Friday, 25th October 2024

ಜೆಸಿಬಿ ಬಳಸಿ ಏಕಾಏಕಿ ಮನೆಗಳ ಕಾಂಪೌಂಡ್ ತೆರವು 

ಪುರಸಭೆ ಅಧಿಕಾರಿಗಳ ವಿರುದ್ದ ಲಕ್ಷ್ಮೀಪತಿ ಲೇಔಟ್ನ ಮನೆ ಮಾಲೀಕರ ಆಕ್ರೋಶ

ಒತ್ತುವರಿ ಜಾಗದಲ್ಲಿ ಮನೆ ನಿರ್ಮಿಸಿಕೊಂಡಿದ್ದ ಆರೋಪ

ಪಾವಗಡ : ಏಕಾಏಕಿ ದಾಳಿ ನಡೆಸಿದ ಪುರಸಭೆ ಅಧಿಕಾರಿಗಳು ನೋಟಿಸ್ ನೀಡದೆ ಜೆಸಿಬಿ ಮೂಲಕ ಮನೆಗಳ ಕಾಂಪೌಂಡ್ ತೆರವು ಗೊಳಿಸಿರುವುದು ಎಷ್ಟರಮಟ್ಟಿಗೆ ಸರಿ ಎಂದು ಪಟ್ಟಣದ ಲಕ್ಷ್ಮೀ ಪತಿಲೇಔಟ್ನ ಬಡ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

ನಗರದ ಲಕ್ಷ್ಮೀಪತಿಲೇ ಔಟ್ನಲ್ಲಿ ಕೆಲ ಮನೆ ಮಾಲೀಕರು ನಿಯಮ ಉಲ್ಲಂಘಿಸಿ ಒತ್ತುವರಿ ಮಾಡಿಕೊಳ್ಳುವ ಮೂಲಕ ಚರಂಡಿಗಳ ಮೇಲೆ ಕಾಂಪೌಂಡ್ ಗಳು ನಿರ್ಮಾಣ ಮಾಡಿಕೊಂಡಿದ್ದು ಇದರಿಂದ ಸಾರ್ವಜನಿಕ ಹೋಡಾಟಕ್ಕೆ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ಸ್ಥಳೀಯರೊಬ್ಬರು 2015ರಲ್ಲಿ ಲೋಕಾಯುಕ್ತ ರಿಗೆ ದೂರು ಸಲ್ಲಿಸಿದ್ದಾರೆನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಕೂಡಲೇ ಸ್ಥಳ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸುವಂತೆ ಲೋಕಾಯುಕ್ತ ಕಚೇರಿಯಿಂದ ಪುರಸಭೆಗೆ ಆದೇಶ ಜಾರಿಯಾಗಿತ್ತು. ಇದರ ಬೆನ್ನಲ್ಲೇ ಮುಖ್ಯಾಧಿಕಾರಿ ಬಿ.ಸಿ.ಅರ್ಚನಾ ನೇತೃತ್ವದಲ್ಲಿ ಕಾರ್ಯೋನ್ಮುಖರಾದ ಪುರಸಭೆ ಅಧಿಕಾರಿಗಳು ಪಟ್ಟಣದ 17ನೇ ವಾರ್ಡ್ ಲಕ್ಷ್ಮೀಪತಿ ಲೇಔಟ್ ಗೆ ತೆರಳಿ ಅಳತೆ ಮಾಡುವ ಮೂಲಕ ನಿಯಮ ಉಲ್ಲಂಘಿಸಿ ಪುರಸಭೆ ವ್ಯಾಪ್ತಿಯ ಚರಂಡಿ ಮೇಲೆ ಕಟ್ಟಿಕೊಂಡಿದ್ದ ಎರಡು ಮನೆಗಳ ಕಾಂಪೌಂಡ್ ಗೋಡೆಗಳನ್ನು ಜೆಸಿಬಿಯಿಂದ ಸಂಪೂರ್ಣ ತೆರವುಗೊಳಿಸಿ ವಾಪಸ್ಸಾಗಿದ್ದರು.

ವಿಷಯ ತಿಳಿಯುತ್ತಿದ್ದಂತೆ ಜೀವನೋಪಾಯಕ್ಕಾಗಿ ತೆರಳಿದ್ದ ಮನೆ ಮಾಲಿಕರು ಕೊಡಲೇ ನಿವಾಸಕ್ಕೆ ಆಗಮಿಸಿ, ಮನೆಗಳ ಕಾಂಪೌಂಡ್ ಕೆಡವಿರುವುದನ್ನು ಕಂಡು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಮನೆ ಮಾಲಿಕರಾದ ರೇವಮ್ಮ ಮಾತ ನಾಡಿ,, ಏಕಾಏಕಿ ಆಗಮಿಸಿ ಜೆಸಿಬಿಗಳ ಮೂಲಕ ಕಾಂಪೌಂಡ್ ತೆರವು ಗೊಳಿಸಿರುವುದು ಸರಿಯಲ್ಲ. ನಿಯಮ ಉಲ್ಲಂಘಿಸಿ ಚರಂಡಿಗಳ ಮೇಲೆ ಕಾಂಪೌಂಡ್ ಕಟ್ಟಿರುವ ವಿಚಾರಕ್ಕೆ ಸಂಬಂಧಪಟ್ಟಂತೆ ಅವಕಾಶ ನೀಡ ಬೇಕಿತ್ತು. ಈ ಬಗ್ಗೆ ಪುರಸಭೆಯನ್ನು ಪ್ರಶ್ನಿಸಲಿದ್ದು, ನಷ್ಟ ಪರಿಹಾರ ಕಟ್ಟಿ ಕೊಡುವಂತೆ ಆಗ್ರಹಿಸಿದರು.

ನಿಯಮ ಉಲ್ಲಂಘಿಸಿ ವಾರ್ಡ್ನಲ್ಲಿ ಹಲವಾರು ಮಂದಿ ಚರಂಡಿಗಳ ಮೇಲೆ ಕಾಂಪೌಂಡ್ ಕಟ್ಟಿಕೊಂಡಿದ್ದಾರೆ. ಬಲಾಢ್ಯರ ಮನೆಗಳ ಕಾಂಪೌಂಡ್ ತೆರವುಗೊಳಿಸುವಲ್ಲಿ ಆಸಕ್ತಿ ವಹಿಸದೆ ನೋಟಿಸ್ ನೀಡದೆ ಏಕಾಏಕಿ ಅಸಹಾಯಕರ ಮನೆಗಳ ಕಾಂಪೌಂಡ್ ತೆರವು ಗೊಳಿಸಿರುವುದಾಗಿ ಎಷ್ಟರಮಟ್ಟಿಗೆ ಸರಿ ಎಂದು ಪುರಸಭೆಗೆ ಪ್ರಶ್ನಿಸಿದರು. ನಾಗರಾಜಪ್ಪ ಇತರೆ ಮುಖಂಡರು ಪುರಸಭೆ ಕ್ರಮದ ಬಗ್ಗೆ ತೀವ್ರ ಆಕ್ರೋಶ ಹೊರಹಾಕಿದ್ದು ಈವೇಳೆ ಸಮಾಜ ಸೇವಕ ಕನ್ನಮೇಡಿ ಲೋಕೆಶ್ ಇದ್ದರು. ಈಗಾಗಲೆ ನೋಟಿಸ್ ನೀಡಲಾಗಿತ್ತು.