪ್ರದೇಶದಿಂದ ಸ್ವಯಂ ಪ್ರೇರಣೆಯಿಂದ ತೆರಳುತ್ತೇವೆೆ ಎಂದು ಸ್ವಯಂ ಹೇಳಿಕೆಯ ರೂಪದಲ್ಲಿ ಪತ್ರದ ಒಕ್ಕಣೆ ಇದೆ. ಅದಕ್ಕೆೆ ಅಧಿಕಾರಿಗಳು ಒತ್ತಾಾಯದಿಂದ ಸಹಿ ಹಾಕಿಸಿಕೊಳ್ಳುತ್ತಿಿದ್ದಾಾರೆ ಎಂದು ಸಂತ್ರಸ್ತರೊಬ್ಬರು ದೂರಿದರು.

ಓದಲು ಬರದ ಹಲವು ನಿರಾಶ್ರಿಿತರು ಇದಕ್ಕೆೆ ಸಹಿ ಹಾಕಿದ್ದು, ಓದಲು ಬಂದವರ ಮುಖಾಂತರ ಈ ವಿಷಯ ಉಳಿದವರಿಗೆ ಗೊತ್ತಾಾಗಿದ್ದು, ಕೆಲವರು ಈ ಪತ್ರವನ್ನು ಹಾಕಿದ್ದಾಾರೆ. ಪ್ರತಿಭಟನೆ ವೇಳೆ ಜಿಲ್ಲಾಾ ಉಪವಿಭಾಗಧಿಕಾರಿ ಜವರೇಗೌಡ ಸ್ಥಳಕ್ಕಾಾಗಮಿಸಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ, ಜಿಲ್ಲಾಾಡಳಿತವು ಸಂತ್ರಸ್ತರಿಗೆ ಸೂಕ್ತ ನಿವೇಶನ ಒದಗಿಸುತ್ತದೆ. ಜಿಲ್ಲೆೆಯ ಬೇರೆ ಕಡೆಗಳಿಗೆ ನೀಡಬೇಕಾಗಿದ್ದ ಸರಕಾರದ ಈ ಪತ್ರವನ್ನು ಅಧಿಕಾರಿಗಳು ಈ ಪ್ರದೇಶಕ್ಕೆೆ ನೀಡಿದ್ದಾಾರೆ. ಆದ್ದರಿಂದ ಸಂತ್ರಸ್ತರು ಯಾವುದೆ ಗೊಂದಲಕ್ಕೀಡಾಗುವುದು ಬೇಡ ಎಂದು ತಿಳಿಸಿದರು.

ಬಲವಂತದಿಂದ ಸಹಿ ಪಡೆದುಕೊಳ್ಳುತ್ತಿಿರುವುದು ಖಂಡನಿಯ. ಶಾಶ್ವತ ಸೂರಿನ ವ್ಯವಸ್ಥೆೆ ಆಗುವವರೆಗೆ ಪರಿಹಾರ ಕೇಂದ್ರದಲ್ಲೇ ವಾಸ್ತವ್ಯಕ್ಕೆೆ ಅವಕಾಶ ಕಲ್ಪಿಿಸಬೇಕು. ಇಲ್ಲದಿದ್ದರೆ ನಡೆಸುತ್ತೇವೆ.
– ಪಿ.ಆರ್.ಭರತ್ ಕಾರ್ಮಿಕ ಮುಖಂಡ

Leave a Reply

Your email address will not be published. Required fields are marked *