ಮನೆ ಮುಂದೆ ನಾಯಿ ಇದೆ ಎನ್ನುವ ಬೋರ್ಡ್ ನಾವೆಲ್ಲರೂ ನೋಡಿರುತ್ತೇವೆ ಆದರೆ ಈಗ ಸ್ಯಾಂಡಲ್ ವುಡ್ ನಲ್ಲಿ ’ನಾಯಿ ಇದೆ ಎಚ್ಚರಿಕೆ’ ಎನ್ನುವ ಬೋರ್ಡ್ ಕಾಣಿಸು ತ್ತಿರುವುದು ಕುತೂಹಲ ಮೂಡಿಸಿದೆ. ಸದ್ಯಕ್ಕೆ ಈಗ ಜರ್ಮನ್ ಶಫರ್ಡ್ ಬ್ರೀಡ್ನ
ಕಪ್ಪುಚಿರತೆಯಂತಿರುವ ಕೆಂಪು ಕಣ್ಣಿನ ರೂಬಿ’ಯದ್ದೇ ಸದ್ದು.
ನಾಯಿ ಇದೆ ಎಚ್ಚರಿಕೆ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ರೂಬಿ ನಟಿಸುತ್ತಿರು ವುದು ವಿಶೇಷ. ವೈರಸ್ ಆಧಾರಿತ ಕಥಾ ಹಂದರವಿರುವ ಸಿನಿಮಾ ಇದಾಗಿದ್ದು, ಸ್ಯಾಂಡಲ್ ವುಡ್ನಲ್ಲೇ ಈ ರೀತಿಯ ಕಥೆ ಮೊದಲ ಬಾರಿಗೆ ನಿರ್ಮಾಣವಾಗುತ್ತಿದೆ ಎನ್ನುತ್ತಾರೆ ನಿರ್ಮಾಪಕ ಪ್ರಬಿಕ್ ಮೊಗವೀರ್.
ಶ್ವಾನಪ್ರಿಯರಾದ ಸ್ವಾಮಿ ಅವರ ಬಳಿ ನಾಯಿಯನ್ನು ತೆಗೆದುಕೊಳ್ಳಲಾಗಿದೆ. ಅದರ ನಟನೆಯನ್ನು ನೀವು ಪರದೆಯ ಮೇಲೆ ನೋಡಿದರೆ ನಿಜಕ್ಕೂ ಬೆರಗಾಗುತ್ತೀರಾ ಎನ್ನು ತ್ತಾರೆ ಪ್ರಬಿಕ್. ಕಪ್ಪು ಬಣ್ಣದ ನಾಯಿ ರೂಬಿ ಕೆಂಪು ಕಣ್ಣುಗಳನ್ನು ಬಿಟ್ಟು ಕೊಂಡು ದುರುಗುಟ್ಟಿ ನೋಡುತ್ತಿರುವ ಈ ಸಿನಿಮಾದ ಪೋಸ್ಟರ್ ಈಗಾಗಲೇ ಸಖತ್ ವೈರಲ್ ಆಗಿದೆ. ವೈರಸ್ ಆಧಾರಿತ ಕಥೆ ಇರುವ ಈ ಸಿನಿಮಾದಲ್ಲಿ ನಾಯಿಗೆ ಏನು ಕೆಲಸ ಎಂದು ಕೇಳಿದರೆ, ಈ ಸಿನಿಮಾದಲ್ಲಿ ನಾಯಿಯ ಪಾತ್ರ ತುಂಬಾ ಭಿನ್ನವಾಗಿದೆ.
ಅದರಲ್ಲೂ ಇದೊಂದು ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾ. ಇದರಲ್ಲಿ ನಾಯಿ ನಿಮ್ಮನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುವುದೂ ಅಲ್ಲದೇ ಒಂದು ಒಳ್ಳೆಯ ಸಾಮಾಜಿಕ ಸಂದೇಶವನ್ನೂ ಸಾರಲಿದೆ’ ಎಂದು ಸಂತಸದಿಂದ ನುಡಿಯುತ್ತಾರೆ ನಿರ್ಮಾಪಕರು. ತನಿಖೆ ಮೂಲಕ ಎಂಟ್ರಿ ಕೊಟ್ಟಿದ್ದ ನಿರ್ದೇಶಕ ಜಿ.ಎಸ್. ಕಲಿಗೌಡ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ.
ಸಿನಿಮಾದಲ್ಲಿ ಮನರಂಜನೆಗೆ ಕೊರತೆ ಇಲ್ಲ. ವೈಸರ್ನಿಂದಾಗುವ ತೊಂದರೆಗಳ ಬಗ್ಗೆ ಈಗ ಜನರು ಎದುರಿಸುತ್ತಿರುವ ಸಮಸ್ಯೆ
ಗಿಂತ ಈ ಸಿನಿಮಾದ ಕಥೆ ಸ್ವಲ್ಪ ಭಿನ್ನವಾಗಿದೆ’ ಎನ್ನುವುದು ನಿರ್ದೇಶಕ ಕಲಿಗೌಡರ ಮಾತು.
ಸಿನಿಮಾದಲ್ಲಿ ಬಹುತಾರಾ ಗಣವಿದೆ. ಕ್ರಿಸ್ಟೋಫರ್ ಅವರ ಸಂಗೀತ ನಿರ್ದೇಶನದಲ್ಲಿ ಹಾಡುಗಳು ಮೂಡಿಬರುತ್ತಿವೆ. ಶ್ಯಾಮ್ ಸಿಂಧನೂರು ಛಾಯಾಗ್ರಹಣ, ಧನು ಕೃಷ್ಣ ಸಂಕಲನ ಈ ಚಿತ್ರಕ್ಕಿದೆ.