Monday, 6th January 2025

ಪ್ರಣೀತಾ ಸರಳ ಮದುವೆ

ಬಹುಭಾಷಾ ಚಿತ್ರನಟಿ ಪ್ರಣೀತಾ ಅವರು ಮೇ 30ರಂದು ನಿತಿನ್ ರಾಜ್ ಅವರನ್ನು ವಿವಾಹವಾಗಿದ್ದಾರೆ.

ಪೊರ್ಕಿ, ಭೀಮಾ ತೀರದಲ್ಲಿ, ಬ್ರಹ್ಮ, ಮಾಸ್ ಲೀಡರ್ ಮೊದಲಾದ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಪ್ರಣೀತಾ ತೆಲುಗು ಮತ್ತು ತಮಿಳು ಚಿತ್ರಗಳಲ್ಲೂ ನಟಿಸಿ, ಹೆಸರು ಮಾಡಿದ್ದರು. ಕರೋನಾ ಸೋಂಕಿನ ವಿರುದ್ಧ ಲಾಕ್‌ಡೌನ್ ಇರುವುದರಿಂದಾಗಿ, ಸೀಮಿತ
ಸಂಖ್ಯೆಯ ಬಂಧು ಮತ್ತು ಮಿತ್ರರ ಸಮ್ಮುಖದಲ್ಲಿ ವಿವಾಹವಾದ ಪ್ರಣೀತಾ ಅವರು, ಮದುವೆಯ ನಂತರ ಇನ್ಸ್ಟಾಗ್ರಾಂನಲ್ಲಿ ಈ ಶುಭಸುದ್ದಿಯನ್ನು ತನ್ನ ಅಭಿಮಾನಿಗಳಿಗೆ ತಿಳಿಸಿದರು.

ನವದಂಪತಿಗಳು ಕಳಿಸಿದ ಈ ಸಂದೇಶದಲ್ಲಿ, ಕೊನೆಯ ಕ್ಷಣದ ತನಕ ಮದುವೆಯ ದಿನಾಂಕದ ಕುರಿತು ಗೊಂದಲವಿದ್ದು ದರಿಂದಾಗಿ ಅಭಿಮಾನಿಗಳಿಗೆ ತಿಳಿಸಲು ಆಗಲಿಲ್ಲ ಎಂದು ತಿಳಿಸಿದ್ದು, ಅದಕ್ಕಾಗಿ ಸಿನಿಪ್ರೆಮಿಗಳ ಕ್ಷಮೆ ಕೋರಿದ್ದಾರೆ. ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾಗಳ ಜತೆ, ಮುಂದಿನ ದಿನಗಳಲ್ಲಿ ಹಂಗಾಮಾ 2 ಮೊದಲಾದ ಹಿಂದಿ ಸಿನಿಮಾಗಳಲ್ಲೂ ಇವರು ನಟಿಸುವ ಸುದ್ದಿಹೊರಬಿದ್ದಿದೆ.

Leave a Reply

Your email address will not be published. Required fields are marked *