Monday, 25th November 2024

ದ್ವಿತೀಯ ಪಿಯುಸಿ ಪರೀಕ್ಷೆ ರದ್ದು: ಸುರೇಶ್‌ ಕುಮಾರ್‌

ಬೆಂಗಳೂರು: ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ ಎಂದು ಸಚಿವ ಸುರೇಶ್‌ ಕುಮಾರ್‌ ಶುಕ್ರವಾರ ಹೇಳಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆಗಳನ್ನು ನಡೆಸದಿರುವುದಕ್ಕೆ ತೀರ್ಮಾನ ತೆಗೆದುಕೊಂಡಿದ್ದೇವೆ. ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆ ಇಲ್ಲದೆನೇ ಯಾವ ರೀತಿ ಗ್ರೇಡಿಂಗ್‌ ಕೊಡಬಹುದು, ಕಲಿಕಾ ಮಟ್ಟದ ಬಗ್ಗೆ ಯೋಚನೆ ಮಾಡಿದ್ದೇವೆ. ರದ್ದು ಮಾಡಿದ ರಾಜ್ಯಗಳನ್ನು ಸಂಪರ್ಕ ಮಾಡಿ ರಿಸಲ್ಟ್‌ ಹೇಗೆ ಮಾಡುತ್ತೀರಿ ಎಂದು ಕೇಳಿದ್ದೇವೆ.

ನಮ್ಮ ರಾಜ್ಯದಲ್ಲಿ ಈ ವರ್ಷದ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ರದ್ದು ಮಾಡಲಾಗಿದೆ. ಆ ಎಲ್ಲಾ ಮಕ್ಕಳಿಗೆ ಕಳೆದ ವರ್ಷ ಮೊದಲ ವರ್ಷದ ಪಿಯುಸಿಯನ್ನು ಡಿಸ್ಟ್ರಿಕ್ಟ್‌ ಲೆವೆಲ್‌ ಆಗಿ ಎದುರಿಸಿದ್ದರು. ಅದರ ಆಧಾರದ ಮೇಲೆ ಗ್ರೇಡಿಂಗ್‌ ಕೊಡುತ್ತೇವೆ. ಈ ಗ್ರೇಡೇಷನ್‌ ಸಮಾಧಾನ ಇಲ್ಲ, ತುಂಬಾ ಓದಿದ್ದೇನೆ. ತುಂಬಾ ಪರಿಶ್ರಮ ಪಟ್ಟಿದ್ದೇನೆ ಎನ್ನುವ ಮಕ್ಕಳ ಸಂಖ್ಯೆ ಇದೆ. ಈ ರೀತಿ ಮಕ್ಕಳು ವ್ಯಕ್ತ ಮಾಡಿದರೆ ಕೋವಿಡ್‌ ಮುಗಿದ ಮೇಲೆ ಆ ಮಕ್ಕಳಿಗೆ ಪರೀಕ್ಷೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತೇವೆ. ಈಗ ದ್ವಿತೀಯ ಪಿಯುಸಿ ಮಕ್ಕಳು ಪ್ರಮೋಟೆಡ್‌ ಎಂದು ಮಾಡಿದ್ದೇವೆ. ಬೇರೆ ಬೇರೆ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡವರು ಚಿಂತಿಸುವ ಅಗತ್ಯವಿಲ್ಲ ಎಂದರು.

ಕಳೆದ ಬಾರಿ ಕೋವಿಡ್ ಸವಾಲಿನ ನಡುವ SSLC, PUC ಪರೀಕ್ಷೆ ನಡೆಸಲಾಗಿತ್ತು. ಆದರೆ ಈ ವರ್ಷ ವಿಭಿನ್ನ ಪರಿಸ್ಥಿತಿ ಭಿನ್ನವಾಗಿ ರುವುದರಿಂದ ಶಿಕ್ಷಣ ಇಲಾಖೆ ಮಾಜಿ ಸಚಿವರು, ತಜ್ಞರು, ಶಾಸಕರೊಂದಿಗೆ ಚರ್ಚಿಸಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಒಟ್ಟಿನಲ್ಲಿ, ಮೊದಲಿಗೆ ದ್ವಿತಿಯ ಪಿಯುಸಿ ಪರೀಕ್ಷೆಗಳನ್ನು ಈ ವರ್ಷ ನಡೆಸದಿರಲು ತೀರ್ಮಾನಿಸಲಾಗಿದೆ.