Saturday, 26th October 2024

ಗುಳೆ ಹೋಗಿ ಮತ್ತೆ ತಾಲೂಕಿನತ್ತ ಬರುವ ಜನರ ವೀಕ್ಷನೆಗೆ ಚೆಕ್’ಪೋಸ್ಟ್

ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ ಮನವಿ

ಪಾವಗಢ: ತಾಲೂಕಿನಿಂದ ಬೇರೆಡೆಗೆ ದುಡಿಯಲು ಸುಮಾರು ಐವತ್ತು ಸಾವಿರ ಜನ ಗುಳೆ ಹೋಗಿದ್ದಾರೆ. ಈ ಹಿನ್ನೆಲೆ ಯಲ್ಲಿ ಕೋವಿಡ್ ಎರಡನೇ ಅಲೆಯಿಂದ ಪಾವಗಢ ತಾಲ್ಲೂಕಿನಲ್ಲಿ ಪ್ರತಿದಿನ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣ ರಾಜ್ಯ ಸರ್ಕಾರ ಮತ್ತೆ 15 ದಿನ ಲಾಕ್ಡೌನ್ ಘೋಷಣೆ ಮಾಡಿರುವುದರಿಂದ, ಪಾವಗಢದಿಂದ ಬೇರೆಡೆಗೆ ದುಡಿಯಲು ಗುಳೆ ಹೋದ ಜನರು ಮತ್ತೆ ಪಾವಗಡ ತಾಲ್ಲೂಕಿನತ್ತ ಬರುವ ಕಾರಣ ಚೆಕ್ ಪೋಸ್ಟ್ ನಿರ್ಮಾಣ ಮಾಡಿ ಸ್ಥಳದಲ್ಲಿಯೇ ಕೋವಿಡ್ ಪರೀಕ್ಷೆ ಮಾಡುವುದರಿಂದ ಇಲ್ಲಿನ ಅಧಿಕಾರಿಗಳಿಗೆ ಬಹಳಷ್ಟು ಅನುಕೂಲ ಆಗಬಹುದಲ್ಲವೆ ಎಂಬುದು ನನ್ನ ಅನಿಸಿಕೆ ಎಂದು ಹೆಚ್.ಆರ್.ಎ.ಸಿ.ಎಫ್.ಅಧ್ಯಕ್ಷ ಇಮ್ರಾನ್ ತಿಳಿಸಿದ್ದಾರೆ.

ಗುಳೆ ಹೋಗಿ ಮತ್ತೆ ಗ್ರಾಮೀಣ ಪ್ರದೇಶಗಳಲ್ಲಿ ಬಂದರೆ ಕೋವಿಡ್ ಪರೀಕ್ಷೆಗೆ ಯಾರು ಹೆಚ್ಚಿನದಾಗಿ ಸಹಕರಿಸುವುದಿಲ್ಲ. ಏಕೆಂದರೆ ಹೋದ ಬಾರಿ ಸಹ ಇಂತಹ ಸಂದರ್ಭಗಳಲ್ಲಿ ಅಧಿಕಾರಿಗಳು ಹರಸಾಹಸ ಪಡುವಂತಹದ್ದು ಸನ್ನಿವೇಶ ಗಳನ್ನು ಎಲ್ಲರೂ ನೋಡಿದ್ದಾರೆ. ಹಾಗಾಗಿ ಮುಂಜಾಗೃತಾ ಕ್ರಮವಾಗಿ ಅಧಿಕಾರಿಗಳು ಎಚ್ಚೆತ್ತು ಕೊಳ್ಳಬೇಕು ಮುಂಬ ರುವ ಸಮಸ್ಯೆಗಳಿಗೆ ಹಿನ್ನೆಲೆ ಪರಿಹರಿಸುವ ಕೆಲಸ ಮಾಡಬೇಕೆಂಬುದು ನಮ್ಮ ಸಂಸ್ಥೆಯ ಒಂದು ಆಶಯವಾಗಿದೆ.

ಈ ಭಾಗದಲ್ಲಿ ಮೂರು ಕಡೆ ಗಡಿಭಾಗದ ಆಂಧ್ರ ಇರುವುದರಿಂದ ಹೆಚ್ಚಿನ ಜನರ ಬರುವುದು ವಾಡಿಕೆ. ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿರುವುದರಿಂದ ಅಧಿಕಾರಿಗಳು ನಿಭಾಯಿಸಲು ಕಷ್ಟಕರವಾಗಿದೆ ಅದರಿಂದಾಗಿ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು ಎಂದರು.

ಆಂದ್ರದ ಗಡಿ ಇರುವುದರಿಂದ ಆಂದ್ರದಲ್ಲಿ ಮದ್ಯ ನಿಷೇಧ ಮಾಡಿರುವುದರಿಂದ ಹೆಚ್ಚಿನ ಜನ ಕರ್ನಾಟಕ ಗಡಿಭಾಗಕ್ಕೆ ಬಂದು ಮದ್ಯ ಕೊಳ್ಳುವ ಪ್ರಕರಣಗಳು ಹೆಚ್ಚಾಗಿದೆ ಅದರಿಂದ ಗಡಿಭಾಗದಲ್ಲಿ ಮೊದಲು ಚೆಕ್ಪೋಸ್ಟ್ ನಿರ್ಮಾಣ ಮಾಡಬೇಕೆಂಬುದು ಜಿಲ್ಲಾಧಿಕಾರಿ ಹಾಗೂ ಸ್ಥಳೀಯ ತಹಶಿಲ್ದಾರ್ ರವರಿಗೆ ಮನವಿ ಮಾಡುತ್ತಿದ್ದೇವೆ.

ಪೋಟೋ.:ಆಂದ್ರದ ಗಡಿ ಭಾಗದಲ್ಲಿ ಕಳೆದ ಬಾರಿ ಹಾಕಿದ ಚಕ್ ಪೋಸ್ಟ್ ಇಲ್ಲಿಯವರೆಗೆ ತೆಗೆಯದೆ ಹಾಗೆ ಇದೆ ಇದನ್ನು ಗಮನಿಸಿದರೆ ಮುಂಜಾಗ್ರತೆ ಕ್ರಮವನ್ನು ಉತ್ತಮವಾಗಿ ನಿರ್ವಹಣೆ ಮಾಡಲಾಗಿದೆ ಎಂಬುದಾಗಿ ತಿಳಿಯು ತ್ತಿದೆ.