ರಾಯಪುರ: ಕೋವಿಡ್ ನಿಂದಾಗಿ, 12 ನೇ ತರಗತಿಯ ಪರೀಕ್ಷೆಗಳನ್ನು ಮನೆಯಿಂದಲೇ ನಡೆಸಲು ಛತ್ತೀಸ್’ಗಢ ಪ್ರೌಢ ಶಿಕ್ಷಣ ಮಂಡಳಿ ತೀರ್ಮಾನಿಸಿದೆ.
ಈ ಮಾದರಿಯಲ್ಲಿ ವಿದ್ಯಾರ್ಥಿಗಳು ನಿಗದಿತ ಕೇಂದ್ರಗಳಿಂದ ಪ್ರಶ್ನೆ ಪತ್ರಿಕೆಗಳು ಮತ್ತು ಖಾಲಿ ಉತ್ತರ ಪತ್ರಿಕೆಗಳನ್ನು ಸಂಗ್ರಹಿಸಿ, ಮನೆಗೆ ತೆಗೆದುಕೊಂಡು ಹೋಗಿ ಐದು ದಿನದಲ್ಲಿ ಉತ್ತರ ಬರೆದು ಸಲ್ಲಿಸಲು ತಿಳಿಸಲಾಗಿದೆ.
ಜೂನ್ 1 ರಿಂದ 5 ರವರೆಗೆ 5 ದಿನಗಳ ಕಾಲ ಕಾಲಾವಕಾಶ ನೀಡಲಾಗುತ್ತದೆ. 2.86 ಲಕ್ಷ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನ ದಲ್ಲಿಟ್ಟುಕೊಂಡು ಮಂಡಳಿ ಜೂನ್ 1 ರಿಂದ 12ನೇ ತರಗತಿ ಪರೀಕ್ಷೆಗಳನ್ನು ಮನೆಯಿಂದಲೇ ನಡೆಸಲು ಮುಂದಾಗಿದೆ.
ಜೂನ್ 1 ರಿಂದ 5 ನೇ ತಾರೀಖಿನ ನಡುವೆ ಯಾವುದೇ ದಿನದಂದು ಪ್ರಶ್ನೆಪತ್ರಿಕೆಗಳನ್ನು ಸಂಗ್ರಹಿಸಬಹುದು. ಆದರೆ, ಪ್ರಶ್ನೆ ಪತ್ರಿಕೆ ಮತ್ತು ಖಾಲಿ ಉತ್ತರ ಪತ್ರಿಕೆ ಪಡೆದುಕೊಂಡ ದಿನದಿಂದ 5 ದಿನಗಳ ಒಳಗೆ ಆಯಾ ಕೇಂದ್ರಗಳಲ್ಲಿ ಉತ್ತರ ಪ್ರತಿಗಳನ್ನು ಸಲ್ಲಿಸಬೇಕಿದೆ.