ಬೆಂಗಳೂರು: ಸತತ ನಾಲ್ಕು ಗೆಲುವನ್ನು ದಾಖಲಿಸಿದ್ದ ಆರ್ಸಿಬಿ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲುಂಡ ಬೆನ್ನಲ್ಲೇ ಮತ್ತೊಂದು ಶಾಕ್ ಎದುರಾಗಿದೆ. ಸಾಗರೋತ್ತರ ಆಟಗಾರರಲ್ಲಿ ಇಬ್ಬರು ಸ್ವದೇಶಕ್ಕೆ ಮರಳುವುದಾಗಿ ತಿಳಿಸಿದೆ.
ಆಸ್ಟ್ರೇಲಿಯಾ ಕ್ರಿಕೆಟಿಗರಾದ ಕೇನ್ ರಿಚರ್ಡ್ಸನ್ ಹಾಗೂ ಆಡಮ್ ಜಂಪಾ ಐಪಿಎಲ್ 2021ರ ಆಟವನ್ನು ಅರ್ಧದಲ್ಲೇ ಬಿಟ್ಟು ಆಸ್ಟ್ರೇಲಿಯಾಕ್ಕೆ ಮರಳಲಿದ್ದಾರೆ. ಆಸ್ಟ್ರೇಲಿಯಾದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಆ ಹಿನ್ನೆಲೆಯಲ್ಲಿ ಖಾಸಗಿ ಕಾರಣಗಳಿಂದ ಆಟಗಾರರು ಮರಳುತ್ತಿರುವುದಾಗಿ ಫ್ರ್ಯಾಂಚೈಸಿ ತಿಳಿಸಿದೆ. ಭಾನುವಾರ ರಾಜಸ್ಥಾನ ರಾಯಲ್ಸ್ ತಂಡದ ಆಂಡ್ರ್ಯೂ ಟೈ ಕೂಡ ಇದೇ ರೀತಿ ಐಪಿಎಲ್ ಬಿಟ್ಟು ಅವರ ದೇಶಕ್ಕೆ ವಾಪಾಸು ಹೋಗಿದ್ದರು.
ಇಬ್ಬರು ಆಟಗಾರರು ಮರಳುತ್ತಿರುವುದರಿಂದ ಆರ್ಸಿಬಿ ಅಷ್ಟೊಂದು ದೊಡ್ಡ ಲಾಸ್ ಏನು ಆಗುವುದಿಲ್ಲ. ಈ ಸಲದ ಐಪಿಎಲ್ನಲ್ಲಿ ಆರ್ಸಿಬಿ ಪರ ರಿಚರ್ಡ್ಸನ್ ಒಂದು ಮ್ಯಾಚ್ ಆಡಿದ್ದರು.