2017 ರಲ್ಲಿ ತೆರೆಗೆ ಬಂದ ‘ರಾಜಕುಮಾರ’ ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲಾಯಿತು. ಈ ಚಿತ್ರದಲ್ಲಿ
‘ರಾಜಕುಮಾರ’ ನಾಗಿ ಪ್ರತಿಬಿಂಬಿಸಿದ ಪುನೀತ್ ರಾಜ್ಕುಮಾರ್ ಚಿತ್ರದ ಮೂಲಕವೇ ಅದೆಷ್ಟೋ ಮಂದಿಗೆ ಸ್ಪೂರ್ತಿಯಾದರು,
ಯುವಕರಲ್ಲಿ ಹೊಸ ಬದಲಾವಣೆಯನ್ನೂ ತಂದರು.
ಈ ಚಿತ್ರಕ್ಕೆ ಅದ್ಭುತವಾದ ಕಥೆ ಹೆಣೆದ ನಿರ್ದೇಶಕ ಸಂತೋಷ್ ಆನಂದ್ರಾಮ್, ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದರು. ಈಗ ಅದೇ ಯಶಸ್ವಿ ಜೋಡಿ ಮತ್ತೆ ಒಂದಾಗಿದ್ದು, ಚಂದನವನಕ್ಕೆ ‘ಯುವರತ್ನ’ನನ್ನು ಹೊತ್ತು ತಂದಿದೆ. ಟೈಟಲ್ನಲ್ಲೇ ಪವರ್ ಇರುವ ‘ಯುವರತ್ನ’ನನ್ನು ಅಭಿಮಾನಿ ಗಳು ಅದ್ಧೂರಿಯಾಗಿ ಸ್ವಾಗತಿಸುತ್ತಿದ್ದಾರೆ.
‘ಯುವರತ್ನ’ ರಾಜ್ಯದಲ್ಲಿ ಮಾತ್ರವಲ್ಲ ಹೊರರಾಜ್ಯ, ವಿದೇಶಗಳಲ್ಲೂ ಭರ್ಜರಿಯಾಗಿ ಬಿಡುಗಡೆ ಯಾಗಿದೆ. ಈಗಾಗಲೇ ಬಿಡುಗಡೆ ಯಾಗಿರುವ ಸಿನಿಮಾದ ಟ್ರೇಲರ್ ಹಾಗೂ ಹಾಡುಗಳು ‘ಯುವರತ್ನ’ನ ಕುತೂಹಲವನ್ನು ಇಮ್ಮಡಿಗೊಳಿಸಿದೆ. ಸಿನಿಮಾದ ಡೈಲಾಗ್ ಗಳಂತು ಸಿನಿಪ್ರಿಯರಲ್ಲಿ ಅಚ್ಚಳಿಯದೇ ಉಳಿದಿವೆ. ಟ್ರೇಲರ್ ಗಮನಿಸಿದರೆ ಇದು ಪಕ್ಕಾ ಯೂತ್ ಫುಲ್ ಸ್ಟೋರಿ ಎಂಬುದು ಖಚಿತವಾಗುತ್ತದೆ. ಇದರ ಜತೆಗೆ ಕಾಲೇಜು ಕಥೆಯೂ ಚಿತ್ರದಲ್ಲಿದೆ.
ಶಾಲಾ ಶಿಕ್ಷಣ ಮತ್ತು ಖಾಸಗೀಕರಣದಲ್ಲಿನ ಅನ್ಯಾಯದ ಸುತ್ತ ಕಥೆ ಸುತ್ತುತ್ತದೆ. ಚಿತ್ರದಲ್ಲಿ ಆಕ್ಷನ್ ಜತೆಗೆ ಬರಪೂರ ಮನರಂಜನೆಯೂ ಇದೆ. ಪುನೀತ್ ರಾಜ್ ಕುಮಾರ್ ಚಿತ್ರ ಎಂದ ಮೇಲೆ ಮನೆಮಂದಿಯೆಲ್ಲಾ ಕುಳಿತು ನೋಡುವಂತ ಕೌಟುಂಬಿಕ ಕಥೆ ಚಿತ್ರದಲ್ಲಿ ಅಡಕವಾಗಿದೆ ಎಂಬುದು ಅದಾಗಲೇ ಖಚಿತ ವಾಗಿದೆ.
‘ಯುವರತ್ನ’, ಅಡಿಬರಹದಲ್ಲಿ ‘ಪವರ್ ಆಫ್ ಯೂತ್’ ಎಂದಿದೆ. ಯುವಕರ ಮಹತ್ವವನ್ನು ಒತ್ತಿ ಹೇಳುತ್ತದೆ. ಇದು ಸ್ಮಾರ್ಟ್ ಪೋನ್ ಯುಗ. ಹಾಗಾಗಿ ಯುವಕರೆಲ್ಲರೂ ಡಿಜಿಟಲ್ ಸಂಪರ್ಕ ಹೊಂದಿರುತ್ತಾರೆ. ಅದನ್ನು ಸಮರ್ಥವಾಗಿ ಬಳಸಿಕೊಂಡರೆ ಹೇಗೆ ಯುವಕರು ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು, ಡಿಜಿಟಲ್ ಸಂವಹನ ಯುವಕರನ್ನು ಸರಿಯಾದ ದಿಕ್ಕಿ ನಲ್ಲಿ ಸಾಗಲು ಹೇಗೆ ಪ್ರೇರೇಪಿಸಬೇಕು ಎಂಬ ಅಂಶವು ಚಿತ್ರದಲ್ಲಿದೆ.
ಅಪ್ಪು ಡ್ಯಾನ್ಸ್… ಡ್ಯಾನ್ಸ್ …
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಡ್ಯಾನ್ಸ್ಗೂ ಸೈ ಫೈಟ್ಗೂ ಸೈ , ಈ ಚಿತ್ರದಲ್ಲಿ ಅಪ್ಪು ಹಾಕಿರುವ ಸ್ಟೆಪ್ಸ್ ಯುವಕರನ್ನು
ಮನಸೂರೆಗೊಂಡಿದೆ, ಕಿಚ್ಚಾಯಿಸಿದೆ. ‘ಫೀಲ್ ದ ಪವರ್…’ ಸಾಂಗ್ನಲ್ಲಿ ಅಪ್ಪು ಪವರ್ ಫುಲ್ ಸ್ಟೆಪ್ ಹಾಕಿದ್ದಾರೆ. ಲೈಟ್ಟಾಗಿ ಗಡ್ಡಬಿಟ್ಟು ಹೊಸಗೆಟಪ್ನಲ್ಲಿ ಮಿಂಚಿದ್ದಾರೆ. ಈ ಹಾಡು ಕಣ್ತುಂಬಿಕೊಂಡ ಮೇಲೆ ಅಪ್ಪುಗೆ ಅಪ್ಪುವೇ ಸಾಟಿ ಎನ್ನುತ್ತಿದ್ದಾರೆ ಅಭಿಮಾನಿಗಳು. ‘ಯುವರತ್ನ’ ಚಿತ್ರದಲ್ಲಿ ಮನರಂಜನೆಯ ಜತೆಗೆ ಸಾಮಾಜಿಕ ಕಳಕಳಿಯೂ ಇದೆಯಂತೆ. ಅದೇನು ಎಂಬುದು ಚಿತ್ರದಲ್ಲಿ ಸ್ಪಷ್ಟ ವಾಗುತ್ತದೆ.
ದಿಗ್ಗಜರ ದಂಡು
‘ಯುವರತ್ನ’ ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಹಿರಿಯ ನಟ ಪ್ರಕಾಶ್ ರಾಜ್ ಕಾಲೇಜು ಪ್ರಾಂಶುಪಾಲರಾಗಿ ನಟಿಸಿದ್ದಾರೆ. ಅವಿನಾಶ್, ಅಚ್ಯುತ್ ಕುಮಾರ್, ರಂಗಾಯಣ ರಘು, ಸಾಯಿಕುಮಾರ್, ಪ್ರಕಾಶ್ ಬೆಳವಾಡಿ, ರವಿಶಂಕರ್, ರಾಜೇಶ್ ನಟರಂಗ, ಸುಧಾರಾಣಿ ಹೀಗೆ ದಿಗ್ಗಜರ ದಂಡೇ ಇದೆ. ಇವರ ಜತೆಗೆ ಸಾಧುಕೋಕಿಲಾ, ಕುರಿ ಪ್ರತಾಪ್ ಕಾಮಿಡಿ ಕಮಾಲ್ ಮಾಡಲಿದ್ದಾರೆ. ಡಾಲಿ ಧನಂಜಯ ಖದರ್ ಖಳನಾಗಿ ಕಾಣಿಸಿಕೊಂಡಿದ್ದಾರೆ. ಸಯೇಶಾ ಸೈಗಲ್ ಹಾಗೂ ಸೋನುಗೌಡ ಚಿತ್ರದ ನಾಯಕಿಯರಾಗಿ ಬಣ್ಣಹಚ್ಚಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ನಲ್ಲಿ ವಿಜಯ್ ಕಿರಗಂದೂರು ಈ ಚಿತ್ರವನ್ನು ನಿರ್ಮಿಸಿದ್ದಾರೆ.
ಕಥೆ ಹುಟ್ಟಿದ್ದು ಹೇಗೆ
‘ರಾಜಕುಮಾರ’ ಚಿತ್ರವನ್ನು ಎಲ್ಲಾ ಪ್ರೇಕ್ಷಕರು ವೀಕ್ಷಿಸಿ ಆನಂದಿಸಿದರು. ಚಿತ್ರಕ್ಕೆ ಡೊಡ್ಡ ಯಶಸ್ಸು ಸಿಕ್ಕಿತು. ಈ ಚಿತ್ರದ ಬಳಿಕ ಸಮಾಜದಲ್ಲಿ ಚರ್ಚಿತವಾಗುತ್ತಿರುವ ಕೆಲವು ವಿಚಾರಗಳನ್ನು ಗಮನಿಸಿದೆ. ಸಮಾಜದ ಹಲವು ಸಮಸ್ಯೆಗಳಿಗೆ ಶಿಕ್ಷಣವೇ ಪರಿಹಾರ ಎಂಬುದನ್ನು ಕಂಡುಕೊಂಡೆ.
ಅದರಲ್ಲೂ ನಮಗೆ ಅಕ್ಷರ ಕಲಿಸಿದ ಗುರುಗಳು ನಮ್ಮ ಜೀವನದಲ್ಲಿ ಎಷ್ಟು ಮಹತ್ವದ ಸ್ಥಾನವನ್ನು ಪಡೆದಿದ್ದಾರೆ ಎಂಬುದನ್ನು
ಅರಿತುಕೊಂಡೆ. ಇದೆಲ್ಲವನ್ನು ಗಮನಿಸಿದಾಗ ಒನ್ಲೈನ್ ಸ್ಟೋರಿ ಸಿದ್ಧವಾಯಿತು. ಈ ಮೂಲಕ ಸಮಾಜಕ್ಕೆ ಒಳ್ಳೆಯ ಕಟೆಂಟ್, ವ್ಯಾಲ್ಯೂಸ್ ಹೇಳಬೇಕೆಂಬ ಇಚ್ಚೆ ನಮಗಿತ್ತು. ಅದನ್ನು ಚಿತ್ರದ ಮೂಲಕ ಹೇಳಬೇಕೆಂದು ಅಪ್ಪು ಸರ್ ಹಾಗೂ ನಾನು ನಿರ್ಧರಿಸಿ ದೆವು. ಇದಕ್ಕೆ ತುಂಬಾ ರಿಲೇಟೆಡ್ ಆಗುವುದು ಶಿಕ್ಷಣ ಹಾಗಾಗಿ ಇದನ್ನು ಆಯ್ಕೆ ಮಾಡಿಕೊಂಡೆವು. ಇದಕ್ಕೆ ಸಂಬಂಧ ಬೆಸೆಯುವ ಅಂಶಗಳನ್ನು ಕಲೆ ಹಾಕುವಾಗ ಹುಟ್ಟಿದ ಕಥೆಯೇ ‘ಯುವರತ್ನ’ ಎಂದು ಕಥೆ ಹುಟ್ಟಿದ ಸಂಗತಿಯನ್ನು ಬಿಚ್ಚಿಡುತ್ತಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್.
ಪವರ್ ಫುಲ್ ಕಥೆ
ಪವರ್ಸ್ಟಾರ್ ಪುನೀತ್ರಾಜ್ಕುಮಾರ್ ಯೂತ್ ಐಕಾನ್ ಆಗಿ ಗುರುತಿಸಿಕೊಂಡವರು. ಪುನೀತ್ ಚಿತ್ರ ಎಂದ ಮೇಲೆ ಅದರಲ್ಲಿ ಸಮಾಜಕ್ಕೆ, ವಿಶೇಷವಾಗಿ ಯುವಕರಿಗೆ ಸ್ಫೂರ್ತಿದಾಯಕ ಕಥೆ ಇರಲೇಬೇಕು. ಅಪ್ಪು ಇಲ್ಲಿ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿ ಕೊಂಡಿದ್ದಾರೆ. ಸುಮಾರು ೬೫ ರಿಂದ ೭೦ ದಿನಗಳ ಕಾಲ ಕಾಲೇಜಿನಲ್ಲಿಯೇ ಚಿತ್ರೀಕರಣ ನಡೆಸಲಾಗಿದೆ. ಇದರಿಂದ ಕಾಲೇಜು
ದಿನಗಳನ್ನು ಕಂಡ ಹಾಗಾಯಿತು. ನಿರ್ದೇಶಕರು ಕಥೆ ಹೇಳಿದಾಗ ನನಗೆ ಕಾಲೇಜು ಲೈಫ್ ಬಗ್ಗೆ ಅಷ್ಟು ಐಡಿಯಾ ಇರಲಿಲ್ಲ. ಅವರು ಯೋಚಿಸುತ್ತಿರುವ ವಿಚಾರದಲ್ಲಿ ತುಂಬಾ ಮೌಲ್ಯವಿತ್ತು. ಇದು ಸಾಮಾಜಿಕ ಹೊಣೆಗಾರಿಕೆ ಇರುವಂತಹ ಸಿನಿಮಾ ಎನ್ನುವುದು ತಿಳಿಯಿತು ಎನ್ನುತ್ತಾರೆ ಅಪ್ಪು.
‘ಅಪ್ಪು ಹಾಗೂ ನನ್ನ ನಡುವೆ ರಾಜಕುಮಾರ ಬಾಂಧವ್ಯ ಬೆಸೆಯಿತು. ಯುವರತ್ನ ಬಾಂಧವ್ಯದ ಜತೆಯೇ ಸಾಗಿತು. ‘ಅಣ್ಣಾವ್ರೇ ಒಂದು ಯೂನಿವರ್ಸಿಟಿ, ಅಪ್ಪು ಅವರ ಮಗ ಎಂದ ಮೇಲೆ ಹೇಳುವುದು ಇನ್ನೇನಿದೆ. ಅವರನ್ನು ಪಾತ್ರಕ್ಕೆ ತಯಾರು ಮಾಡುವ ಮಾತೆಲ್ಲಿ.