ಶಿವನಿಗೆ ನಾನಾ ರೀತಿಯ ಹೆಸರುಗಳಿಂದ ಕರೆಯುತ್ತಾರೆ. ಅದರಲ್ಲಿ ಕಾಲಾಂತಕ ಸಿನಿಮಾವು ಸೇರಿಕೊಂಡಿದೆ. ಅದೇ ರೀತಿ ಸಮಯ ಮತ್ತು ಸನ್ನಿವೇಶ ಬಳಸಿಕೊಂಡು ಚಿತ್ರದಲ್ಲಿ ಯಾರು ಕಾಲಾಂತಕರಾಗುತ್ತಾರೆ ಎಂಬುದೇ ಚಿತ್ರದ ಸ್ಟೋರಿ.
ಕಥೆಯು ಅಬಚೂರು ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುತ್ತದೆ. ಪೆನ್ನು ಬರಹ, ಸಿಗರೇಟು, ಗಾಂಜ ಇವೆಲ್ಲವು ಕಥೆಯಲ್ಲಿ ಪ್ರಮು ಖವಾಗಿ ಬರುವುದರಿಂದ ಪೋಸ್ಟರ್‌ನಲ್ಲಿ ಇದನ್ನೆ ತೋರಿಸಲಾಗಿದೆ. ಚಿತ್ರದಲ್ಲಿ ನಿರ್ದೇಶಕನಾಗಿ ಕೆ.ಎಸ್.ಶ್ರೀಧರ್, ಪೆಡ್ಲರ್
ಪಾತ್ರದಲ್ಲಿ ಯಶ್‌ವಂತ್‌ಶೆಟ್ಟಿ, ಕೆಜಿಎಫ್ ಚಿತ್ರದಲ್ಲಿ ತಾಯಿಯಾಗಿ ಕಾಣಿಸಿಕೊಂಡಿದ್ದ ಅರ್ಚನಾ ಜೋಯಿಸ್ ಲೇಖಕಿಯಾಗಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.
ಶನಿ ಧಾರವಾಹಿಯಲ್ಲಿ ಇಂದ್ರನಾಗಿ ಅಭಿನಯಿಸಿದ್ದ ಕಾರ್ತಿಕ್ ಸಮಗ ನಟನಾಗಿ, ಬಣ್ಣಹಚ್ಚಿದ್ದಾರೆ. ಉಳಿದಂತೆ ಸುಷ್ಮಿತಾ ಜೋಷಿ, ಧರ್ಮೇಂದ್ರ ಅರಸ್ ಮುಂತಾದವರು ನಟಿಸಿದ್ದಾರೆ. ಚಿಕ್ಕಮಗಳೂರು ಸುತ್ತಮುತ್ತ ಸುಂದರ ತಾಣದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅಂಬರೀಷ.ಎಂ ಕಥೆ ಚಿತ್ರಕಥೆ ರಚಿಸಿ, ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಜಯಂತ್ ಕಾಯ್ಕಣಿ, ಕಿನ್ನಾಳ್ ರಾಜ್ ಅವರ ಸಾಹಿತ್ಯದ ಎರಡು ಗೀತೆಗಳಿಗೆ ಜ್ಯೂಡಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ.
ನಿರ್ಮಾಪಕ ಶಾಂತಕುಮಾರ್, ಚಿತ್ರಕ್ಕೆ ಬಂಡವಾಳ ಹೂಡಿದ್ದು, ನಿರ್ಮಾಣದ ಜವಾಬ್ಧಾರಿ ಹೊತ್ತುಕೊಂಡಿದ್ದಾರೆ. ಭಾಸ್ಕರ ಮೂವಿ ಲೈನ್ಸ್ ಮುಖಾಂತರ ಚಿತ್ರವು ಸಿದ್ದಗೊಂಡಿದ್ದು ಲಾಕಡೌನ್ ಬಳಿಕ ಚಿತ್ರ ತೆರೆಗೆ ಬರಲಿದೆ.