ಅಂಡರ್ವರ್ಲ್ಡ್ನಲ್ಲಿ ಅಣ್ಣ ಅನ್ನಿಸಿಕೊಳ್ಳೋಕೆ ಅಣ್ಣ ಅನ್ನೋನ ಎತ್ತಬೇಕು, ಇಲ್ಲ ಉಳಿಸಬೇಕು, ಬದುಕಿದ್ರೆ ಭಿಕ್ಷೆ ಬೇಡಿಕೊಂಡು ಬದುಕಬಹುದು.
ಅವನ್ನ ಎದುರು ಹಾಕಿಕೊಂಡು ಬದುಕೋಕೆ ಆಗುತ್ತಾ, ನಿಯತ್ತು ಇಲ್ದೋನಿಗೆ ನೀತಿ ಹೇಳಿಕೊಡೋದು ಗೂಬೆಗೆ ಸಂಗೀತ ಕಛೇರಿ ನಡೆಸಿದಂತೆ ಇಂತಹ ಪವರ್ ಫುಲ್, ಮಾಸ್ ಡೈಲಾಗ್ಸ್ ಕೇಳಿದೊಡನೆ ಇದೊಂದು ಸ್ಟಾರ್ ನಟನ ಚಿತ್ರ ಅಂದುಕೊಂಡರೆ ನಿಮ್ಮ ಊಹೆ ತಪ್ಪಾಗುತ್ತದೆ. ಚಂದನವನಕ್ಕೆ ಹೊಸ ಪ್ರತಿಭೆ ಗಳೇ ಸೇರಿಕೊಂಡು ಸಿದ್ದಪಡಿಸುವ ಹಿಟ್ಲರ್ ಸಿನಿಮಾದಲ್ಲಿ ಬರುವ ಸಂಭಾ ಷಣೆಗಳು ಇದಾಗಿವೆ.
ಇದು ಕೇವಲ ಸ್ಯಾಂಪಲ್. ಬಾಕಿ ಅಬಿ ಪಿಕ್ಚರ್ ಮೇ ಅಂತ ತಂಡವು ಹೇಳಿ ಕೊಂಡಿದೆ. ಕೆಜಿಎಫ್ ಚಿತ್ರಕ್ಕೆ ಅಮ್ಮನ ಕುರಿತಂತೆ ಹಾಡು ಬರೆದಿರುವ ಕಿನ್ನಾಳ್ರಾಜ್ ಪ್ರಥಮ ಅನುಭವ ಎನ್ನುವಂತೆ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಇವರ ಹುಟ್ಟಹಬ್ಬದಂದು ಡೈಲಾಗ್ ಟ್ರೇಲರ್ ಬಿಡುಗಡೆ ಮಾಡಲಾಗಿದೆ. ಮೊದಲ ದಿನವೇ ಮೂವತ್ತೈದು ಸಾವಿರಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ನಾಯಕನಾಗಿ ಲೋಹಿತ್ ನಟಿಸಿದ್ದು, ಇವರೊಂದಿಗೆ ನಾಯಕಿಯಾಗಿ ಸಸ್ಯಾ ಅಭಿನಯಿಸಿದ್ದಾರೆ.
ಬಲರಾಜವಾಡಿ, ವೈಭವ್ ನಾಗರಾಜ್, ವಿಜಯ್ ಚಂಡೂರ್, ಶಶಿಕುಮಾರ್, ವೇದ ಹಾಸನ್, ಗಣೇಶ್ ರಾವ್ ಮುಂತಾದವರು ನಟಿಸಿದ್ದಾರೆ. ಸಂಗೀತ ಆಕಾಶ್ ಪರ್ವ, ಛಾಯಾಗ್ರಹಣ ಜಿ.ವಿ.ನಾಗರಾಜ್ ಕಿನ್ನಾಳ, ಸಂಕಲನ ಗಣೇಶ್ ತೋರಣಗಲ್, ಸಾಹಸ ಚಂದ್ರುಬಂಡೆ ಅವರದಾಗಿದೆ. ಗಾನಶಿವ ಮೂವೀಸ್ ಮೂಲಕ ಮಮತಾ ಲೋಹಿತ್ ಚಿತ್ರ ನಿರ್ಮಾಣಕ್ಕೆ ಬಂಡವಾಳ ಹೂಡಿ ದ್ದಾರೆ. ಚಿತ್ರೀಕರಣ ಮುಗಿಸಿರುವ ಚಿತ್ರವೂ ಸದ್ಯದಲ್ಲೇ ಸೆನ್ಸಾರ್ ಅಂಗಳಕ್ಕೆ ಹೋಗಲಿದೆ.