Saturday, 23rd November 2024

ಸೋಲಿನಲ್ಲಿ ಸನ್‌ರೈಸರ್ಸ್‌ ಹ್ಯಾಟ್ರಿಕ್‌: ಬೌಲ್ಟ್‌, ಚಹರ್‌ ಸಂಘಟಿತ ದಾಳಿ

ಚೆನ್ನೈ: ಮುಂಬೈ ಇಂಡಿಯನ್ಸ್ ವಿರುದ್ಧ 13 ರನ್ನುಗಳ ಸೋಲುಂಡ ಸನ್‌ರೈಸರ್ಸ್‌ ಹೈದರಾಬಾದ್  ನಿರಾಶೆಗೊಳಗಾಗಿದೆ. ತಂಡವನ್ನು ಬಿಟ್ಟೂಬಿಡದೆ ಕಾಡುತ್ತಿರುವ ಕಳಪೆ ಮಧ್ಯಮ ಕ್ರಮಾಂಕದ ಗೋಳು ಹೆಗಲೇರಿದ್ದರಿಂದ ಟೂರ್ನಿಯಲ್ಲಿ ಸತತ 3ನೇ ಸೋಲಿಗೆ ಕೊರಳೊಡ್ಡಿ ಹತಾಶೆಗೆ ಸಿಲುಕಿತು.

ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 5 ವಿಕೆಟ್‌ಗೆ 150 ರನ್ ಪೇರಿಸಿತು.  ಪ್ರತಿಯಾಗಿ 7.2 ಓವರ್‌ಗಳಲ್ಲಿ ಮೊದಲ ವಿಕೆಟ್‌ಗೆ 67 ರನ್ ಗಳಿಸಿದ್ದ ಸನ್‌ರೈಸರ್ಸ್‌, 35 ರನ್‌ಗಳಿಗೆ ಕೊನೆಯ 7 ವಿಕೆಟ್ ಕಳೆದು ಕೊಂಡು 13 ರನ್‌ಗಳಿಂದ ಶರಣಾಯಿತು. ಮುಂಬೈನ ರಾಹುಲ್ ಚಹರ್ (19ಕ್ಕೆ 3) ಹಾಗೂ ಟ್ರೆಂಟ್ ಬೌಲ್ಟ್ (28ಕ್ಕೆ 3) ಹೈದರಾ ಬಾದ್ ಕನಸಿಗೆ ಬ್ರೇಕ್ ಹಾಕಿದರು.

ತಂಡದಲ್ಲಿ 4 ಬದಲಾವಣೆ ಸಹಿತ ಮಧ್ಯಮ ಕ್ರಮಾಂಕದಲ್ಲಿ ಹೊಸಮುಖ ವಿರಾಟ್ ಸಿಂಗ್ ಮತ್ತು ಸ್ಪಿನ್ ಆಲ್ರೌಂಡರ್ ಅಭಿಷೇಕ್ ಶರ್ಮಗೆ ಅವಕಾಶ ನೀಡಿದ್ದು ಹೈದರಾಬಾದ್‌ಗೆ ಫಲ ನೀಡಲಿಲ್ಲ. ಮನೀಷ್ ಪಾಂಡೆಯೂ 2 ರನ್‌ಗೆ ಸೀಮಿತರಾದರು. ಬೌಲಿಂಗ್‌ ನಲ್ಲಿ ಮಿಂಚಿದ್ದ ವಿಜಯ ಶಂಕರ್ ಬ್ಯಾಟಿಂಗ್‌ನಲ್ಲೂ ಕೆಲ ಕಾಲ ತಂಡ ಆಧರಿಸಿ 2 ಸಿಕ್ಸರ್ ಒಳಗೊಂಡ 28 ರನ್ ಗಳಿಸಿದರಾ ದರೂ, ತಂಡ ಗೆಲ್ಲಿಸುವ ಆಟ ಅವರಿಂದ ಬರಲಿಲ್ಲ.

ಮುಂಬೈ ಇಂಡಿಯನ್ಸ್: 5 ವಿಕೆಟ್‌ಗೆ 150 (ಕ್ವಿಂಟನ್ ಡಿ ಕಾಕ್ 40, ರೋಹಿತ್ ಶರ್ಮ 32, ಕೈರಾನ್ ಪೊಲ್ಲಾರ್ಡ್ 35*, ಮುಜೀಬ್ ರೆಹಮಾನ್ 29ಕ್ಕೆ 2, ವಿಜಯ್ ಶಂಕರ್ 19ಕ್ಕೆ 2),

ಸನ್‌ರೈಸರ್ಸ್‌ ಹೈದರಾಬಾದ್: 19.4 ಓವರ್‌ಗಳಲ್ಲಿ 137 (ಡೇವಿಡ್ ವಾರ್ನರ್ 36, ಜಾನಿ ಬೇರ್‌ಸ್ಟೋ 43, ವಿಜಯ್ ಶಂಕರ್ 28, ಟ್ರೆಂಟ್ ಬೌಲ್ಟ್ 28ಕ್ಕೆ 3, ರಾಹುಲ್ ಚಹರ್ 19ಕ್ಕೆ 3, ಜಸ್‌ಪ್ರೀತ್ ಬುಮ್ರಾ 14ಕ್ಕೆ 1).